Print this page

ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 23-24 ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕನ್ನಡಿಗರು ಪ್ರಧಾನಿ.... ಸಿ.ಎಂ. ಕುಮಾರಸ್ವಾಮಿ.


ಮಂಡ್ಯ:  ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಸಮಾಧಾನ ಹೊರಹಾಕಿದರು. ಸಾಂಸ್ಕೃತಿಕ ಕಾರ್ಯಕ್ರಮ ಬಿಟ್ಟು ಇಷ್ಟು ದೊಡ್ಡ ಅಭಿವೃದ್ಧಿ ಆಗಲಿಲ್ಲ. ಅಂದು ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿಲ್ಲ ಎಂದರು.ನಿಮ್ಮಗಳ ಋಣ ನಮ್ಮ ಮೇಲೆ ಇದೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ನಾನು ಸಿದ್ಧ. ಇನ್ನೂ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು. ಮೈಶುಗರ್ ವಿಚಾರವಾಗಿ 450 ಕೋಟಿ ವೆಚ್ಚದಲ್ಲಿ ಹೊಸ ಕಾರ್ಖಾನೆ ಮಾಡಲಾಗುವುದು. ಏಪ್ರಿಲ್- ಮೇ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಪ್ರಧಾನಿ ಬೆಳಗ್ಗೆ ಎದ್ದ ತಕ್ಷಣ ಬಣ್ಣದ ಮಾತುಗಳನ್ನು ಬಿಡ್ತಾರಲ್ಲ, ಹಾಗೇ ನಾನು ಬಿಡೋದಿಲ್ಲ. ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ಖಜಾನೆಯಲ್ಲಿ ಇನ್ನೂ ‌6 ಸಾವಿರ ಕೋಟಿ ಇಟ್ಟಿದ್ದೇನೆ. ಬ್ಯಾಂಕ್‌ಗಳಲ್ಲಿ ರೈತರು ಅಡಮಾನ ಇಟ್ಟಿರುವ ಆಭರಣಗಳ ರಕ್ಷಣೆ ಹಾಗೂ ವಾಪಸ್ ರೈತರಿಗೆ ‌ಸಿಗುವಂತೆ ಮಾಡಲು ರಾಜ್ಯ ಸರ್ಕಾರದಿಂದ ಹೊಸ ಯೋಜನೆ ರೂಪಿಸಲಾಗಿದೆ. ಈ ವರ್ಷದಿಂದ ಯೋಜನೆ ಜಾರಿಗೆ ಬರಲಿದೆ ಎಂದು ಸಿಎಂ ಘೋಷಣೆ ಮಾಡಿದರು.ಮುಂದಿನ ಲೋಕಸಭಾ ಚುನಾವಣೆ ಅಷ್ಟು ಸುಲಭದ ಚುನಾವಣೆ ಅಲ್ಲ. ನೀವು ಕೊಟ್ಟ ಶಕ್ತಿಯಿಂದ ದೇವೇಗೌಡರು ಪ್ರಧಾನಿ ಆದರು. ಈ ನಾಡಿನಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 23-24 ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕನ್ನಡಿಗರು ಮತ್ತೆ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂದರು.
 
ನಂತರ ಮಾತನಾಡಿದ ಸಂಸದ ಶಿವರಾಮೇಗೌಡ ಮುಂದಿನ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು. ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದರು. ಕಾರ್ಯಕ್ರಮ ಹಲವು ವೈರುಧ್ಯಗಳಿಗೆ ಕಾರಣವಾಗಿದೆ. ಕಾಮಗಾರಿ ಹಂಚಿಕೆ ವಿಚಾರವಾಗಿ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನಗೊಂಡು‌ ಅದ್ದೂರಿ ಕಾರ್ಯಕ್ರಮದಿಂದ ಹೊರಗೆ ಉಳಿದರು ಎಂದು ಹೇಳಲಾಗಿದೆ. ಕೆ.ಆರ್.ಎಸ್.ನ ಶೇಷ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಲು ಸರ್ಕಾರ ಹಿಂದೇಟು ಹಾಕಿದೆ ಎಂದು ಗೈರಾಗಿದ್ದಾರೆ ಎಂದು ಹೇಳಲಾಗಿದೆ.


Share this article

About Author

Madhu