Print this page

ಬಸರಾಳು 108 ಅಂಬುಲೆನ್ಸ್ ಗೆ  ನೂರು ಎಂಟು ಸಮಸ್ಯೆ

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕು ಬಸರಾಳು ಹೋಬಳಿ ಬಸರಾಳು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ

ನೂರಾ ಎಂಟು ಆಂಬುಲೆನ್ಸ್ ವಾಹನವು ನೂರಾ ಎಂಟು ಸಮಸ್ಯೆಗಳಿಂದ ಬಳಲುತ್ತಿದೆ,ನೂರಾ ಎಂಟು ಆಂಬ್ಯುಲೆನ್ಸ್ ವಾಹನದ ನಾಲ್ಕು ಚಕ್ರ ಮತ್ತು ಸ್ಟೆಪ್ನಿ ಸಂಪೂರ್ಣವಾಗಿ ಸವೆದು ಸವೆದು ಚಿಪ್ ಆಗಿವೆ, ಈ ಆಂಬ್ಯುಲೆನ್ಸ್ ವಾಹನವು ಸಂಪೂರ್ಣವಾಗಿ ಹಳೆಯದಾಗಿದ್ದು ಪ್ರತಿನಿತ್ಯ ಈ ವಾಹನವನ್ನು ತಳ್ಳಿಕೊಂಡು ಸ್ಟಾರ್ಟ್ ಮಾಡಬೇಕಾಗಿದೆ,ಕಾರಣ ಈ ಆಂಬುಲೆನ್ಸ್ ವಾಹನಕ್ಕೆ ಬ್ಯಾಟರಿ ಇರುವುದಿಲ್ಲ, ಪಂಕ್ಚರ್ ಆದರೆ ಇರುವ ಟೈರನ್ನು ಬದಲಾಯಿಸಲು ವಾಹನದಲ್ಲಿ ಜಾಕ್ ಮತ್ತು ಬದಲಿ ಟೈರ್ ಕೂಡ   ಇರುವುದಿಲ್ಲ, ಪ್ರತಿನಿತ್ಯ ವಾಹನದಲ್ಲಿ ರೋಗಿಗಳನ್ನು ಸಾಗಿಸುವಾಗ ಅಲ್ಲಲ್ಲೇ ರಸ್ತೆ ಮಧ್ಯೆ ಹಲವು ಬಾರಿ ಕೆಟ್ಟು ನಿಂತಿದ ಕಾರಣ ಈ ವಾಹನದ ಇಂಜಿನ್ ತುಂಬಾ ಹಳೆಯದಾಗಿದ್ದು, ಬಸರಾಳು ಹೋಬಳಿ ಕೇಂದ್ರವು ಸುತ್ತಮುತ್ತಲ ಐವತ್ತು ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ ಇಲ್ಲಿ ಕಾರ್ಯ ನಿರ್ವಹಿಸುವ ಈ ಆಂಬ್ಯುಲೆನ್ಸ್  ನಂಬಿಕೊಂಡು ರೋಗಿಗಳು ಹೈರಾಣಾಗಿದ್ದಾರೆ.

ರೋಗಿಗಳನ್ನು ಸಾಗಿಸುವ ವಾಹನವೇ ರೋಗಗ್ರಸ್ಥತವಾಗಿದೆ, ಈ ಕೂಡಲೇ ಸಂಬಂಧಪಟ್ಟ  ಜನಪ್ರತಿನಿಧಿಗಳಾದ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯರು ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂಸರ್ಕಾರಿ ಅಧಿಕಾರಿಗಳು,ತಮ್ಮ ನಿರ್ಲಕ್ಷ್ಯ ಮನೋ ಭಾವನೆಯನ್ನು ತೊರೆದು ಬಸರಾಳು ಕೇಂದ್ರಕ್ಕೆ ನೂತನ ಆಂಬುಲೆನ್ಸ್ ಒಂದನ್ನು ಒದಗಿಸುವ ಕಡೆ ಗಮನ ಹರಿಸುವರೇಕಾದು ನೋಡೋಣ
 

Last modified on 19/07/2018

Share this article

About Author

Madhu