Print this page

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು

 ಮುಂಬೈ: ಪತ್ರಿಕಾ ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗಳನ್ನು ತಡೆಯಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ ಈ ಸಂಬಂಧ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸುವ ಅವಕಾಶವಿದೆ. ಮಹಾರಾಷ್ಟ್ರ ಮಾಧ್ಯಮ ಪ್ರತಿನಿಧಿಗಳ ಮತ್ತು ಮಾಧ್ಯಮ ಸಂಸ್ಥೆಗಳ ಮೇಲಿನ ಹಲ್ಲೆ ಆಸ್ತಿ ಹಾಗೂ ತಡೆ ಮಸೂದೆ 2017 ರಲ್ಲಿ ಈ ಅವಕಾಶವಿದೆ.ಮುದ್ರಣ, ವೆಬ್, ಮತ್ತು ಟಿವಿ ಮಾಧ್ಯಮದವರ ಮೇಲಿನ ಹಲ್ಲೆಗಳನ್ನು ತಡೆಯಲು ಇದು ನೆರವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಕರ್ನಾಟಕದಲ್ಲಿಯೂ ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚಿದ್ದು , ಪಾರದರ್ಶಕ ವರದಿಯಿಂದ ದೂರ ಉಳಿಯುವಂತಾಗಿದೆ. ವಾಸ್ತವವಾಗಿ, ಸತ್ಯವಾದ ವರದಿ ಮಾಡಿದರೇ ಸುದ್ದಿಗಾರರಿಗೆ ಹಲ್ಲೆ ಮಾಡುವುದು, ಅಟ್ರಾಸಿಟಿ ಕೇಸ್ ದಾಖಲಿಸುವುದು ನಡೆಯುತ್ತಿದ್ದು ಖಂಡನೀಯ.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ನಾಲ್ಕನೇ ಅಂಗವಾಗಿದ್ದು ಮಹಾರಾಷ್ಟ್ರ ದಂತೆ ಕರ್ನಾಟಕದಲ್ಲೂ ಜಾರಿ ಮಾಡಬೇಕೆಂದು ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಹಾಗೂ ವರದಿಗಾರರ ಸಂಘ, ನ್ಯಾಷನಲ್ ಮೀಡಿಯಾ ಕೌನ್ಸಿಲ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಪ್ರೆಸ್ ಕ್ಲಬ್, ಬೆಂಗಳೂರು ಪ್ರೆಸ್ ಕ್ಲಬ್, ಸಂಪಾದಕರ ಸಂಘಟನೆ, ವರದಿಗಾರರ ಕೂಟಗಳು ಆಗ್ರಹಿಸಿವೆ.

Last modified on 28/07/2018

Share this article

About Author

Madhu