Print this page

ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು

ಮಾಡೆಲ್ ಕೋಚಿಂಗ್ ಸೆಂಟರ್ ನೇತೃತ್ವದಲ್ಲಿ ಒಂದು ದಿನದ ಉಚಿತ ಕಾರ್ಯಾಗಾರ...ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಬಿಇಓ ರೇವಣ್ಣ ಕರೆ.... ಕೃಷ್ಣರಾಜಪೇಟೆ ಪಟ್ಟಣದ ಖಾಸಿಂಖಾನ್ ಸಮುದಾಯ ಭವನದಲ್ಲಿ ಮೈಸೂರಿನ ದಿ ಹೆರಿಟೇಜ್ ಅಕಾಡೆಮಿ ಮತ್ತು ಕೃಷ್ಣರಾಜಪೇಟೆ ಪಟ್ಟಣದ ಮಾಡಲ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ಕೆಎಎಸ್, ಎಸ್.ಡಿ.ಎ, ಎಫ್.ಡಿ.ಎ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಒಂದು ದಿನದ ತರಬೇತಿ ಶಿಬಿರವು ನಡೆಯಿತು..ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಅವರು ಮಾತನಾಡಿ ಯುವಜನರು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರಿ ಪಲಾಯನವಾದವನ್ನು ಅನುಸರಿಸದೇ ಧೈರ್ಯದಿಂದ ಮುನ್ನಡೆದು ಗುರಿಮುಟ್ಟಬೇಕು. ಪುಸ್ತಕದ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡು, ಸಮಗ್ರವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಲಹೆ ನೀಡಿದರು...ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿ ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ತೀವ್ರವಾದ ಪೈಪೋಟಿ ಇದ್ದು ಭಾರೀ ಸ್ಪರ್ಧೆಯಿದೆ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಮುನ್ನಡೆದು ಸಾಧನೆ ಮಾಡಬೇಕೆನ್ನುವವರು ಮೊದಲು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಪರೀಕ್ಷೆಗಳನ್ನು ಎದುರಿಸಿ ಗುರಿ ಮುಟ್ಟಬೇಕು. ಸೋಲಿಗೆ ಹೆದರದೇ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆ ಮಾಡುವ ಮೂಲಕ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.. ಕಾರ್ಯಕ್ರಮದಲ್ಲಿ ಮಾಡೆಲ್ ಕೋಚಿಂಗ್ ಸೆಂಟರ್ ನ ವ್ಯವಸ್ಥಾಪಕ ಆರ್.ಎಸ್.ಪದ್ಮನಾಭ, ಮೈಸೂರಿನ ಹೆರಿಟೇಜ್ ಕೋಚಿಂಗ್ ಸೆಂಟರ್ ನ ತರಬೇತುದಾರ ಯತೀಶ್ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದ ಯುವಜನರಿಗೆ ತರಬೇತಿ ಮಾರ್ಗದರ್ಶನ ನೀಡಿದರು...

Last modified on 08/03/2019

Share this article

About Author

Super User