ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ನಿಮ್ಮ ಕಾಯಿಲೆಗಳನ್ನು ಗುಣಪಡಿಸುತ್ತದೆ.

 " ಹೊಂಗೆಯ ನೆರಳು, ತಾಯಿಯ ಮಡಿಲು" 

ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ನಿಮ್ಮ ಕಾಯಿಲೆಗಳನ್ನು ಗುಣಪಡಿಸುತ್ತದೆ.

ಮಧುಮೇಹಕ್ಕೆ 
ಒಂದು ಹಿಡಿ ಹಸಿ ಅಥವಾ ಒಣಗಿದ ಹೊಂಗೆ ಎಲೆಗಳನ್ನು ತಂದು ಸಮ ಭಾಗ ಒಣಗಿದ ಹಾಗಲಕಾಯಿ ಮತ್ತು ನೇರಳೆ ಬೀಜಗಳನ್ನು ಕೂಡಿಸಿ ನುಣ್ಣಗೆ ಚೂರ್ಣ ಮಡಿ ಕದಡಿ ಸೇವಿಸುವುದು

ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ನಾಶ ತಡೆಯಲು 
ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.

ಅರ್ಧ ತಲೆ ನೋವಿಗೆ 
ಒಂದೆರೆಡು ಹೊಂಗೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು, ತೆಳು ಬಟ್ಟೆಯಲ್ಲಿ ಹಾಕಿ 2,3 ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದು.

ತಲೆಯಲ್ಲಿ ಹೇನು ಮತ್ತು ಸೀರುಗಳಿಗೆ 
ರಾತ್ರಿ ಮಲಗುವಾಗ ಹೊಂಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬಟ್ಟೆ ಕಟ್ಟಿ ಮಲಗುವುದು. ಬೆಳಿಗ್ಗೆ ಎದ್ದು ಸೀಗೇ ಪುಡಿ ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದು.

ಜೇನು ಹುಳುಗಳ ಕಡಿತಕ್ಕೆ 
ಜೇನು ಹುಳು ಕಡಿದಿರುವ ಕಡೆ ಹೊಂಗೆ ಎಣ್ಣೆಯನ್ನು ಹಚ್ಚುವುದು, ಕಾಡಿನ ಅಕ್ಕಪಕ್ಕದಲ್ಲಿ ವಾಸಿಸುವವರು, ಸ್ವಲ್ಪ ಹೊಂಗೆ ಎಣ್ಣೆಯನ್ನು ಮನೆಯಲ್ಲಿ ಇಟ್ಟಿರುವುದು ಒಳ್ಳೆಯದು. ಸಮಯ ಬಂದಾಗ ಉಪಯೋಗಿಸಬಹುದು.

ಕೈಕಾಲು ಮತ್ತು ಕೀಲು ನೋವಿಗೆ 
ಒಂದು ದೊಡ್ಡ ಚಮಚ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿ ಮಂದಾಗ್ನಿಯಿಂದ ಕಾಯಿಸುವುದು. ಎಣ್ಣೆ ಬಿಸಿಯಾದ ಮೇಲೆ ಕೆಳಗಿಳಿಸುವಾಗ 5 ಗ್ರಾಂ ಆರತಿ ಕರ್ಪೂರವನ್ನು ಹಾಕುವುದು. ತೈಲವು ತಣ್ಣಗಾದ ನಂತರ ನೋವಿರುವ ಕಡೆ ಹಚ್ಚುವುದು.

ಗಡ್ಡೆಗಳ ನಿವಾರಣೆಗೆ 
ಎಳ್ಳು, ಸಾಸಿವೆ, ಹೊಂಗೆ ಬೀಜ, ಎಲ್ಲಾ 10 ಗ್ರಾಂ ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯುವುದು. ಅನಂತರ ಬಹುಕಾಲದಿಂದ ವಾಸಿಯಾಗದೆ ಇರುವ ಗಡ್ಡೆ ಮತ್ತು ಕುರುಗಳಿಗೆ ಲೇಪಿಸುವುದು.

