ಸಂಕಲ್ಪ ಮಾಡಿ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಪೂಜಿಸಿದರೇ ಸಾಕು. ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ನೆರವೇರಿಸಿಕೊಡುತ್ತಾನೆ ಭೂವರಹನಾಥ.
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಸಮೀಪದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಹೇಮಾವತಿ ನದಿ ದಡೆಯಲ್ಲಿ ಭೂವರಹನಾಥಸ್ವಾಮಿ ನೆಲೆನಿಂತಿದ್ದಾನೆ. ಭೂವರಹನ ದೇಹ ಮನುಷ್ಯನದು, ಮುಖ ಪ್ರಾಣಿಯದಾಗಿದೆ. ಅಜಾನುಬಾವಾಗಿರುವ ಭೂವರಹ ಭಕ್ತರು ಕಷ್ಟ ಆಲಿಸಿ, ಕ್ಷಣಾರ್ಧದಲ್ಲಿ ದೂರಮಾಡತ್ತಾನೆ, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ಸಿದ್ಧಿಸುತ್ತದೆ. ದೇವಸ್ಥಾನದ ಪಕ್ಕದಲ್ಲಿ ನದಿಯಿದೆ. ಇಲ್ಲಿ ಜ್ಯೋತಷ್ಯದಲ್ಲಿ ಹೇಳಿರುವಂತೆ ರಾಹು, ಕೇತು ದೋಷಗಳು ನಿವಾರಣೆ ಆಗುತ್ತವೆ. ಯಾವ ವ್ಯಕ್ತಿ ದೋಷಗಳಿಂದ ಬಳಲುತ್ತಿರುತ್ತಾನೆ, ಆತ ದೇವಸ್ಥಾನದಲ್ಲಿ ಸಂಕಲ್ಪ ಮಾಡಿಸಿ ಕರಿ ಉದ್ದಿನ ಕಾಳನ್ನು ನದಿ ಎದರು ನಿಂತು ಮೈಮೇಲಿಂದ 17 ಬಾರಿ ನಿವ್ವಳಿಸಿ(ದೃಷ್ಟಿ ತಕ್ಕೊಂಡು) ನದಿಗೆ ಹಾಕಿ, ದೇವಸ್ಥಾನವನ್ನು 11 ಪ್ರದಕ್ಷಿಣೆ ಹಾಕಿದ ನಂತರ ದೋಷ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಭೂಮಿಗೆ ಸಂಬಂಧಿಸಿದ ಮನೆ ಕಟ್ಟಲಾಗದಿರುವುದು, ನಿವೇಶನ ಖರೀದಿಗೆ, ಜಮೀನು ಖರೀದಿ, ನ್ಯಾಯಾಲಯದಲ್ಲಿ ಜಮೀನು ಸಂಬಂಧ ತೊಂದರೆ ಅನುಭವಿಸುತ್ತಿರುವವರು ಇಲ್ಲಿಗೆ ಬಂದು ಇಲ್ಲಿನ ಮಣ್ಣನ್ನು ಅರಿಸಿನ ಬಟ್ಟೆಯಲ್ಲಿ ಹಾಖಿಕೊಂಡು ಮಣ್ಣಿಗೆ ದೇವರನ್ನು ಆಹ್ವಾನೆ ಮಾಡಿಸಿಕೊಂಡು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿ ಭೂಮಿ ಸಮಸ್ಯೆ ನಿವಾರಣೆ ಆದ ಮೇಲೆ ದೇವರಿಗೆ ಹರಿಕೆ ತೀರಿಸಿ ಬಂದು ಮನೆಯಲ್ಲಿರುವ ತುಳಿಸಿ ಗಿಡಕ್ಕೆ ಮಣ್ಣನ್ನು ವಿಸಜರ್ಿಸುತ್ತಾರೆ.ಭೂಮಿ ಕಾರ್ಯಕ್ಕೆ ನಿವಿಘ್ರ್ನವಾಗಿ ಏನೇ ಸಂಕಲ್ಪ ಮಾಡಿದರೇ ನೆರವೇರಿಸಿಕೊಡುತ್ತಾನೆ. ಇಲ್ಲಿ ಪೂಜಿಸಿ ಒಂದು ಮಣ್ಣಿನ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟುವ ಜಾಗದ ಈಶಾನ್ಯ ಮೂಲೆಗೆ ಕಟ್ಟುವುದರಿಂದ ಮನೆ ಬೇಗ ನಿಮರ್ಾಣಗೊಳ್ಳತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಸ್ಥಾನದ ದರ್ಶನ ಪಡೆದ ಭಕ್ತರಿಗೆ ವೈಬ್ರೇಷನ್ ಅನುಭವ ಆಗುತ್ತದೆ. ಇದು ದೇವರು ಇರುವುದಕ್ಕೆ ಸಾಕ್ಷಿ ಎನ್ನುತ್ತಾರೆ. ಇಲ್ಲಿನ ಭಕ್ತರು.
