ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರ : ಉಪಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿ

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸಧ್ಯದಲ್ಲಿಯೇ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಹೋರಾಟ ನೀಡಲಾಗುವುದು... ದೇಶದ ಅತೀ ದೊಡ್ಡ 3ನೇ ಪಕ್ಷವಾಗಿರುವ ಬಿ.ಎಸ್.ಪಿ ಅಭ್ಯರ್ಥಿಯನ್ನು ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಗೆಲ್ಲಿಸಿ ಆಶೀರ್ವದಿಸಬೇಕು ಎಂದು ರಾಜ್ಯ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು...ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಅಕ್ಕ ಮಾಯಾವತಿ ಅವರು ಬೆಂಬಲಿಸಿದ್ದರು. ಬದಲಾಗಿರುವ ರಾಜಕಾರಣದಿಂದಾಗಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 17ಸ್ಥಾನಗಳಲ್ಲಿಯೂ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹೋರಾಟ ನೀಡಲಾಗುವುದು ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನಡೆಯುವುದು ಶತಸಿದ್ಧವಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆಯ ಕಡೆಗೆ ಗಮನಹರಿಸಿ ಆನೆಯ ಗುರುತಿಗೆ ಭರ್ಜರಿ ಗೆಲುವು ತಂದುಕೊಡಬೇಕು ಎಂದು ಕೃಷ್ಣಮೂರ್ತಿ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಎಸ್ ಪಿ ಮುಖಂಡರಾದ ಹರಿಹರಪುರ ಶಿವಕುಮಾರ್, ಚಿಕ್ಕಗಾಡಿಗನಹಳ್ಳಿ ಚೆಲುವರಾಜು, ಬಸ್ತಿ ಪ್ರದೀಪ ಮತ್ತಿತರರು ಉಪಸ್ಥಿತರಿದ್ದರು....

Share this article

About Author

Super User
Leave a comment

Write your comments

Visitors Counter

334101
Today
Yesterday
This Week
This Month
Last Month
All days
220
428
4587
14741
12421
334101

Your IP: 216.73.216.165
2025-08-31 21:59

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles