ಕನ್ನಡದ ‘ಪ್ರೀತ್ಸೆ’ ಸಿನೆಮಾದಲ್ಲಿ ಶಿವಣ್ಣ ಮತ್ತು ಉಪ್ಪಿ ಜೊತೆ ನಟಿಸಿದ್ದ ಬಾಲಿವುಡ್ ನ ಬ್ಯೂಟಿ ಸೊನಾಲೀ ಬೇಂದ್ರೆ ತಾನು ಕ್ಯಾನ್ಸರ್ ಖಾಯಿಲೆ ಗೆ ತುತ್ತಾಗಿರುವುದಾಗಿ ಬಹಿರಂಗ ಪಡಿಸಿದ್ದಾರೆ.
ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಸೊನಾಲಿ ಬೇಂದ್ರೆ ” ನನ್ನ ಜೀವನದ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಸಂಕಷ್ಟದ ವಿರುಧ್ಧ ಹೋರಾಡಲು ನಾನು ಸಿದ್ದಳಿದ್ದೇನೆ” ತಿಳಿಸಿದ್ದಾರೆ.
ನಾನು ಅದೃಷ್ಟವಂತೆ ಯಾಕೆಂದರೆ ನನ್ನ ಕುಟುಂಬ ಹಾಗೂ ನನ್ನ ಕೆಲವು ಆಪ್ತರು ನನ್ನ ಒಳಿತಿಗೆ ಸಹಾಯ ಮಾಡುತ್ತಾರೆ. ಅವರಿಂದ ಎಲ್ಲ ರೀತಿಯಿಂದಲೂ ಬೆಂಬಲ ಸಿಗುತ್ತದೆ. ಆದ್ದರಿಂದ ನಾನು ಈ ಖಾಯಿಲೆಗೆ ಧೃತಿಗೆಡದೆ ಇಚ್ಚಾಶಕ್ತಿ ಇಮ್ಮಡಿಗೊಳಿಸಿ ಕೊಂಡಿದ್ದೇನೆ ಎಂದಿದ್ದಾರೆ.
ಸಧ್ಯ ನಾನೀಗ ನನ್ನ ಡಾಕ್ಟರ್ ಸಲಹೆ ಮೇರೆಗೆ ನ್ಯೂಯಾರ್ಕಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ ಸೊನಾಲಿ.
Last modified on 19/07/2018