Print this page

ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲಾರಿಗೂ ಒಂದೆ ನಳೀನ್ ಕುಮಾರ್

ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲಾರಿಗೂ ಒಂದೆ ನಳೀನ್ ಕುಮಾರ್
ಹಾಸನ: ಪ್ರಜಾಪ್ರಭುತ್ವದಲ್ಲಿ ಕಾನೂನು ಎಂಬುದು ಎಲ್ಲಾರಿಗೂ ಒಂದೆ ಎಂದು ಡಿ.ಕೆ. ಶಿವಕುಮಾರ್ ಬಂಧನದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ತಿಳಿಸಿದರು.

​ ​ ​ ​ ನಗರದ ಎಂ.ಜಿ. ರಸ್ತೆ ಬಳಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ ಕಾನೂನಡಿ ಶಿಕ್ಷೆ ಆಗಲೇಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ರವರನ್ನು ಬಂಧಿಸಲಾಗಿದೆ. ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡಿದ್ದರೇ ನಿರ್ದೋಷಿ ಆಗಬೇಕಾಗಿತ್ತು. ಯಾವ ದಾಖಲೆ ನೀಡದ ಕಾರಣ ಪೊಲೀಸರು ಬಂಧಿಸಿದ್ದಾರೆ ಎಂದರು. ಬೀದಿಗೆ ಬಂದು ಕಲ್ಲು ಎಸೆಯುವುದು, ಬೆಂಕಿ ಹಾಕುವುದು ಇದು ಯಾವ ಮಾರ್ಗವಾಗಿದೆ ಎಂದು ಪ್ರಶ್ನಿಸಿದರು. ಶಿವಕುಮಾರ್ ವಿರುದ್ಧ ಎರಡು ವರ್ಷಗಳ ಹಿಂದೆ ಪ್ರಕರಣವನ್ನು ದಾಖಲು ಮಾಡಲಾಗಿದೆ ವರತು ಇದು ಹೊಸ ಪ್ರಕರಣವಲ್ಲ. ಇಲ್ಲಿವರೆಗೂ ಕೆಳಿದ ದಾಖಲೆ ಕೊಡದ ಕಾರಣ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಯಾವ ಕಾರಣಕ್ಕೂ ಏಕಾಏಕಿ ಬಂಧಿಸಲು ಮುಂದಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಪಕ್ಷಕ್ಕೂ ಈ ವಿಚಾರದಲ್ಲಿ ಯಾವ ಸಂಬಂಧವಿರುವುದಿಲ್ಲ. ಕಾರ್ಯಕರ್ತರು ಬಿಜೆಪಿ ಸಂಘಟನೆಗೆ ಮುಂದಾಗಿ ಸಂಘಟಿಸುವಂತೆ ಕರೆ ಕೊಟ್ಟರು.

​ ​ ​ ​ ಈಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ, ಶಾಸಕ ಪ್ರೀತಮ್ ಜೆ. ಗೌಡ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಎ. ಮಂಜು, ಹೆಚ್.ಎಂ. ವಿಶ್ವನಾಥ್, ಬಸವರಾಜು ಇತರರು ಪಾಲ್ಗೊಂಡಿದ

Share this article

About Author

Super User