Print this page

ಎಡ ಕಾಲು ಮುರಿದು ನರಕಯಾತನೆ ಪಡುತ್ತಿದ್ದ ಕಾಡನೆಗೆ ..ಚಿಕಿತ್ಸೆ.!

ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸುಳ್ಯ:  ತಾಲೂಕಿನ ಬಾಳುಗೋಡು ಎಂಬಲ್ಲಿ ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತಿದ್ದು ನುರಿತ ವೈದ್ಯಕೀಯ ತಜ್ಞರು ಹಾಗೂ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.ಬಾಳುಗೋಡು ಗ್ರಾಮ ಸಮೀಪದ ಪದಕ ಎಂಬಲ್ಲಿ ಗಂಡು ಕಾಡಾನೆಯೊಂದು ಕಾಲು ಗಾಯಗೊಂಡು ನಡೆದಾಡಲೂ ಆಗದೆ ಯಾತನೆ ಪಡುತ್ತಿತ್ತು.

ಈ ಸ್ಥಳವು ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಪ್ರದೇಶವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಮೂರು ದಿನಗಳ ನಿರಂತರವಾದ ಪರಿಶ್ರಮದ ನಂತರ ಇಂದು ಚಿಕಿತ್ಸೆ ನೀಡಲಾಗಿದೆ.ನಾಗರಹೊಳೆಯಿಂದ ನುರಿತ ವೈದ್ಯಕೀಯ ತಜ್ಞರಾದ ಡಾಕ್ಟರ್ ಮುಜೀಬ್ ಹಾಗೂ ಗುತ್ತಿಗಾರು ಪಶುವೈದ್ಯ ಡಾಕ್ಟರ್ ವೆಂಕಟಾಚಲಪತಿಯವರ ಹಾಗೂ ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು.

ದಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ತಜ್ಞರು ಅರಿವಳಿಕೆ ಔಷಧಿ ನೀಡುವ ಮೂಲಕ ಆನೆಯನ್ನು ತಮ್ಮ ನಿಯಂತ್ರಣಕ್ಕೆ ತಂದು ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಆನೆಯ ಚಲನವಲನಗಳನ್ನು ಗಮನಿಸಲು ಅರಣ್ಯಾಧಿಕಾರಿಗಳ ತಂಡವನ್ನು ಈ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಆಸ್ಟೀನ್ ಪಿ ಸೋನ್ಸ್, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಪಂಜ ಅರಣ್ಯ ರಕ್ಷಕ ಹಾಗೂ ಅರಣ್ಯ ‌ವೀಕ್ಷಕರಾದ ಸಂತೋಷ್, ಸುಬ್ರಹ್ಮಣ್ಯ ಮತ್ತು ಪಂಜ ವಲಯಗಳ ಅರಣ್ಯ ರಕ್ಷಕರು, 25 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದರು.

Share this article

About Author

Madhu

Media