Print this page

ನಾಳೆ ದೇಶವ್ಯಾಪಿ ಬಂದ್!! ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತ.

ನಾಳೆ ದೇಶವ್ಯಾಪಿ ಬಂದ್ ,ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ.

ಬೆಂಗಳೂರು : ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ -2017 ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶವ್ಯಾಪಿ ಬಂದ್​ಗೆ ಕರೆ ನೀಡಿವೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಹಲವು ಸಾರಿಗೆ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿರುವುದರಿಂದ ನಾಳೆ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ನಾಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ.ಎಐಆರ್ಟಿಡಬ್ಲ್ಯುಎಫ್, ಎನ್ಎಫ್ಐಆರ್ಟಿಡಬ್ಲ್ಯು, ಎಚ್ಎಂಎಸ್, ಟಿಯುಸಿಐ, ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹತ್ತಾರು ಸಂಘಟನೆಗಳು ಜಂಟಿಯಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಸೂದೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತದೆ.

ಮಸೂದೆಗೆ ವಿರೋಧ ಏಕೆ?:

  • ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2107 ಯೂ ರಸ್ತೆ ಸಂಚಾರ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ವಿಪರೀತ ದಂಡ ವಿಧಿಸುತ್ತದೆ.
  • “ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಕ್ಕಿಂತ ವಿಪರೀತ ದಂಡ ವಸೂಲಿ ಮಾಡುವ ಸಲುವಾಗಿ ಮಸೂದೆ ಜಾರಿಗೆ ತಂದು, ಬಡ ಸಾರಿಗೆ ಕಾರ್ಮಿಕರ ಜೀವನದ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ,” ಎಂಬುದು ಸಾರಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖ ವಿರೋಧವಾಗಿದೆ.

    ಮಸೂದೆಯಲ್ಲಿನ ಪ್ರಸ್ತಾವಿತ ದಂಡ, ಯಾವುದಕ್ಕೆ ಎಷ್ಟು?:  ಸಾಮಾನ್ಯ ತಪ್ಪಿಗೆ ಈಗ ಇರುವ 100 ರೂ.ನಿಂದ 500ರಿಂದ 1,500 ರೂ.ವರೆಗೆ ದಂಡ ,ರಸ್ತೆ ನಿಯಂತ್ರಣ ನಿಯಮಗಳ ಉಲ್ಲಂಘನೆಗೆ 100 ರೂ.ಯಿಂದ 500ರಿಂದ 1000 ರೂ.ವರೆಗೆ    ದಂಡ.ಅಧಿಕಾರಿಗಳ ಆದೇಶ ಪಾಲಿಸದೆ ಇರುವುದಕ್ಕೆ 500 ರೂ.ಯಿಂದ 2000 ರೂ.ವರೆಗೆ ದಂಡ.ಅತಿ ವೇಗ ಚಾಲನೆಗೆ 400 ರೂ.ನಿಂದ 1000 ರೂ.ವರೆಗೆ ದಂಡ.ಪರ್ಮಿಟ್ ಇಲ್ಲದ ವಾಹನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ದಂಡ 

ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್​ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.

ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.ಖಾಸಗಿ ಶಾಲೆಗಳು ಯಥಾಸ್ಥಿತಿಯಾಗಿ ನಡೆಯಲಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ. 

ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಮೂಡಿದೆ. ಮಸೂದೆಗೆ ವಿರೋಧವಿದ್ದರೂ ಬಂದ್ ನಲ್ಲಿ ಪಾಲ್ಗೊಳ್ಳದೇ ಇರದಂತೆ ಎಐಟಿಯುಸಿ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಎಐಟಿಯುಸಿ ಸಂಘಟನೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೆಲ ಬಿಎಂಟಿಸಿ ಬಸ್ ಗಳು ರಸ್ತೆಗಳಿಯೋ ಸಾಧ್ಯತೆ ಇದೆ.ಓಲಾ, ಊಬರ್, ಅಸಂಘಟಿತ ಆಟೋ ನೌಕರರಷ್ಟೇ ಬೆಂಬಲ ನೀಡಲಿದ್ದು, ಸಂಘಟಿತ ಆಟೋ ನೌಕರರು ಕೂಡ ಬೆಂಬಲ ವಾಪಸ್ ಪಡೆದಿದ್ದಾರೆ. ಮೇಘ ಮೇರು ಕ್ಯಾಬ್ ಗಳ ಬೆಂಬಲ ನೀಡಿದ್ದು, ಮೊದಲೇ ಬುಕಿಂಗ್ ಆಗಿರೋ ಕ್ಯಾಬ್ಗಳು ಸೇವೆ ನೀಡಲಿವೆ.

ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್​ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.

Share this article

About Author

Madhu