Print this page

ಶೀರೂರು ಸ್ವಾಮಿಜಿ ಸಾವಿನ ಹಿಂದೆ ಹೊರಬೀಳುತ್ತಿವೇ ರಹಸ್ಯಗಳು

 

ವಿಳಂಬವಾಗುತ್ತಿರುವ ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷೆ ವರದಿ! ಮೂಲಮಠದ ಸ್ವರ್ಣಾ ನದಿಯಲ್ಲಿ ಇನ್ನೊಂದು ಡಿವಿಆರ್ ಪತ್ತೆ

ಉಡುಪಿ: ಶೀರೂರು ಶ್ರೀಗಳ ಅಸಹಜ ಸಾವಿನ ತನಿಖೆ ಮುಂದುವರೆಯುತ್ತಿದ್ದು,ಹಲವು ರಹಸ್ಯಗಳು ನಿಗೂಢ ರೀತಿಯಲ್ಲಿ ಪತ್ತೆಯಾಗುತ್ತಿವೆ. ಲಕ್ಷ್ಮೀವರ ಸ್ವಾಮಿಜಿ ಸಾವಿನ ಬಗ್ಗೆ ಪೋಲಿಸ್ ಆಯಾಮಗಳು ತನಿಖೆ ನಡೆಸುತ್ತಿದ್ದು,ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.ಆದರೆ ಖಚಿತ ಮಾಹಿತಿಯಿಲ್ಲದ ಕಾರಣ ಯಾರನ್ನು ಬಂಧನಕ್ಕೆ ಒಳಪಡಿಸಿಲ್ಲ.


ಶ್ರೀಗಳ ಸಾವು ಅಸಹಜ ಎಂದು ಹೇಳಿದ ವೈದ್ಯರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೋಲಿಸರು ಕಾಯುತ್ತಿದ್ದು,ಎರಡು ಮೂರು ದಿನಗಳಲ್ಲಿ ವರದಿ ಬರುವ ಸಾದ್ಯತೆಯಿದೆ ಎಂದು ಭಾವಿಸಿದ್ದ ಪೋಲಿಸರಿಗೆ ವರದಿ ಇನ್ನೂ ಕೈ ಸೇರದಿರುವುದು ತನಿಖೆಗೆ ವಿಳಂಬವಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಎಫ್.ಎಸ್.ಎಲ್ ರಿಪೋರ್ಟ್ ಬರಲಿದೆ.

6 ವಾರಗಳ ಬಳಿಕ ರಿಪೋರ್ಟ್ ಬರುವ ಸಾಧ್ಯತೆಯಿದ್ದು, ನಿಜವಾದ ಮುಖವಾಡ ಬಯಲಾಗಲಿದೆ. ಶೀರೂರು ಮಠದ ಆವರಣದ ಬಾವಿಯಲ್ಲಿ ಒಂದು ಡಿವಿಆರ್ ಸಿಕ್ಕಿದ್ದು,ಇನ್ನೊಂದು ಡಿವಿಆರ್ ಪತ್ತೆಯಾಗಿರಲಿಲ್ಲ. ಉಡುಪಿಯ ಹಿರಿಯಡ್ಕದಲ್ಲಿರುವ ಮೂಲಮಠದ ಸ್ವರ್ಣ ನದಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಪತ್ತೆಯಾಗಿರುವ ಡಿವಿಆರ್ ಅನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ, ಮುಂದೆ ತನಿಖೆ ಯಾವ ರೀತಿಯ ತಿರುವು ಪಡೆದು ಕೊಳ್ಳುತ್ತದೆ ಕಾದು ನೋಡಬೇಕಾಗಿದೆ

 

 

 

Last modified on 25/07/2018

Share this article

About Author

Madhu