Print this page

ಪ್ರಜಾವಾಣಿ ದಿನಪತ್ರಿಕೆಯ ನೇತೃತ್ವದಲ್ಲಿ ನಡೆದ ನಗೆಹಬ್ಬದಲ್ಲಿ

ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರಜಾವಾಣಿ ದಿನಪತ್ರಿಕೆಯ ನೇತೃತ್ವದಲ್ಲಿ ನಡೆದ ನಗೆಹಬ್ಬದಲ್ಲಿ ಮಿಂದೆದ್ದ ನಾಗರೀಕರು..ನಗೆಯ ರಸದೌತಣ ಬಡಿಸಿದ ಹಾಸ್ಯ ದಿಗ್ಗಜರು....

ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಗ್ರಾಮಭಾರತಿ ವಿದ್ಯಾಸಂಸ್ಥೆಯ ಪಕ್ಕದ ಮೈದಾನದಲ್ಲಿ ಪ್ರಜಾವಾಣಿ ದಿನಪತ್ರಿಕೆಯು ಆಯೋಜಿಸಿದ್ದ ನಗೆಹಬ್ಬ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಆಯೋಜಕ ಮಾಜಿಶಾಸಕ ಡಾ.ಕೆ.ಬಿ.ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ನಗು ಮಾಯೆಯಾಗುತ್ತಿದೆ. ನಗೆ ಹಬ್ಬದಂತಹ ಹಾಸ್ಯಕಾರ್ಯಕ್ರಮಗಳು ಬದುಕಿಗೆ ನವ ಚೈತನ್ಯವನ್ನು ನೀಡುವ ಜೊತೆಗೆ ನಮ್ಮನ್ನು ಸದಾ ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ. ಆದ್ದರಿಂದ ನಾವು ಕೋಪವನ್ನು ಕಡಿಮೆ ಮಾಡಿಕೊಂಡು ನಗು ನಗುತ್ತಾ ಸಂತೋಷದಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.. ನಗೆಹಬ್ಬ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ರತ್ನಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಡಿ.ಪ್ರೇಮಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ರಮೇಶ್, ಪ್ರಜಾವಾಣಿ ಪ್ರಸರಣ ವಿಭಾಗದ ಪ್ರಧಾನ ಮುಖ್ಯಸ್ಥರಾದ ಓಲಿವರ್ ಲೆಸ್ಲೀ, ಸಹಾಯಕ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್, ವ್ಯವಸ್ಥಾಪಕ ಟಿ.ಎನ್. ಬಸವರಾಜು, ಪ್ರಸರಣ ವಿಭಾಗದ ಮಹೇಶ್, ಮಲ್ಲೇಶ್, ತಾಲೂಕು ವರದಿಗಾರ ಬಲ್ಲೇನಹಳ್ಳಿ ಮಂಜುನಾಥ್, ಪ್ರತಿನಿಧಿ ಪ್ರಮೋದ್ ಮತ್ತಿತರರು ಭಾಗವಹಿಸಿದ್ದರು...
ನಗೆಹಬ್ಬದಲ್ಲಿ ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಕಿರ್ಲೋಸ್ಕರ್ ಸತ್ಯ, ಮೈಸೂರು ಆನಂದ್, ಮಿಮಿಕ್ರಿಗೋಪಿ, ಇಂದುಮತಿ ಸಾಲಿಮಠ್ ತಮ್ಮ ಹಾಸ್ಯ ಚಟಾಕಿಗಳಿಂದ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು...

Last modified on 09/03/2019

Share this article

About Author

Super User