Print this page

ತಲೆಹೊಟ್ಟು ನಿವಾರಿಸಲು ಇಲ್ಲಿದೆ ಸುಲಭವಾದ ಮನೆ ಮದ್ದು

ತಲೆಹೊಟ್ಟು ಉತ್ಪತ್ತಿಯನ್ನು ತಡೆಯಲು ಮತ್ತು ಅದರ ನಿವಾರಣೆಗೆ ಈರುಳ್ಳಿಯ ರಸ ನಿಜಕ್ಕೂ  ಸಂಜೀವಿನಿಯಿದ್ದಂತೆ.

ಈರುಳ್ಳಿ ರಸವನ್ನು ಅನೇಕ ರೀತಿಯಲ್ಲಿ ಬಳಸಬಹುದಾಗಿದೆ. ಕೂದಲು ಉದುರುವುದನ್ನು ತಡೆಯಲು ಈರುಳ್ಳಿ ರಸವನ್ನು ಅನೇಕ ವಿಧಾನಗಳಲ್ಲಿ ಬಳಸುವ ಸಂಗತಿಯನ್ನು ನಿಮ್ಮ ಉಪಯೋಗಕ್ಕಾಗಿ ಕೆಳಕಂಡಂತೆ ನೀಡಲಾಗಿದೆ. ಇದನ್ನು ಅನುಸರಿಸಿ ಕೂದಲು ಉದುರುವ ಸಮಸ್ಯೆಯಿಂದ ಮುಕ್ತರಾಗಿರಿ.

ಈರುಳ್ಳಿ ರಸ ಮತ್ತು ಜೇನು ಈರುಳ್ಳಿ ರಸ ಮತ್ತು ಜೇನಿನ ಮಿಶ್ರಣ ನಿಮ್ಮ ತಲೆ ಹೊಟ್ಟು ಮತ್ತು ಕೇಶ ಉದುರುವ ಸಮಸ್ಯೆಗೆ ಹೆಚ್ಚು ಪರಿಣಾಮಕಾರಿ. ಇದು ಕೂದಲ ಬೆಳವಣೆಗೆಗೆ ಹೆಚ್ಚು ಉಪಯುಕ್ತವಾಗಿದ್ದು, ಕೂದಲ ಮರುಬಳವಣಿಗೆಗೆ ಸಹ ಸಹಕಾರಿಯಾಗಿದೆ. ಈರುಳ್ಳಿ ರಸ ಮತ್ತು ಜೇನನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೇಶಕ್ಕೆ ನಯವಾಗಿ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಸ್ವಚ್ಛಗೊಳಿಸಿ.

ಈರುಳ್ಳಿ ರಸ ಮತ್ತು ಬಾದಾಮಿ ತೈಲ ಬಾದಾಮಿ ತೈಲವು ನಿಮ್ಮ ಕೇಶಕ್ಕೆ ಹೊಳಪನ್ನು ನೀಡುತ್ತದೆ. ಇದನ್ನು ಈರುಳ್ಳಿಯ ರಸದೊಂದಿಗೆ ಬೆರೆಸಿ ಹಚ್ಚಿದಲ್ಲಿ ಕೇಶ ಉದುರುವ ಸಮಸ್ಯೆಯು ನಿವಾರಣೆಯಾಗಿ, ಒಳಗಿನಿಂದಲೇ ಶಕ್ತಿ ನೀಡಿ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಹೆಚ್ಚು ನೆರವಾಗುತ್ತದೆ.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ
ಕೇಶಕ್ಕೆ ಹಚ್ಚುವ ಎಣ್ಣೆಯಾಗಿದ್ದು, ಕೂದಲುದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನು ಈರುಳ್ಳಿ ರಸದ ಜೊತೆಗೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸಲಿದೆ. 2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

ಈರುಳ್ಳಿ ರಸ ಮತ್ತು ಆಲಿವ್ ತೈಲ ಕೇಶ ಉದುರುವುದನ್ನು ನಿಲ್ಲಿಸಲು ಈರುಳ್ಳಿ ರಸ ಮತ್ತು ಆಲಿವ್ ತೈಲದ ಮಿಶ್ರಣ ಹೆಚ್ಚು ಪರಿಣಾಮಕಾರಿ. ಮೊದಲಿಗೆ ಆಲಿವ್ ತೈಲವನ್ನು ಈರುಳ್ಳಿ ರಸದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಯ ಚರ್ಮದ ಭಾಗಕ್ಕೆ ನಯವಾಗಿ ಹಚ್ಚಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶ್ಯಾಂಪೂವಿನಿಂದ ಸ್ವಚ್ಛಗೊಳಿಸಿ.

ಈರುಳ್ಳಿ ರಸ ಮತ್ತು ಬಿಸಿ ನೀರು ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ ಬಳಸಬಹುದು. ಅಗತ್ಯದಷ್ಟು ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಒಂದೇ ತಿಂಗಳಲ್ಲಿ ಅದರ ವ್ಯತ್ಯಾಸ ನಿಮಗೇ ತಿಳಿಯುತ್ತದೆ.

Last modified on 19/07/2018

Share this article

About Author

Super User