Print this page

ಕೆ.ಆರ್.ಪೇಟೆ ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲು ಸೆಸ್ಕ್

ಕೆ.ಆರ್.ಪೇಟೆ ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲು ಸೆಸ್ಕ್ ಎಂಡಿ ಗೋಪಾಲಕೃಷ್ಣ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಹುಡುಕಿದ ಶಾಸಕ ಡಾ. ನಾರಾಯಣಗೌಡ..ಗ್ರಾಮೀಣ ಪ್ರದೇಶಕ್ಕೆ ನಿಗಧಿತವಾಗಿ ಗುಣಮಟ್ಟದ ವಿದ್ಯುತ್ ನೀಡಲು ಮುಂದಾಗಿ ಶಾಸಕ ನಾರಾಯಣಗೌಡ ಕರೆ...

ಕೃಷ್ಣರಾಜಪೇಟೆ ತಾಲ್ಲೂಕಿನ ಗ್ರಾಮೀಣ ಪ್ರದೇಶಕ್ಕೆ 7ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್.ಗೋಪಾಲಕೃಷ್ಣ, ತಾಂತ್ರಿಕ ವಿಭಾಗದ ಮುಖ್ಯಸ್ಥ ಎ.ನರಸಿಂಹೇಗೌಡ, ಸೆಸ್ಕ್ ನ ಮುಖ್ಯ ಎಂಜಿನಿಯರ್ ಅಫ್ತಾಬ್ ಅಹಮದ್, ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಕೆ.ಸಿ.ನಿತ್ಯಾನಂದ, ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಎನ್.ನರಸಿಂಹಮೂರ್ತಿ, ಸೆಸ್ಕ್ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ಶ್ರೀನಿವಾಸಮೂರ್ತಿ, ಜಿ.ಎಲ್.ಚಂದ್ರಶೇಬಿಲ್ಸೇರಿದಂತೆ ವಿದ್ಯುತ್ ಇಲಾಖೆಗೆ ಸಂಬಂದಿಸಿದ ತಾಲೂಕು ಹಾಗೂ ವಿಭಾಗ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಓವರ್ ಲೋಡಿಂಗ್ ತಪ್ಪಿಸಿ ಗುಣಮಟ್ಟದ ವಿದ್ಯುತ್ತನ್ನು ನಿಗಧಿತವಾಗಿ ಸರಬರಾಜು ಮಾಡುವ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು...ತಾಲೂಕಿನಲ್ಲಿ ಎನ್.ಜೆ.ವೈ ಯೋಜನೆಯಡಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಗುತ್ತಿಗೆಪಡೆದಿರುವ ಸ್ಕಿಲ್ ಟೆಕ್ ಕಂಪನಿಯು ಆಮೆಗತಿಯ ವೇಗದಲ್ಲಿ ಕೆಲಸ ಮಾಡುತ್ತಾ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳು ನಿರ್ಮಾಣವಾಗಲು ಮುಖ್ಯ ಕಾರಣವಾಗಿದೆ. ಈ ಕಂಪನಿಯು ಬೋಗಸ್ ಕಂಪನಿಯಾಗಿದೆ.ಇವರು ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬೇಕಾಗಿಲ್ಲ ಎಂದು ಆಗ್ರಹಿಸಿದ ಶಾಸಕರು ಈ ಕಂಪನಿಯು ಕೆಲಸ ಮಾಡಿ ಮುಗಿಸಿದೆ ಎಂದು ಇಲಾಖೆಯ ಅಧಿಕಾರಿಗಳು ಸುಳ್ಳು ವರದಿ ನೀಡಿ ಬಿಲ್ ಮಾಡುಕೊಟ್ಟರೆ ತಾವು ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಹರಿಯಾಲದಮ್ಮ ದೇವಸ್ಥಾನದ ಬಳಿ ನಿರ್ಮಾಣವಾಗುತ್ತಿರುವ ಸಬ್ ಸ್ಟೇಷನ್ ಆರಂಭಕ್ಕೆ ಮುಂದಾಗಬೇಕು. ಕಿಕ್ಕೇರಿ ಹೋಬಳಿಯ ವಿದ್ಯುತ್ ಓವರ್ ಲೋಡ್ ತಪ್ಪಿಸಲು ಮತ್ತೊಂದು ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಬೇಕು. ಬಣ್ಣೇನಹಳ್ಳಿಯ ಫುಡ್ ಪಾರ್ಕಿನ ಬಳಿ 220K.V ಸಾಮರ್ಥ್ಯದ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸಿ ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆ ಹರಿಸಬೇಕು ಎಂದು ಸೆಸ್ಕ್ ಎಂಡಿ ಗೋಪಾಲಕೃಷ್ಣ ಅವರಲ್ಲಿ ಮನವಿ ಮಾಡಿದರು... ವಿದ್ಯುತ್ ಇಲಾಖೆಯಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವ ಬೇಜವಾಬ್ದಾರಿ ಎಂಜಿನಿಯರ್ ಗಳು ಹಾಗೂ ರೈತರ ರಕ್ತ ಹೀರುತ್ತಿರುವ ವಿದ್ಯುತ್ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಶಾಸಕ ಡಾ.ನಾರಾಯಣಗೌಡ ಆಗ್ರಹಿಸಿದರು.. ಸಭೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ, ತಾ.ಪಂ ಇಓ ಚಂದ್ರಮೌಳಿ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ತಾ.ಪಂ ಉಪಾಧ್ಯಕ್ಷ ರವಿ, ಮಾಜಿ ಉಪಾಧ್ಯಕ್ಷ ಜಾನಕೀರಾಂ, ಸೆಸ್ಕ್ ಇಇ ಗಳಾದ ಅತೀಬ್ ಉಲ್ಲಾಖಾನ್, ಬಿ.ನಾಗರಾಜ್, ಎಇಇ ಗಳಾದ ಕೃಷ್ಣ, ರಾಜಶೇಖರಮೂರ್ತಿ, ಪ್ರಕಾಶ್, ಮಹೇಶ್ವರಪ್ಪ, ಸೆಸ್ಕ್ ಸಿಇಸಿ ಸದಸ್ಯ ರಘು, ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿಅಧ್ಯಕ್ಷ ಶೀಳನೆರೆ ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು...

Share this article

About Author

Super User