Print this page

ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಟ. ಸುಮ್ಮನೆ ಕೈ ಕಟ್ಟಿ ಕುಳಿತ ಜಿಲ್ಲಾಡಳಿತ.....

ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಟ. ಸುಮ್ಮನೆ ಕೈ ಕಟ್ಟಿ ಕುಳಿತ ಜಿಲ್ಲಾಡಳಿತ.....

ಚನ್ನರಾಯಪಟ್ಟಣ:  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದೆ ದಿನ ನಿತ್ಯ ಸುತ್ತಮುತ್ತಲಿನ ಗ್ರಾಮಿಣ ಪ್ರದೇಶದ ರೈತರು ಶಾಲ ಮಕ್ಕಳು, ಗೃಹಿಣಿಯರು ಬಂದು ಸರತಿ ಸಾಲಿನಲ್ಲಿ ನಿಂತು ಕಾಯುವ ಕೆಲಸವೇ ನೆಡೆಯುತ್ತಿದೆ .

ಬೆಳಗ್ಗೆ 6 ಗಂಟೆಯಿಂದ ಕಾಯುವವರಿಗೆ ದಿನಕ್ಕೆ 25 ಜನಕ್ಕೆ ಮಾತ್ರ ಟೋಕನ್ ನೀಡುತ್ತಿದ್ದು, ಪ್ರತಿದಿನ250 ಜನ ಸಾಲಿನಲ್ಲಿ ನಿಂತು ನಂತರ ನಿರಾಸೆಯಿಂದ ಮನೆಗೆಹೊಗುವ ಪರಿಸ್ಥಿತಿ ಇದೆ .ಇತ್ತ ತಾಲೂಕು ಅಡಳಿತ ಗಮನ ಹರಿಸದೆ ಸುಮ್ಮನೆ ಕೈ ಕಟ್ಟಿ ಕುಳಿತಿದೆ . ಶಾಸಕರನ್ನು ಬೇಟಿ ಮಾಡಿದ ಜನರಿಗೆ ಶಾಸಕರು ಅದಕ್ಕೂ ನನಗೂ ಸಂಬಂಧವಿಲ್ಲ ಅದು ಸರ್ಕಾರಿ ಕಚೇರಿಯಲ್ಲಿ ಕೇಳಿ ಎಂದು ಉತ್ತರಿಸುತ್ತಿದ್ದಾರೆ ಎಂದು ಕೆಂಡಮಂಡಲವಾಗಿದ್ದಾರೆ.

ಇನ್ನೂ ಜಿಲ್ಲ ಅಡಳಿತ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಾರ್ ಕೇಂದ್ರ ಗಳನ್ನು ತೆರೆಯಬೇಕು ಇಲ್ಲ ದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರ ಅಧಿಕಾರಿಗಳಿ ಎಚ್ಚರಿಕೆ ನೀಡಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತಾ ಕಾದು ನೊಡಬೇಕಿದೆ ...     ಸುದ್ದಿಜಾಲ ನ್ಯೂಸ್ ಹಾಸನ

Share this article

About Author

Madhu