Print this page

ಹಾಸನ ಜಿಲ್ಲೆ: ಹಾಸನ ಕ್ಕೆ ಮತ್ತೆ "ಸಿಂಧೂರಿ " ಡಿ ಸಿ

ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಹಲವು ದಿನಗಳಿಂದ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸಿಂಧೂರಿ ಕೇಸ್ ಗೆ ಅಂತೂ ಇಂತೂ ಇಂದು ತೇರು ಬಿದ್ದಿದೆ.

ಕಾಂಗ್ರೆಸ್ ಸರ್ಕಾರದ ವರದಿಯಲ್ಲಿ ರೋಹಿಣಿ ಸಿಂಧೂರಿ ಮತ್ತು ಉಸ್ತುವಾರಿ ಸಚಿವ ಎ.ಮಂಜು ನಡುವೆ ಹೊಂದಾಣಿಕೆ ಏರ್ಪಡದೆ ಸರ್ಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸಿದ್ದರು. ರೋಹಿಣಿ ಸಿಂಧೂರಿ ನಂತರ ರಂದೀಪ್ ಮತ್ತು ಜಾಫರ್ ಜಿಲ್ಲಾಧಿಕಾರಿಯಾಗಿದ್ದರು.

ಆದರೆ ವರ್ಗಾವಣೆ ಪ್ರಶ್ನಿಸಿ ಸಿ.ಎ.ಟಿ ಮೊರೆ ಹೋಗಿದ್ದ ಸಿಂಧೂರಿ, ಸಿಂಧೂರಿಗೆ ಜಯ ಸಿಗದೇ ಹೈ ಕೋರ್ಟ್ ಮೆಟ್ಟಿಲೇರಿ ತಿಂಗಳುಗಳ ಕಾಲ ತೀರ್ಪಿಗಾಗಿ ಕಾಯ್ದಿದ್ದರು ಆದರೆ ಕೊನೆಗೂ ಹೈ ಕೋರ್ಟ್ ಸರ್ಕಾರಕ್ಕೆ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಸೂಚಿಸಿತ್ತು.

ಸರ್ಕಾರ ಇಂದು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯಲಿ ಎಂದು ಅನುಮತಿ ನೀಡಿದ ಬೆನ್ನಲ್ಲೇ ಹೈಕೋರ್ಟ್ ಕೂಡ ಮುಂದುವರಿಯಲು ಮಹತ್ವದ ಆದೇಶ ನೀಡಿದೆ. ಒಟ್ಟಾರೆಯಾಗಿ ರೋಹಿಣಿ ಸಿಂಧೂರಿ ಹೋರಾಟಕ್ಕೆ ಇಂದು ಜಯ ಸಿಕ್ಕಂತಾಗಿದೆ. ಜು 13, 2017ರಂದು ವಿ.ಚೈತ್ರ ವರ್ಗಾವಣೆ ಬಳಿಕ ಜುಲೈ 14ರಂದು ಹಾಸನದ ಜಿಲ್ಲಾಧಿಕಾರಿಯಾಗಿ ರೋಹಿಣಿ ಅಧಿಕಾರ ವಹಿಸಿಕೊಂಡಿದ್ದರು.

ಏ.17,2018 ರೋಹಿಣಿ ಸಿಂಧೂರಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರಂದೀಪ್ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಅಧಿಕಾರ ವಹಿಸಿಕೊಂಡ ಒಂದು ವಾರವೂ ಆಗಿಲ್ಲ ಮತ್ತೆ ರಂದೀಪ್ ವರ್ಗಾವಣೆ ಮಾಡಿ ಸಿಪಿ ಜಾಫರ್ ಅವರನ್ನು ಏ.24, 2018 ರಂದು ಹಾಸನ ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಿಸಿತ್ತು.

ಆದರೆ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ರೋಹಿಣಿ ಸಿಂಧೂರಿ ಈಗ ಹೈಕೋರ್ಟ್ ಮೂಲಕ ಮತ್ತು ಸರ್ಕಾರದ ಮೂಲಕವೇ ವಾಪಸ್ಸಾಗಿ ಹಾಸನದ ಜಿಲ್ಲಾಧಿಕಾರಿಗೆ ಇಂದು ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 
Last modified on 19/07/2018

Share this article

About Author

Super User