ಮಂಡ್ಯ ಜಿಲ್ಲೆ ಕೆ ಅರ್ ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮ ಈ ಗ್ರಾಮಕ್ಕೆ ೧೫೦೦ ವರ್ಷಗಳ ಇತಿಹಾಸವಿದೆ.
ಈ ಗ್ರಾಮದಲ್ಲಿ ೧೫೦೦ ವರ್ಷದ ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಇದೆ. ಈ ಗ್ರಾಮವು ದಲ್ಲಿ ಸರ್ಕಾರದ ಆಸ್ಪತ್ರೆ ಇದ್ದು ಇದು ಕೇವಲ ಬರಿ ಹೆಸರಿಗೆ ಮಾತ್ರವೇ ಆಸ್ಪತ್ರೆಯಾಗಿದ್ದು ಇಲ್ಲಿ ದಿನನಿತ್ಯ ನೂರಾರು ರೋಗಿಗಳು, ಗರ್ಭಿಣಿ ಯರು,ಬಂದು ಬರಿ ನಾಮಪಲಕವನ್ನು ನೋಡಿ ಹೊರಗಡೆ ಪಕ್ಕದ ಜಿಲ್ಲೆಯ ಶ್ರವಣಬೆಳಗೊಳದ ಸರ್ಕಾರಿ ಆಸ್ಪತ್ರೆಗೆ ಹೊಗುವ ಪರಿಸ್ಥಿತಿ ಇದೆ .
ಇಲ್ಲಿ ಕೆಲಸಮಾಡಲು ಒಬ್ಬರು ಗುತ್ತಿಗೆ ಆಧಾರದ ಮೇಲೆ ಪಡೆದ ವೈದ್ಯರನ್ನು ನೇಮಿಸಿ ಮತ್ತು ಯಾವುದೇ ದಾದಿಯರು ,ಸ್ವಚ್ಛತ ಸಿಬ್ಬಂದಿಗಳನ್ನು ಸಹ ನೇಮಿಸಿಲ್ಲಾ ಇಲ್ಲಿ ಒಟ್ಟು ನಾಲ್ಕು ಕಟ್ಟಡಗಳಿದ್ದು ,ಬರಿ ಒಂದೆ ಒಂದು ಪ್ರಾಥಮಿಕ ಚಿಕಿತ್ಸೆ ನೀಡುವ ಕೊಠಡಿ ಮಾತ್ರವೇ ಉಪಯೋಗಿಸುತ್ತಾರೆ.
ಇನ್ನೂ ಉಳಿದಂತೆ ಹೆರಿಗೆ ವಿಭಾಗ ಹೆಸರಿಗೆ ಮಾತ್ರವೇ ಇದ್ದು ಇದು ಬರಿ ಖಾಲಿ ಬಿದ್ದಿದೆ. ಮತ್ತು ವೈದ್ಯರ ವಿಶ್ರಾಂತಿ ಗೃಹಗಳು ಮತ್ತು ದಾದಿಯರ ವಸತಿ ಗೃಹಗಳು ಪುಂಡಪೊಕರ ಮತ್ತು ಅನೈತಿಕ ಚಟುವಟಿಕೆಗಳ ಗುಡಾಗಿವೆ.
ಜನರ ತೆರಿಗೆ ಹಣವನ್ನು ಖರ್ಚು ಮಾಡಿ ಕಟ್ಟಿಸಿದ ಕಟ್ಟಡ ಗಳನ್ನು ಈ ರೀತಿ ಪಾಳು ಬೀಡಲಾಗಿದೆ. ಮತ್ತು ಇಲ್ಲಿ ಯಾವುದೆ ಸ್ವಚ್ಛತೆ ಇಲ್ಲದೆ ಕೊಳೆತು ನಾರುತಿವೆ.
ಇಲ್ಲಿ ದಿನನಿತ್ಯ ಬೆಳ್ಳಿಗೆ 10 ರಿಂದ ಸಂಜೆ 3ರ ತನಕ ಮಾತ್ರವೇ ಇರುವುದು ನಂತರ ಬಾಗಿಲು ಮುಚ್ಚುತ್ತದೆ .ನಂತರ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳೆ ಗತಿ.
ಕೂಡಲೆ ಅಧಿಕಾರಿಗಳು ಇಲ್ಲಿ ಗಮನಹರಿಸಿ ಹೆರಿಗೆ ವಿಭಾಗ ಮತ್ತು 24ಗಂಟೆಗಳ ವೈದ್ಯರ ವ್ಯವಸ್ಥೆ ಮಾಡಬೇಕು ಎಂದು ಅಘಲಯ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಊರುಗಳ ಗ್ರಾಮಸ್ಥರು ಕಿಡಿಕಾರಿದ್ದರೆ
ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಘಲಯ ಗ್ರಾಮದ "ಶ್ರಿ ಭೈರವೇಶ್ವರ ಯುವಕ "ಸಂಘದ ಯುವಕರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಲಿ ಮತ್ತು ಜನಪ್ರತಿನಿದಿಗಳು ಬರಿ ಓಟು ಕೇಳುವಾಗ ಮಾತ್ರ ಜನರಬಳಿಹೊಗುವುದ ಬಿಟ್ಟು ಜನರ ಕಷ್ಟ ಕ್ಕೆ ಸ್ಪಂದಿಸಿ
Last modified on 19/07/2018