Print this page

ಕಾರ್ಗಿಲ್ ಯುದ್ಧ ಬಗ್ಗೆ ನಿಮಗೆ ಎಷ್ಟು ಗೊತ್ತು? ಇಲ್ಲಿದೇ ಮಾಹಿತಿ...

ಕಾರ್ಗಿಲ್ ಯುದ್ಧ ಹೀರೊಗಳು.... ದೇಶಕ್ಕಾಗಿ ನಿಮ್ಮ ಪ್ರಾಣಾರ್ಪಣ – ಇದೋ ನಿಮಗೆ ನಮ್ಮ ಅಶ್ರು ತರ್ಪಣ

ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೇ ಬೆನ್ನಿಗೆ ಚೂರಿಹಾಕುವುದು ಪಾಕಿಸ್ತಾನದ ಹುಟ್ಟುಗುಣ. ಕ್ರಿಕೆಟ್ ಆಡಿದಾಗ ನಾವು ಸೌಜನ್ಯದಿಂದ ವರ್ತಿಸಿದರೂ, ವಿಕೆಟ್ ಗಳನ್ನು ಕೈಲಿ ಹಿಡಿದು ವಿಕಾರವಾಗಿ ಅರಚುವುದು, ನಾವು ಗೆದ್ದರೆ ಅಸಹನೆ ತೋರುವುದು ಪಾಕಿಸ್ತಾನಕ್ಕೆ ರಕ್ತಗತ. ಆದರೂ ನಾವು ಪಾಕಿಸ್ತಾನದ ಕೃತ್ರಿಮವನ್ನು ಲೆಕ್ಕಿಸದೇ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ.

ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು, ನಮಸ್ಕರಿಸಿದರು, ಪರಸ್ಪರ ತಬ್ಬಿಕೊಂಡರು, ಕೊನೆಗೂ ಪಾಕಿಸ್ತಾನ-ಭಾರತದ ನಡುವಿದ್ದ ಹಳಸಿದ್ದ ಸಂಬಂಧ ಸರಿಹೋಯಿತೆಂಬ ಭ್ರಮೆಯಲ್ಲಿ ಮೆರೆಯುತ್ತಿದ್ದಾಗಲೇ ಮುಂಬಾಗಿಲಿನಿಂದ ವಾಜಪೇಯಿ ಅವರಿಗೆ ರಾಜೋಚಿತ ಮರ್ಯಾದೆಗಳಿಂದ ಬೀಳ್ಕೊಟ್ಟ ಪಾಕಿಸ್ತಾನ ಹಿಂಬಾಗಿಲಿನಿಂದ ಮೂಲ ಕಸುಬನ್ನು ಆರಂಭಿಸಿದ ಪಾಕಿಸ್ತಾನ 1977ರ ಒಪ್ಪಂದವನ್ನು ಮುರಿದಿತ್ತು. ವಾಜಪೇಯಿ ಭಾರತಕ್ಕೆ ತಲುಪುವುದರ ವೇಳೆಗೆ ಸ್ನೇಹ ಹಸ್ತ ಚಾಚಿದ್ದ ಭಾರತೀಯರನ್ನು ಮಟ್ಟಹಾಕುವ ತಂತ್ರ ರೆಡಿಯಾಗಿತ್ತು. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆಪಾಕಿಸ್ತಾನ ತಡ ಮಾಡಲೇ ಇಲ್ಲ.

ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ, 1977ರ ಒಪ್ಪಂದವನ್ನು ಮುಷರಫ್ ಗಾಳಿಗೆ ತೂರಿದ್ದ. ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು. ಆಗಲೇ ಕುಸಿಯಬೇಕಿದ್ದ ಪಾಕಿಗಳು ದೃತಿಗೆಡದೇ ತಮ್ಮ ಚಿಲ್ಲರೆ ಕೆಲಸಕ್ಕೆ ಬಂಡತನದಿಂದ ದೃತಿಗೆಡದೇ ಅಣಿಯಾದರು.

ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ವರದಿ ತರಲೆಂದು ಹೋದವರು ಪುಂಡ ಪಾಕಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಅವರು ಭಾರತೀಯ ಸೇನೆಗೆ ಮರಳಿ ಬಂದಿದ್ದು ತುಂಡುತುಂಡಾದ ಶವದ ಸ್ಥಿತಿಯಲ್ಲಿ!
ನವಾಜ಼್ ಷರೀಫ್ ಅವರೊಂದಿಗೆ ಕೈಕುಲುಕಿದ್ದ ವಾಜಪೇಯಿ ಅವರ ಸರ್ಕಾರ ನಡುಗಿತ್ತು, ಉಕ್ಕಿನ ಮನುಷ್ಯ ಅಡ್ವಾಣಿ ತುಕ್ಕು ಹಿಡಿದ ಬೇಹುಗಾರ ವ್ಯವಸ್ಥೆಯ ಬಗ್ಗೆ ಗಾಬರಿಗೊಂಡರು. ಸೇನಾ ಮುಖ್ಯಸ್ಥರೊಂದಿಗೆ ಮಾತುಕತೆ ಶುರುವಾಯ್ತು. ಆಪರೇಷನ್ ವಿಜಯ ಶುರುವಾಯ್ತು. ಸೈನ್ಯವೇನೋ ಚುರುಕಾಯಿತು ಸರಿ, ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ, ಬಾಂಧವರಿಗೇ ಬದುಕನ್ನು ಮುಡಿಪಾಗಿಟ್ಟು ಜಮ್ಮು-ಕಾಶ್ಮೀರವನ್ನು ಪಿತ್ರಾರ್ಜಿತ ಆಸ್ತಿ ಎಂದು ತಿಳಿದಿದ್ದ 'sick'ಯುಲರ್ ಜೀವಿಗಳ ಹೇಳಿಕೆಗಳು? ಆದರೆ ಇದ್ಯಾವುದೂ ತನಗೆ ಅರಿವೇ ಇಲ್ಲ, ರಾಷ್ಟ್ರ ರಕ್ಷಣೆ ಮಾತ್ರ ನಮ್ಮ ಕರ್ತವ್ಯ ಎನ್ನುತ್ತಿದ್ದ ಸೈನಿಕ ಮಾತ್ರ ಗಡಿಯಲ್ಲಿ ಚಡಪಡಿಸುತ್ತಿದ್ದ. ಏಕೆಂದರೆ ನಮ್ಮ ಸೈನಿಕರದ್ದು ಎಂದಿಗೂ ಅದೇ ದೈನೇಸಿ ಪರಿಸ್ಥಿತಿ. ಅವನ ಬಳಿ ಮಂಜಿನ ಬೂಟುಗಳಿರುವುದಿಲ್ಲ, ಬೆಚ್ಚನೆಯ ಬಟ್ಟೆಗಳೂ ಇರುವುದಿಲ್ಲ. ಪ್ರತಿ ಯುದ್ಧದಂತೆಯೇ ಈ ಬಾರಿಯ ಯುದ್ಧದಲ್ಲೂ ಇವ್ಯಾವುವೂ ಬೇಡ, ಒಂದಷ್ಟು ಮದ್ದು ಗುಂಡು, ಶಸ್ತ್ರಾಸ್ತ್ರ ಇದ್ದರೆ ಕೊಡಿ ಸಾಕು ಎಂದರು ಸೈನಿಕರು.
ತೋಲೋಲಿಂಗ್ ಬೆಟ್ಟ ಅದಾಗಲೇ ವೈರಿವಶವಾಗಿತ್ತು. ಅದನ್ನು ಮರಳಿ ಪಡೆಯಬೇಕಾದರೆ ಸೈನಿಕರು ಸಿಡಿದೆದ್ದರೂ ಅವರ ಕೈಲಿದ್ದ ಬಂದೂಕಿನೊಳಗಿದ್ದ ಅನೇಕ ಗುಂಡುಗಳು ಸಿಡಿಯಲೇ ಇಲ್ಲ. ಹಣದಾಸೆಗೆ ಭ್ರಷ್ಟಾಚಾರಕ್ಕೆ ಶರಣಾಗಿ ಅಧಿಕಾರಿಗಳು ರಾಜಕಾರಣಿಗಳೊಂದಿಗೆ ಶಾಮೀಲಾಗಿ ಉಪಯೋಗಕ್ಕೆ ಬಾರದ ಮದ್ದು ಗುಂಡುಗಳನ್ನು ಖರೀದಿಸಿದ್ದರು. ಮದ್ದು, ಗುಂಡುಗಳ ದಾಸ್ತಾನಿನ ಪರಿಸ್ಥಿತಿ ಹೀನಾಯವಾಗಿತ್ತು. ಇರುವ ಗುಂಡುಗಳನ್ನು ವರ್ಗೀಕರಿಸಿ, ಸಿಡಿಯುವ ಗುಂಡುಗಳನ್ನೇ ಹಂಚುವ ಕೆಲಸವೂ ಆಯ್ತು.

