ಆಲೂ ಪರೊಟ ಮಾಡುವುದು ಬಹಳ ಮಂದಿಗೆ ತಲೆನೋವೇ ಸರಿ..ವಿಶೇಷವಾಗಿ ಲಟ್ಟಿಸುವಾಗ, ಹಿಟ್ಟು, ಲಟ್ಟಣಿಗೆ, ಮಣೆ ಎಲ್ಲಕ್ಕೂ ಮೆತ್ತಿ ಫಜೀತಿಯೊ ಫಜೀತಿ..
ಸರಳವಾಗಿ ಮಾಡುವುದನ್ನು ತಿಳಿಸುತ್ತೇನೆ ಬನ್ನಿ..
4 ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ಬಿಡಿಸಿ ಪುಡಿ ಮಾಡಿಕೊಳ್ಳಿ.
ಸಣ್ಣ ಹೆಚ್ಚಿದ ಕೊತ್ತಂಬರಿಸೊಪ್ಪು,ಇಂಗು, ಸಣ್ಣಗೆ ತುರಿದ ಹಸಿ ಶುಂಠಿ,ಅರಿಸಿನ, ಉಪ್ಪು, ಹಸಿಮೆಣಸಿನಕಾಯಿ(ರುಬ್ಬಿಕೊಂಡದ್ದು) ಎಲ್ಲವನ್ನು ಆಲೂಗಡ್ಡೆಮಿಶ್ರಣಕ್ಕೆ ಸೇರಿಸಿ ಬೆರೆಸಿಕೊಳ್ಳಿ..
ಸ್ವಲ್ಪ ಮೃದುವಾಗಿ ಕಲಸಿದ ಚಪಾತಿ ಹಿಟ್ಟಿನ ಉಂಡೆಗಳನ್ನು ಸ್ವಲ್ಪ ಕೈಯಲ್ಲೇ ತಟ್ಟಿ ಅಗಲ ಮಾಡಿಕೊಂಡು ಪಲ್ಯವನ್ನು ಇದರಲ್ಲಿ ತುಂಬಿ ರೊಟ್ಟಿ ಹಾಳೆಯ ಮೇಲೆ ಎಣ್ಣೆ ಸವರಿ ಸಲ್ಪ ದಪ್ಪಗೆ ತಟ್ಟಿ ಚಿತ್ರದಲ್ಲಿರುವಂತೆ ಬೇಯಿಸಿ..ರೊಟ್ಟಿ ಪೇಪರ್ ಸಮೇತ ತವಾದ ಮೇಲೆ ಹಾಕಿ 1 ನಿಮಿಷ ಬಿಟ್ಟು ನಂತರ ಪೇಪರ್ ತೆಗೆದರೆ ಸುಲಭವಾಗಿ ಬಿಡುತ್ತದೆ..
ಚಟ್ನಿ ಅಥವಾ ಉಪ್ಪಿನಕಾಯಿ ಮೊಸರಿನೊಂದಿಗೆ ರುಚಿ.
ಕೊತ್ತಂಬರಿ ಸೊಪ್ಪಿನಂತೆ ಸಬ್ಬಸಿಗೆ ಸೊಪ್ಪು,ಮೆಂತ್ಯದ ಸೊಪ್ಪು ಕೂಡ ಬಳಸಬಹುದು..
Last modified on 19/07/2018