Print this page

ಮಲೆನಾಡಿನ ಹಲಸಿನ ಹಣ್ಣು

ಮಲೆನಾಡಿನಲ್ಲಿ ವಿಪುಲವಾಗಿ ಬೆಳೆಯುವ ಹಲಸಿನ ಹಣ್ಣು ದೊಡ್ಡ ಗಾತ್ರದ ಮುಳ್ಳುಕವಚವನ್ನು

ಹೊಂದಿರುವ ಹಣ್ಣಾಗಿದ್ದು ಏಷ್ಯಾಖಂಡದ ಸಮಶೀತೋಷ್ಣ ವಲಯದಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಯುತ್ತದೆ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ವಿಟಮಿನ್ ಬಿ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಸತುವಿನ ಸಹಿತ ಹಲವಾರು ಪೋಶಕಾಂಶಗಳಿವೆ. ಎಳೆಯದಿದ್ದಾಗ ಗುಜ್ಜೆಯ ರೂಪದಲ್ಲಿ ಬೇಯಿಸಿ ಹಾಗೂ ಹಣ್ಣಾದ ಬಳಿಕ ಇದರ ತೊಳೆಗಳನ್ನು ಹಾಗೇ ತಿನ್ನಬಹುದು ಅಥವಾ ಹಲವಾರು ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು.

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆದು ಬಿಡುತ್ತೇವೆ. ಆದರೆ ಈ ಬೀಜಗಳಲ್ಲಿಯೂ ಅತ್ಯಂತ ಆರೋಗ್ಯಕರವಾಗಿವೆ ಹಾಗೂ ಇದರಲ್ಲಿ ರೈಬೋಫ್ಲೇವಿನ್, ಥಿಯಾಮೈನ್ ಮೊದಲಾದ ಪೋಷಕಾಂಶಗಳು ಹೆಚ್ಚಾಗಿವೆ. ಇವು ನಮ್ಮ ಆಹಾರದ ಪೋಷಕಾಂಶಗಳನ್ನು ಶಕ್ತಿಯಾಗಿ ಪರಿವರ್ತಿಸಲು ನೆರವಾಗುತ್ತವೆ. ಅಲ್ಲದೇ ಈ ಪೋಷಕಾಂಶಗಳು ಕಣ್ಣು, ತ್ವಚೆ ಹಾಗೂ ಕೂದಲುಗಳನ್ನೂ ಆರೋಗ್ಯಕರವಾಗಿರಿಸುತ್ತವೆ.

Last modified on 19/07/2018

Share this article

About Author

Super User