ಹಲ್ಲಿನ ಸಮಸ್ಯೆಗಳಿಗೆ 
ಗೇಣುದ್ದ, ಬೆರಳು ಗಾತ್ರದ ಹೊಂಗೆ ಹಸಿ ಕಡ್ಡಿಯನ್ನು ತಂದು ಹಲ್ಲುಗಳಿಂದ ಚೆನ್ನಾಗಿ ಕಡಿದು, ಬ್ರಷಿನಂತೆ ಮಾಡಿಕೊಳ್ಳುವುದು. ಇದರಿಂದ ಹಲ್ಲುಗಳನ್ನು ತಿಕ್ಕುತ್ತಿದ್ದರೆ ಕ್ರಿಮಿಗಳು ನಾಶವಾಗುವವು. ಒಸಡುಗಳು ಗಟ್ಟಿಯಾಗುವುವು ಮತ್ತು ಬಾಯಿಯ ದುರ್ಗಂಧ ಪರಿಹಾರವಾಗುವುದು.

ಕುರುಗಳಲ್ಲಿ ಬಿದ್ದಿರುವ ಕ್ರಿಮಿಗಳ ನಾಶ ಮಾಡಲು 
ಬೇವಿನ ಮತ್ತು ಹೊಂಗೆಯ ಎಲೆಗಳನ್ನು ಸಮ ತೂಕ ಸೇರಿಸಿ ಸ್ವಲ್ಪ ಅರಿಶಿನ ಕೊಂಬಿನ ಪುಡಿಯನ್ನು ಹಾಕಿ ನುಣ್ಣಗೆ ಅರೆದು ಹುಣ್ಣುಗಳಿಗೆ ಲೇಪಿಸಿ ಬಟ್ಟೆ ಕಟ್ಟುವುದು.

ಮಲೇರಿಯಾ ಜ್ವರಕ್ಕೆ 
ಹೊಂಗೆ ಬೀಜಗಳನ್ನು ತಂದು ಅದರ ಮೇಲಿನ ಕೆಂಪು ಸಿಪ್ಪೆಯನ್ನು ಬೇರ್ಪಡಿಸಿ ಚೂರ್ಣ ಮಾಡುವುದು.ಒಂದು ವೇಳೆಗೆ 1/4 ಟೀ ಚಮಚ ಚೂರ್ಣವನ್ನು ಜೇನಿನೊಂದಿಗೆ ಸೇವಿಸುವುದು.

ಕಣ್ಣು ರೆಪ್ಪೆಗಳ ಮೇಲಿನ ಕೂದಲುಗಳ ನಾಶ ತಪ್ಪಿಸಲು 
ಹೊಂಗೆ ಬೀಜ, ತುಳಸಿ ಎಲೆ ಮತ್ತು ಮಲ್ಲಿಗೆ ಮೊಗ್ಗು ಸಮ ತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ ನೀರು ಇಂಗಿ ಗಟ್ಟಿಯಾದ ಮೇಲೆ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ ಕೂದಲು ಉದುರಿರುವ ಕಡೆ ಹಚ್ಚುವುದು.

ಗಜಕರ್ಣ, ಇಸುಬು ಮತ್ತು ತುರಿಕೆಗೆ 
ಒಂದು ಬಟ್ಟು ಹೊಂಗೆ ಎಣ್ಣೆಗೆ ಗಂಧಕ ಮತ್ತು ಕರ್ಪೂರ ಹತ್ತು ಗ್ರಾಂ ಮತ್ತು ನಿಂಬೆ ಹಣ್ಣಿನ ರಸ 20 ಗ್ರಾಂ ಸೇರಿಸಿ, ಮಿಶ್ರ ಮಾಡಿ ಹಚ್ಚುವುದು.

ಕುಷ್ಠ ರೋಗಕ್ಕೆ 
ಹೊಂಗೆ ಎಣ್ಣೆಯನ್ನು ಹುಣ್ಣುಗಳಿಗೆ ಧಾರಾಳವಾಗಿ ಹಚ್ಚುವುದು ಮತ್ತು ಹಸಿ ಹೊಂಗೆ ರಸ, 1 ಟೀ ಚಮಚದಲ್ಲಿ ಸೈಂಧವ ಲವಣ ಮತ್ತು ಚಿತ್ರಮೂಲ ಬೇರಿನ ಚೂರ್ಣ 1/2 ಟೀ ಚಮಚ ಸೇರಿಸಿ ಹಸುವಿನ ಮೊಸರಿನಲ್ಲಿ ಕದಡಿ ಕುಡಿಸುವುದು, ಪ್ರತಿನಿತ್ಯ ಎರಡು ವೇಳೆ ಮಾತ್ರ.

Last modified on 19/07/2018

Share this article

About Author

Madhu
Leave a comment

Write your comments

Visitors Counter

334091
Today
Yesterday
This Week
This Month
Last Month
All days
210
428
4577
14731
12421
334091

Your IP: 216.73.216.165
2025-08-31 21:54

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles