Print this page

ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ .

 ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ. ಮಾಹಿತಿ ನೀಡಲು ಕೋರಿದೆ ಹುಲಿಯೂರು ದುರ್ಗ PSI .

ಕುಣಿಗಲ್: ಕುಣಿಗಲ್ ತಾಲ್ಲೂಕಿನ  ಸಂತೆ  ಮಾವತ್ತೂರು  ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಲದ ಬಳಿ ತೆರಳುತ್ತಿದ್ದ ರೈತರು ಬೆಳಿಗ್ಗೆ ಶವ ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ .22 ವರ್ಷ ವಯಸ್ಸಿನ ಹುಡುಗಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಿದ್ದು ಆಕೆಯ ದೇಹದ ಮೇಲೆ ಎಚ್ ಪಿ ಪೆಟ್ರೋಲ್ ಬಂಕ್ ಎಂದು ಗುರುತು ಇರುವ ಸಮವಸ್ತ್ರದ ಬಟ್ಟೆ ಇದೆ .ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಠಾಣೆಗೆ ಮಾಹಿತಿ ನೀಡಲು ಕೋರಿದೆ. PSI ಹುಲಿಯೂರು ದುರ್ಗ .

Share this article

About Author

Madhu