Print this page

ರೈತರಿಗೆ ಬಂಪರ್ ಗಿಫ್ಟ್ ಘೋಷಿಸಿದ ಕೇಂದ್ರ ಸರ್ಕಾರ

ಇಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಂಪುಟ ಸಭೆ ನಡೆಸಿತ್ತು. ಆ ಸಭೆಯಲ್ಲಿ

ರೈತರಿಗೆ ಬಂಪರ್ ಗಿಫ್ಟ್ ಘೋಷಿಸಿದ್ದಾರೆ. ಹೌದು ಅಧಿಸೂಚಿತ 14 ಖಾರಿಫ್ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಒಪ್ಪಿಗೆ ನೀಡುವ ಮೂಲಕ ಬಹುದಿನಗಳ ಈ ಬೇಡಿಕೆ ಈಡೇರಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ!! ರೈತರಿಗೆ ಸಂತೋಷ ಪಡಿಸಲು ಪ್ರಧಾನಿ ಮೋದಿಯವರು ಕೃಷಿ ಉತ್ಪನ್ನಕ್ಕೆ ಹೆಚ್ಚಿನ ಬರಲೆ ನೀಡಲು ನಿರ್ಧರಿಸಿದ್ದರು. ಅದರಂತೆ ಇಂದು ಮುಂಗಾರು ಬೆಳೆಗಳಿಗೆ ಭರ್ಜರಿ ಪ್ರಮಾಣದಲ್ಲಿ ಕನಿಷ್ಟಬೆಂಬಲ ಬೆಲೆ ನಿಗದಿಪಡಿಸಿ ರೈತರಿಗೆ ಖಷಿ ಪಡಿಸಿದ್ದಾರೆ. ಸಾಮಾನ್ಯ ತಳಿಯ ಭತ್ತಕ್ಕೆ ಕ್ವಿಂಟಾಲ್‌ಗೆ 200 ರೂಪಾಯಿ ಕನಿಷ್ಟ ಬೆಂಬಲ ಬೆಲೆಯನ್ನು ಮೋದಿಯವರು ಘೋಷಿಸಿದ್ದಾರೆ.

ಇದರಿಂದಾಗಿ ಭತ್ತ ಬೆಳೆದ ರೈತರಿಗೆ ಕ್ವಿಂಟಾಲ್‌ಗೆ ಕನಿಷ್ಟ 1550 ರೂ. ಗಳಿಂದ ಗರಿಷ್ಠ 1560 ರೂ. ದರ ಲಭ್ಯವಾಗುಬಹುದಾಗಿದೆ.

Last modified on 19/07/2018

Share this article

About Author

Super User