Print this page

ಕಾಲೇಜು ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕ ವರ್ಗದವರಿಂದ ಹಲ್ಲೆ.! ಹಿಗ್ಗಾಮುಗ್ಗಾ ಥಳಿಸೊ ವೀಡಿಯೋ ವೈರಲ್ .

ಪ್ರಾಂಶುಪಾಲರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ವಿದ್ಯಾರ್ಥಿಗಳನ್ನು ಅಮಾನುಷವಾಗಿ cರೊ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹಾಸನ: ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಕಾಲೇಜು ಪ್ರಾಧ್ಯಾಪಕ ವರ್ಗದವರಿಂದ ವಿದ್ಯಾರ್ಥಿಗಳ ದ್ವಿಚಕ್ರವಾಹನದ ಗಾಳಿ ಬಿಟ್ಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ನಡೆದಿದೆ.ಇಂದು ಸರ್ಕಾರಿ ಕಲಾ ಕಾಲೇಜಿಗೆ ರಜೆ ಘೋಷಣೆ ಆಗಿದ್ದರೂ ಕೂಡಾ, ವಿದ್ಯಾರ್ಥಿಗಳು ಹೋಳಿ ಹಬ್ಬ ಆಚರಣೆ ಮಾಡಲೆಂದು ಕೆಲ ವಿದ್ಯಾರ್ಥಿಗಳು ಕಾಲೇಜು ಬಳಿ ಬಂದಿದ್ದರು. ಹೋಲಿ ಆಚರಣೆಗೆ ಬಂದ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಕಾಲೇಜು ಆವರಣದ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ.

ವಾಹನ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಕೆಲ ಪ್ರಾಧ್ಯಾಪಕರು ಕಾಲೇಜು ಇಲ್ಲದಿದ್ದರೂ ಕಾಲೇಜು ಆವರಣದಲ್ಲಿ ಬೈಕ್ ನಿಲ್ಲಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳ ಬೈಕ್ ನ ಟೈಯರ್ ನ ಗಾಳಿ ಬಿಟ್ಟಿದ್ದಾರೆ. ಹೋಳಿ ಮುಗಿಸಿಕೊಂಡು ವಾಹನವನ್ನು ತೆಗೆದುಕೊಳ್ಳಲು ಬಂದ ವಿದ್ಯಾರ್ಥಿಗಳಿಗೆ ದ್ವಿಚಕ್ರವಾಹನದ ಗಾಡಿ ಬಿಟ್ಟಿರುವ ಕಂಡು ಸಿಟ್ಟಾಗಿದ್ದಾರೆ. ಯಾರೋ ಕಿಡಿಗೇಡಿಗಳು ಇಂತಹ ಕೃತ್ಯವನ್ನು ಮಾಡಿದ್ದಾರೆ ಅಂತ ಸಿಟ್ಟಿನಲ್ಲಿ ಸ್ಥಳದಲ್ಲೇ ಕೆಲ ಅವ್ಯಾಚ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿಯೇ ಇದ್ದ ಬರುವ ಪ್ರಾಧ್ಯಾಪಕ ತನ್ನ ಮಾತನ್ನು ಕೇಳಿಸಿಕೊಂಡ ಬಳಿಕ ಕುಪಿತಗೊಂಡು ಆತನಿಗೆ ಹಲ್ಲೆ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ ವಿದ್ಯಾರ್ಥಿ ಮೇಲೆ ಮತ್ತೆ ಅದೇ ಪ್ರಾಧ್ಯಾಪಕ ಮರು ಹಲ್ಲೆ ಮಾಡಿದ್ದಾನೆ. ಆದರೆ ಇದನ್ನು ಅಲ್ಲೇ ಸ್ಥಳದಲ್ಲಿದ್ದ ಮತ್ತು ಇಬ್ಬರು ವಿದ್ಯಾರ್ಥಿಗಳು ಪ್ರಶ್ನೆ ಮಾಡಿ ಸರ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಿದ್ದಾರೆ ನಾವು ನಿಲ್ಲಿಸುತ್ತಿರಲಿಲ್ಲ ಆದರೆ ಈಗ ಗಾಳಿ ಇಲ್ಲದ ವಾಹನ ತಳ್ಳುವುದು ತುಂಬಾ ಕಷ್ಟ ಅಂತ ಪ್ರಶ್ನೆ ಮಾಡಿದ್ದಾರೆ.ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ರಾಜಪ್ಪ ಮತ್ತು ದೈಹಿಕ ಶಿಕ್ಷಕ ಮಹೇಂದ್ರಪ್ಪ, ಸತ್ಯಮೂರ್ತಿ ಹಾಗೂ ಗಿರೀಶ್ ನಮ್ಮನ್ನೇ ಪ್ರಶ್ನೆ ಮಾಡುತ್ತೀಯ ಎಂದು ಆ ನಾಲ್ಕು ಮಂದಿ ಸೇರಿ ಚಂದ್ರಶೇಖರ್ ಎಂಬ ವಿದ್ಯಾರ್ಥಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ ಜೊತೆಗೆ ಕಾಲಿನಿಂದ ಒದೆಯೂವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ.

ಘಟನೆಯ ವಿಡಿಯೋವನ್ನ ಸ್ಥಳದಲ್ಲಿದ್ದ ಕೆಲ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಚಿತ್ರಿಕರಿಸಿ ಕ್ಷಣ ಮಾತ್ರದಲ್ಲಿ ನೂರಾರು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹಾಗೂ ಜಾಲತಾಣಗಳ ಮೂಲಕ ಹರಿ ಬಿಟ್ಟಿದ್ದಾರೆ. ಜೊತೆಗೆ ಕಾಲೇಜು ಮತ್ತು ಪ್ರಾಧ್ಯಾಪಕ ವರ್ಗದವರ ವಿರುದ್ಧ ಕೂಡ ವಿದ್ಯಾರ್ಥಿಗಳು ದೂರು ದಾಖಲು ಮಾಡಲು ಸಾಧ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಹೇಳಬೇಕಾದರೆ ಗುರುಗಳೇ ರೌಡಿಗಳು ರೀತಿಯಲ್ಲಿ ವರ್ತನೆ ಮಾಡಿದ್ದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಆದರೆ ಇಲ್ಲಿ ಪ್ರಾಧ್ಯಾಪಕರೊಂದಿಗೆ ಪ್ರಾಂಶುಪಾಲರು ಕೂಡ ಸೇರಿ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ.

Share this article

About Author

Madhu

Media