Print this page

ರೈತ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು

ಕೆ.ಆರ್.ಪೇಟೆ,ಜೂ.2: ರೈತ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ತಾಲೂಕು ರೈತ ಸಂಘದ ಹೋರಾಟಗಾರು ಪಟ್ಟಣ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ಹೋರಾಟಗಾರರಾದ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು. ಜಾತಿ ನಿಂದನೆ ಆರೋಪದಡಿಯಲ್ಲಿ ಬಂಧಿಸಿರುವ ರೈತ ಮುಖಂಡ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ಪೋಲಿಸ್ ಠಾಣೆಯ ಧರಣಿ ಸತ್ಯಾಗ್ರಹ ನಡೆಸಿದರು.

ರಾಜ್ಯ ರೈ ಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ, ಜಿಲ್ಲಾ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ಧರಣಿ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಾಕವಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ವಿಶಾಲಮೂತರ್ಿ ಅವರು ಕಛೇರಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ಚಚರ್ೆ ಮಾಡಲು ಬಂದಿದ್ದ ರೈತ ಮುಖಂಡರ ವಿರುದ್ಧ ಜಾತಿನಿಂಧನೆ ಮತ್ತು ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಸುಳ್ಳು ಕೇಸನ್ನು ಮಾಡಿಸುವ ಮೂಲಕ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹೊರಟಿದ್ದಾರೆ. ಹಾಗಾಗಿ ಈ ಸುಳ್ಳು ಮೊಕದ್ದಮೆಯ ಹಿನ್ನೆಲೆಯಲ್ಲಿ ತಪ್ಪನ್ನೇ ಮಾಡದ ರೈತ ಹೋರಾಟಗಾರರು ಬಂಧಿಗಳಾಗಿ ಜೈಲು ಸೇರುವಂತಾಗಿದೆ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ನಮ್ಮ ತಕರಾರೇನಿಲ್ಲ. ಏನೂ ತಪ್ಪು ಮಾಡದೆ ಚಳವಳಿಗಾರರು ಶಿಕ್ಷೆ ಅನುಭವಿಸಬೇಕಾಗಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರಲ್ಲದೆ ಕೂಡಲೆ ಎರಡೂ ಕಡೆಯ ಮೊಕದ್ದಮೆಯನ್ನು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಡಿವೈಎಸ್ಪಿ ಅವರನ್ನು ಒತ್ತಾಯಿಸಿದರು.

ಪೋಲಿಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳೆರಡೂ ದಾಖಲಾಗಿವೆ. ರೈತ ಹೋರಾಟಗಾರರ ವಿರುದ್ಧ ಸುಳ್ಳು ದೂರನ್ನು ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂಬ ದುರುದ್ಧೇಶ ಪೋಲಿಸರಿಗಿಲ್ಲ. ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ತಪ್ಪು ಮಾಡಿದವರನ್ನು ಮಾತ್ರ ಶಿಕ್ಷೆಗೆ ಒಳಪಡಿಸುತ್ತೇವೆ. ನಿಸ್ಪಕ್ಷಪಾತವಾದ ತನಿಖೆಯನ್ನು ಖುದ್ದು ನಾನೇ ನಡೆಸುತ್ತೇನೆ. ರೈತ ಮುಖಂಡರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ರೈತ ಮುಖಂಡರು ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಪೋಲಿಸರ ಮುಂದೆ ತನಿಖೆಯ ಸಮಯದಲ್ಲಿ ಹಾಜರುಪಡಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು.

ಪೋಲಿಸ್ ಠಾಣೆಯ ಮುಂದೆ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಾರೆ ಎಂಬ ಮಾಹಿತಿಯನ್ನು ಹೊಂದಿದ್ದ ಪೋಲಿಸ್ ಇನ್ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ ಭಾರೀ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಿದ್ದರು.

ರೈತ ಮುಖಂಡ ರಾಜೇಗೌಡ ಡಿವೈಎಸ್ಪಿ ಧಮರ್ೇಂದ್ರ ಅವರೊಂದಿಗೆ ಮಾತನಾಡಿ ರೈತರನ್ನು ರಾತ್ರಿಯ ಸಮಯದಲ್ಲಿ ಮನೆಯ ಬಾಗಿಲು ಬಡಿದು ಏಳಿಸಿ ಬಂದಿಸುವ ಅಗತ್ಯವಿಲ್ಲ. ನಿಮ್ಮ ತನಿಖೆಯ ಸಮಯದಲ್ಲಿ ತಿಳಿಸಿದರೆ ನಾವೆ ಬಂದು ನಿಮ್ಮ ತನಿಖೆಗೆ ಸಹಕರಿಸುತ್ತೇವೆ. ಪ್ರಸ್ತುತ ಬಂಧನದಲ್ಲಿರುವ ರೈತ ಮುಖಮಡ ರವಿ ಅವರನ್ನು ಬಿಡುಗಡೆ ಮಾಡಲು ಮುಂದಾಗಬೇಕು ನಿಸ್ಪಕ್ಷಪಾತ ತನಿಖೆಯನ್ನು ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಕಾರ್ಯದಶರ್ಿ ನಾರಾಯಣಸ್ವಾಮಿ, ಖಜಾಂಚಿ ನೀತಿಮಂಗಲ ಮಹೇಶ್, ಉಪಾಧ್ಯಕ್ಷರಾದ ಬೂಕನಕೆರೆ ನಾಗರಾಜು, ಮುದ್ದುಕುಮಾರ್, ಕಾರಿಗನಹಳ್ಳಿ ಪುಟ್ಟೇಗೌಡ, ನಗರೂರು ಕುಮಾರ್, ರೈತ ಮುಖಂಡರಾದ ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಹೊನ್ನೇಗೌಡ, ಕರೋಟಿ ತಮ್ಮಯ್ಯ, ಸಿಂದಘಟ್ಟ ಮಂಜು, ಬಂಡಿಹೊಳೆ ಮಂಜುನಾಥ್, ರಾಮನಹಳ್ಳಿ ಕುಮಾರ್, ತಾಲೂಕು ರೈತ ಸಂಘದ ಮಹಿಳಾ ಘಕಟದ ಅಧ್ಯಕ್ಷೆ ಚೌಡೇನಹಳ್ಳಿ ಲತಾ, ಕಾರ್ಯದಶರ್ಿ ರೂಪಾ, ಲಕ್ಷ್ಮಮ್ಮ, ವನಿತಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಗಳ ಸಬ್ಇನ್ಸ್ಪೆಕ್ಟರ್ಗಳು ಹಾಗೂ ಶಸಸ್ತ್ರ ಮೀಸಲು ಪಡೆಯ ಪೋಲಿಸ್ ತುಕಡಿಯ ಪೋಲಿಸರು ಭದ್ರತೆಯ ಕಾರ್ಯದಲ್ಲಿದ್ದರು.

Last modified on 19/07/2018

Share this article

About Author

Super User