Print this page

ಶ್ರೀ ಶ್ರೀ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿಯವರು ೨೪ ವರ್ಷದ ಹುಟ್ಟು ಹಬ್ಬ....

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದ ಶ್ರೀ ಶ್ರೀ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿಯವರು ೨೪ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಚಾಲನೆ ಮಾಡಿದರು .

ನಂತರ ಮಾತನಾಡಿದ ಶ್ರೀ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಯವರು ಎಲ್ಲ ಧರ್ಮಗಳು ಒಗ್ಗೂಡಬೇಕು ಅವರವರ ಧರ್ಮಗಳಲ್ಲಿ ಎಲ್ಲ ಸಮಾನತೆಯಿಂದ ನೋಡಿಕೊಳ್ಳಬೇಕು .ಧರ್ಮವನ್ನು ಒಡೆಯಲು ಯಾರೂ ಹೋಗಬಾರದು . ಅತಿ ಹೆಚ್ಚು ಶರಣರು ಹುಟ್ಟಿ ಬಂದಿರುವುದು ಉತ್ತರ ಕರ್ನಾಟಕದಲ್ಲಿ ಆದರೆ ಈಗ ದುಃಖದ ಸಂಗತಿ ಎದುರಾಗಿದೆ .ವರುಣನ ಆರ್ಭಟದಿಂದ ಕರ್ನಾಟಕ ತತ್ತರಿಸಿ ಹೋಗಿದೆ .ನೆರೆ ಸಂತ್ರಸ್ತರಿಗೆ ನಮ್ಮ ಮಠದಿಂದ ೫೦ಸಾವಿರ ಧನ ಸಹಾಯ ಮಾಡುತ್ತಿದ್ದೇವೆ,ಭಕ್ತಾದಿಗಳು ಸಹ ಹೆಚ್ಚಿನ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು .ನೆರೆ ಸಂತಸ್ತರಲ್ಲಿ ಸತ್ತವರಿಗೆ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು .ಪಾಂಡವಪುರ ತಾಲ್ಲೂಕಿನ ಎಲ್ಲ ಅಖಿಲ ಭಾರತ ವೀರಶೈವ ಲಿಂಗಾಯಿತ ಪದಾಧಿಕಾರಿಗಳಿಗೆ ಗುರುಸಿದ್ದೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಎಲ್ಲರಿಗೂ ಸನ್ಮಾನವನ್ನು ಮಾಡಲಾಯಿತು .

೫೦೦ ಹೆಚ್ಚು ಭಕ್ತಾದಿಗಳು ಹಾಜರಿದ್ದರು ಎಲ್ಲರಿಗೂ ಮಠದಿಂದ ಉಪಹಾರವನ್ನು ಮಾಡಿಸಲಾಯಿತು..ಇದೇ ಸಂದರ್ಭದಲ್ಲಿ ಅಕ್ಕಪಕ್ಕದ ಊರಿನ ಭಕ್ತಾದಿಗಳು ಹಾಜರಿದ್ದರು .

Share this article

About Author

Super User