Print this page

ಸಾಲದ ಬಾಧೆಯನ್ನು ತಾಳಲಾರದೇ ಪ್ರಗತಿಪರ ರೈತ ನೇಣಿಗೆ ಶರಣು..

ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಸಾಲದ ಬಾಧೆಯನ್ನು ತಾಳಲಾರದೇ ಪ್ರಗತಿಪರ ರೈತ ಜಯಕುಮಾರ್(44).ನೇಣಿಗೆ ಶರಣು..

ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ... ಕೃಷ್ಣರಾಜಪೇಟೆ ತಾಲ್ಲೂಕಿನ ವಳಗೆರೆ ಮೆಣಸ ಗ್ರಾಮದಲ್ಲಿ ಸಾಲದ ಬಾಧೆಯನ್ನು ತಾಳಲಾರದೆ ಪ್ರಗತಿಪರ ರೈತ ಜಯಕುಮಾರ್(44) ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ... ವಳಗೆರೆಮೆಣಸ ಗ್ರಾಮದ ಅಂಜನೀಗೌಡರ ಪುತ್ರ ಜಯಕುಮಾರ್ ತಮ್ಮ ಆರು ಎಕರೆ ಕೃಷಿ ಭೂಮಿಯಲ್ಲಿ‌ ಕಬ್ಬು ಮತ್ತು ಬಾಳೆಯನ್ನು ಬೆಳೆದಿದ್ದರು. ಕೊಳವೆಬಾವಿಯು ವಿಫಲವಾಗಿ ನೀರಿಲ್ಲದ ಕಾರಣ ಬೆಳೆಯು ಒಣಗಿದ್ದು ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ. 6 ಕೊಳವೆ ಬಾವಿಯನ್ನು ಕೊರೆಸಲು ಹಾಗೂ ಬೇಸಾಯ ಮಾಡಲು ಲಕ್ಷಾಂತರ ರೂಪಾಯಿ ಕೈಸಾಲ ಸೇರಿದಂತೆ ಅಗ್ರಹಾರಬಾಚಹಳ್ಳಿ ವ್ಯವಸಾಯ ಸಹಕಾರ ಸಂಘದಲ್ಲಿ 1ಲಕ್ಷರೂ ಹಾಗೂ ಕೆ.ಆರ್.ಪೇಟೆ ಪಟ್ಟಣದ ಕಾರ್ಪೋರೇಷನ್ ಬ್ಯಾಂಕಿನಲ್ಲಿ 6ಲಕ್ಷರೂ ಸಾಲವನ್ನು ಮಾಡಿದ್ದು, ಸಾಲಗಾರರ ಕಾಟವು ಹೆಚ್ಚಾದ ಹಿನ್ನೆಲೆಯಲ್ಲಿ ಮನನೊಂದ ಜಯಕುಮಾರ್ ಇಂದು ಮುಂಜಾನೆ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಕೊರಳೊಡ್ಡಿದ್ದಾರೆ. ಮೃತರು ಪತ್ನಿ ಅನಿತಾ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...ಮೃತ ದೇಹವನ್ನು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಡಲಾಗಿದೆ. ಶವಾಗಾರದ ಬಳಿ ಸಾವಿರಾರು ಜನರು ಜಮಾಯಿಸಿದ್ದು ಮೃತರ ಬಂಧುಗಳ ಆಕ್ರಂಧನವು ಮುಗಿಲು ಮುಟ್ಟಿದೆ...

Last modified on 08/03/2019

Share this article

About Author

Super User