Print this page

51 ಅಡಿ ಎತ್ತರದ ಶ್ರೀ ಆಂಜನೇಯಮೂತರ್ಿಯ ಲೋಕಾರ್ಪಣೆ ಕಾರ್ಯಕ್ರಮ

ಸುದ್ದಿಜಾಲ ಕೆ.ಆರ್.ಪೇಟೆ. ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ಕೆರೆಬೀದಿಯಲ್ಲಿ

ನೂತನವಾಗಿ ನಿಮರ್ಾಣವಾಗಿರುವ 51 ಅಡಿ ಎತ್ತರದ ಶ್ರೀ ಆಂಜನೇಯಮೂತರ್ಿಯ ಲೋಕಾರ್ಪಣೆ ಕಾರ್ಯಕ್ರಮ ಸುಸೂತ್ರವಾಗಿ, ಶಾಸ್ತ್ರಬದ್ಧವಾಗಿ ನೆರವೇರಿತು.
ಕಳೆದ ಮೂರು ದಿನದಿಂದ ಹಲವು ಧಾಮರ್ಿಕ ವಿಧಿವಿಧಾನಗಳನ್ನ ನೆರವೇರಿಸಲಾಗಿತ್ತು. ಭಾನುವಾರ ಮೂತರ್ಿಯ ಲೋಕಾರ್ಪಣೆ ಹಿನ್ನಲೆ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳನ್ನು ನೆರವೇರಿಸಲಾಯಿತು. 301 ಜನ ಮುತ್ತೈದೆಯರು ದೇವರಮ್ಮಣಿ ಕೆರೆಯಲ್ಲಿ ಗಂಗಾ ಪೂಜೆ ಮಾಡಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಕಳಸಗಳನ್ನು ವಿಧಿವಿಧಾನಗಳೊಂದಿಗೆ ಆಂಜನೇಯಮೂತರ್ಿಗೆ ಪವಿತ್ರ ಕಳಸದ ನೀರನ್ನು ಅಭಿಷೇಕ ಮಾಡಿ ಮೂತರ್ಿಗೆ ಪ್ರಾಣ ಪ್ರತಿಷ್ಠಾಪನೆ ಶಾಸ್ತ್ರ ನೆರವೇರಿಸುವ ಮೂಲಕ ಮೂತರ್ಿಯನ್ನು ಲೋಕಾರ್ಪಣೆ ಮಾಡಿದರು.

ಧಾಮರ್ಿಕ ವಿಧಿವಿಧಾನ ಕಾರ್ಯವನ್ನು ವೇದಬ್ರಹ್ಮಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ, ಅವರ ಶಿಷ್ಯವೃಂದ್ಧದೊಂದಿಗೆ ನಡೆಯಿತು. ಕೆರೆ ಬೀದಿ ಆಂಜನೇಯ ಸೇವಾ ಟ್ರಸ್ಟ ವತಿಯಿಂದ ಬಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಿದ್ದರು. ತಾಲೂಕಿನ ಸಾವಿರಾರು ಭಕ್ತರು ಭಕ್ತಿ ಭಾವದಿಂದ ಧಾಮರ್ಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಂಜನೇಯಸ್ವಾಮಿಗೆ ಕೃಪೆಗೆ ಪಾತ್ರರಾದರು.

ಚಿತ್ರ ಶೀಷರ್ಿಕೆ 17 ಕೆ.ಆರ್.ಪಿ-01 ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ಕೆರೆಬೀದಿಯಲ್ಲಿ ನೂತನವಾಗಿ ನಿಮರ್ಾಣವಾಗಿರುವ 51 ಅಡಿ ಎತ್ತರದ ಶ್ರೀ ಆಂಜನೇಯjಮೂತರ್ಿಯ ಲೋಕಾರ್ಪಣೆ ಕಾರ್ಯಕ್ರಮ ಸುಸೂತ್ರವಾಗಿ, ಶಾಸ್ತ್ರಬದ್ಧವಾಗಿ ನೆರವೇರಿತು.

Last modified on 19/07/2018

Share this article

About Author

Super User