ಸ್ಥಳ ಪುರಾಣ : ದೇವಸ್ಥಾನದ ಪಕ್ಕದಲ್ಲಿರುವ ನದಿಗೆ ಹಿಂದೆ ಪ್ರಹಾವ ಬರುತ್ತದೆ. ಈ ಪ್ರದೇಶ ಜಲಾವೃತಗೊಂಡು ಇಲ್ಲಿನ ಜನರು ಊರನ್ನು ಖಾಲಿ ಮಾಡುತ್ತಾರೆ. ಆದರೇ ದೇವರು ಮಾತ್ರ ಉಳಿಯುತ್ತಾನೆ. ತನ್ನ ಶಕ್ತಿಯಿಂದ ನೀರಿಂದ ಎದ್ದು ಬಂದು ಭೂಮಿಯ ಮೇಲೆ ನೆಲೆ ನಿಲ್ಲುತ್ತಾನೆ. ಪ್ರವಾಹ ನಿಂತ ನಂತರ ಕಣ್ಮರೆ ಆಗುತ್ತಾನೆ. ಗಿಡ, ಮರ ಬೆಳೆದು ಕಾಡಾಗುತ್ತದೆ. ವಿಷ್ಣವರ್ಧನನ ಮಗ ವೀರ ಬಲ್ಲಾಳ ಭೇಟೆಗೆಂದು ಇಲ್ಲಿಗೆ ಬರುತ್ತಾನೆ. ಇವನ ಭೇಟೆ ನಾಯಿಗಳು ಮೊಲಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇಲ್ಲಿ ದಿಣ್ಣೆ ಕಾಣುತ್ತದೆ. ಅಲ್ಲಿ ಮೊಲಗಳು ಉಗ್ರ ಸ್ವರೂಪ ತಾಳಿ ಭೇಟೆ ನಾಯಿಗಳನ್ನ ಬೆನ್ನಟ್ಟಿ ಹೊಡಿಸಿ ಕಳಿಸುತ್ತವೆ. ಆಗ ವೀರಬಲ್ಲಾಳನಿಗೆ ಅಲ್ಲಿ ಏನೋ ದೈವ ಶಕ್ತಿಯಿದೆ ಎಂದು ಅರಿತು ಆ ಜಾಗವನ್ನು ಅಗೆಸುತ್ತಾನೆ. ಆಗ ಅಲ್ಲಿ ಮನುಷ್ಯ ದೇಹ, ಪ್ರಾಣಿ ಮುಖ ಇರುವ ಬರಹನಾಥನ ವಿಗ್ರಹ ಸಿಗುತ್ತದೆ. ಆತ ಅಲ್ಲೇ ದೇವಸ್ಥಾನ ಕಟ್ಟಿಸಿ ವರಹನಾಥಸ್ವಾಮಿಗೆ ಪೂಜೆ ಶುರು ಮಾಡಿಸಿದನಂತೆ.
ಈ ದೇವಸ್ತಾನವನ್ನು 2500 ವರ್ಷಗಳ ಹಿಂದೆ ಗೌತಮ ಋಷಿಗಳು ಮಾಡಿದ್ದಾರೆ. ಭೂವರಹನ ಮೂತರ್ಿಯ ಎಡೆತೊಡೆಯ ಮೇಲೆ ಭೂದೇವಿ ಕುಳಿತ್ತಿದ್ದಾಳೆ. ಹಸ್ತದಲ್ಲಿ ಕಮಲದ ಹೂವಿದೆ. ಮಧ್ಯೆ ಸುದರ್ಶನ ಚಕ್ರವಿದ್ದು, ಏಕಶಿಲೆಯ ಸಾಲಿಗ್ರಾಮ ಶಿಲೆಯಾಗಿದೆ. ಪಾದದಿಂದ ಕಿರೀಟ 15 ಅಡಿ, ಪೀಠ 3 ಅಡಿಯಿದೆ. ಹಿಂದೆ ವಿಜಯನಗರದ ಸಾಮ್ರಾಜ್ಯದ ರಾಜರು ಸ್ವಾಮಿಯ ಶಕ್ತಿ ಅರಿತು, ರಾಜ ಲಾಂಛನವನ್ನಾಗಿ ಮಾಡಿಕೊಂಡಿದ್ದರು. ರಾಜರ ಗುರುಗಳ, ಋಷಿಗಳ ಮಾತಿನಂತೆ ಲಾಂಚನವನ್ನ, ಆ ಸಮಯದಲ್ಲಿ ನಾಣ್ಯದ ಮೇಲೆ ವರಹನಾಥನ ಚುಹ್ನೆ ಹಾಕುತ್ತಿದ್ದರು. ಅಲ್ಲದೆ ನಾಣ್ಯವನ್ನು ವರಹ ಎಂದು ಕರೆಯುತ್ತಿದ್ದರು ಎಂಬ ಇತಿಹಾಸವಿದೆ.
ಭೂವರಹ ಅಂದರೇ ಭೂಮಿಯ ಒಡೆಯ.ಭೂಮಿಯ ಮೇಲೆ ಇರುವ ಸಕಲ ಕಷ್ಟಗಳನ್ನು ನಿವಾರಣೆ ಮಾಡಿ ಭಕ್ತರನ್ನ ಕಾಪಾಡುತ್ತಿರುವ ಭೂವರಹನಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅರಿದು ಬರುತ್ತಿದ್ದಾರೆ. ಅಮಾವಸೆಯಲ್ಲಿ ಪೂಜೆ ಸಲ್ಲಿಸಿದರೇ ಹೆಚ್ಚಿನ ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಅಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.