Print this page

ಶ್ರವಣಬೆಳಗೊಳದ ಸರ್ಕಾರಿ ಶಾಲ ಮಕ್ಕಳಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ.

ಶ್ರವಣಬೆಳಗೊಳದ ಸರ್ಕಾರಿ ಶಾಲ ಮಕ್ಕಳಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯವನ್ನು ಆಯೋಜಿಸಿದ ರಾಯಲ್ ಹಾಲಿಡ್ಸೆ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆಮಾಡಿದರು .

 ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀ ವಿಘ್ನಶ್ವರ ನಾಟಕ ಮಂಡಳಿ ಸರ್ಕಾರಿ ಪ್ರಾಥಮಿಕ ಶಾಲೆ ಶ್ರವಣಬೆಳಗೊಳ ವತಿಯಿಂದ ರಾತ್ರಿ ಯಿಡಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಅತೀ ಸುಂದರ ಹಾಗೂ ವಿನೂತನ ಮತ್ತು ಬೇರೆ ಶಾಲೆಗಳಿಗೆ ಮಾದರಿಯಾಗಿ ಮಕ್ಕಳು ಅಭಿನಯಿಸಿದರು .ಕಾರ್ಯಕ್ರಮ ಅಧ್ಯಕ್ಷರಾಗಿ ಬರಬೇಕಿದ್ದ ಶ್ರವಣಬೆಳಗೊಳ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಕೃಷ್ಣರವರ ಅನುಪ ಸ್ಥಿತಿಯಲ್ಲಿ ಅವರ ಧರ್ಮಪತ್ನಿ ಕುಸುಮಾ ಬಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಮೂಡಿ ಬಂತು ಜೊತಿ ಬೆಳಗುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಕುಸುಮರವರು ಇಂತ ಕಾರ್ಯಕ್ರಮ ಮೂಡಿಬಂದಿರೂವುದು ಬಹಳ ಖುಷಿಕೊಡುವ ಸಂಗತಿ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳುವಳಿಕೆ ಹೊಗಲಾಡಿಸಿ ಮಕ್ಕಳ ಕಲೆಯನ್ನು ಹೊರಗೆ ತಂದಿರುವ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಅಭಿನಂದನ ಸಲ್ಲಿಸಿದ್ದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತಿ ಸದ್ಯಸ ಮಮತ ರಮೇಶ್  ನಾವು ದಿನನಿತ್ಯ ಟಿವಿಗಳಲ್ಲಿ ಮಕ್ಕಳು ನಾಟಕ ಮಾಡುವುದನ್ನು ನೊಡಿರುತ್ತವೆ ಅದರೆ ಇಂದು ನಮ್ಮ ಕ್ಷೇತ್ರದ ಶಾಲಮಕ್ಕಳು ಇಡಿ ರಾತ್ರಿ ನಾಟಕ ಅಬಿನಯಿಸಿರುವುದು ನಮ್ಮ ಕ್ಷೇತ್ರ ಕ್ಕೆ ಮಾತ್ರವಲ್ಲದೆ ಇಡಿ ರಾಜ್ಯ ಕ್ಕೆ ಹೆಮ್ಮೆಯ ಸಂಗತಿ ಎಂದರು. ರಾಯಲ್ ಹಾಲಿಡೆಸ್ ಕಂಪನಿಯ ಪ್ರಭು ರವರು ಮಾತನಾಡಿ  ನಾವು ಕೇವಲ ಖಾಸಗಿ ಶಾಲೆಯ ಮಕ್ಕಳು ಕಾರ್ಯಕ್ರಮ ಕೊಡುವುದನ್ನು ನೊಡಿದ್ದವೆ ಅದರೆ ನಮ್ಮ ಶಾಲೆಯ ಮಕ್ಕಳು ವಿಭಿನ್ನವಾಗಿ ರಾತ್ರಿ ಯಿಡಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಅಭಿನಯಿಸಿರುವುದು ರಾಜ್ಯಕ್ಕೆ ಕೀರ್ತಿ ತರುವಂತಹ ವಿಷಯ ಹಾಗೂ ನಮ್ಮ ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶಾಲೆಯ ಶಿಕ್ಷಕರ ವೃದಂಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಇ ರೀತಿ ಕಾರ್ಯಕ್ರಮ ಕ್ಕೆ ನಮ್ಮ ಪ್ರೋತ್ಸಾಹ ನೀಡಲು ನಾವು ಸಿದ್ದ ಎಂದರು.

ಕೃಷಿ ಇಲಾಖೆಯ ಸಾಗರ್ ಮಾತನಾಡಿ ನಮ್ಮ ಶಾಲೆಯ ಮಕ್ಕಳು ವಿನೂತನ ವಾಗಿ ಕಲೆಯನ್ನು ಎತ್ತಿ ಹಿಡಿದು ನಮ್ಮ ಶ್ರವಣಬೆಳಗೊಳ  ಕೀರ್ತಿಯನ್ನು ನಮ್ಮ ರಾಜ್ಯಕ್ಕೆ ಸಾರಿದ್ದರೆ ಹಾಗೂ ಇ ರೀತಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಬಂದರೆ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚುವುದು ಕಡಿಮೆಯಾಗುತ್ತದೆ ಎಂದು ಮಕ್ಕಳು ಮತ್ತು ಶಿಕ್ಷಕರನ್ನು ಹಾಡಿಹೊಗಳಿದರು. ನಂತರ ಶಾಲ ಮಕ್ಕಳಿಗೆ  ಕಾರ್ಯವನ್ನು ಆಯೋಜಿಸಿದ ರಾಯಲ್ ಹಾಲಿಡ್ಸೆ ಬೆಂಗಳೂರು ಕಂಪನಿಯಿಂದ ಉಚಿತವಾಗಿ ನೂರಾಐವತ್ತು ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆಮಾಡಿದರು .ನಂತರ ಅದ್ಯಕ್ಷತೆ ವಹಿಸಿದ್ದ ಕುಸುಮಾ ಬಾಲಕೃಷ್ಣ ರವರಿಗೆ ರಾಯಲ್ ಹಾಲಿಡ್ಸ್ ಕಂಪನಿಯವರು ಸನ್ಮಾನ ಮಾಡಿದರು. 

ಕಾರ್ಯಕ್ರಮ ದಲ್ಲಿ ಗೋಪಾಲ ಸ್ವಾಮಿ, ಲತಾ ರಮೇಶ್, ಮಂಜುಳ ಶಂಕರ್,ರಾಯಲ್ ಹಾಲಿಡೆಸ್ ಕಂಪನಿಯ ರೀಪ್ಸನ್  ಯತೀಶ್ ದೇವಾಡಿಗ, ಸುನೀಲ್ ಪೂಜಾರಿ, ದರ್ಮೆಶ್, ರಾಘವೇಂದ್ರ, ಪ್ರ ಕಾಶ್ ,ಅಶಾ, ಶೋಭಾ.ಸಿಅರ್ಪಿ ಹೆಚ್.ಎಂ ರುದ್ರೆಶ್ ಹಾಗೂ ಶಿಕ್ಷಕರರಾದ ಪುಟ್ಟಸ್ವಾಮಿ ರವಿಚಂದ್ರನ್, ರಾಧಿಕಾ .ಶಶಿಕಲಾ ವಿ ಕೆ ಹಾಗೂ ಎಲ್ಲಾ ಮಕ್ಕಳು ಮತ್ತಿತರರು ಭಾಗವಹಿಸಿದರು.

 

.

Share this article

About Author

Madhu