ಕಾರ್ಗಿಲ್ ಪಟ್ಟಣಕ್ಕೆ ಸುಮಾರು 20ಕಿ.ಮಿ ದೂರ, ದ್ರಾಸ್‌ನಿಂದ 6 ಕಿ.ಮಿ ಅಂತರದಲ್ಲಿರುವ ಬೆಟ್ಟ ತೋಲೋಲಿಂಗ್ ನ್ನು ಭಾರತೀಯರು ಮೊದಲು ವಶಪಡಿಸಿಕೊಳ್ಳಬೇಕಿತ್ತು. ಅದರ ಬುಡದಲ್ಲಿ ಸೈನಿಕರು ಸಿಡಿಯುವ ಬೋಫೋರ್ಸುಗಳನ್ನು ನಿಲ್ಲಿಸಿಕೊಂಡರು. ಗುಡ್ಡದ ಮೇಲೆ ಕುಳಿತ ಶತ್ರು ಸೈನಿಕರು ಇವನ್ನೆಲ್ಲ ನೋಡುತ್ತಲೇ ಇದ್ದರು. ಅವರು ಎಸೆಯುತ್ತಿದ್ದ ಶೆಲ್ ಸಿಡಿದಾಗ ಅದರಿಂದ ಹೊರಹೊಮ್ಮುವ ಸೀಸದ ಕಡ್ಡಿಗಳು ಭಾರತೀಯ ಸೈನಿಕರನ್ನು ಇರಿದು ಹತ್ಯೆ ಮಾಡುತ್ತವೆ. ಅಂತಹದರಲ್ಲೂ ನಮ್ಮ ಸೈನಿಕರು ದೃಢವಾಗಿ ನಿಂತರು. ಐದುನೂರು ಜನ ಪಾಕ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಯುದ್ಧ ಕೊನೆಯಾಗುವ ವೇಳೆಗೆ ಈ ಸಂಖ್ಯೆ 5ಸಾವಿರವಾದರೂ ಇರಬಹುದು ಎಂದು ಗೊತ್ತಾಯಿತು. ಇಂಥಾ ಸನ್ನಿವೇಶದಲ್ಲಿಯೂ ನಮ್ಮ ಸೈನಿಕರು ಬೆಟ್ಟದ ಮೇಲೆ ಹತ್ತಲಾರಂಭಿಸಿದರು.
ಬೆಟ್ಟದ ಮೇಲೆ ಭಯಾನಕ ಯುದ್ಧ ನಡೆಯಿತು. ಅಂತೂ ಜುಲೈ 13ಕ್ಕೆ ತೋಲೋಲಿಂಗ್ ನಮ್ಮ ವಶವಾಯ್ತು. ಪಾಕಿಗಳ ಗುಂಡಿನ ದಾಳಿಗೆ ಜಗ್ಗದ ಭಾರತೀಯರ ಹೋರಾಟದ ಫಲವಾಗಿ ಜುಲೈ 15ಕ್ಕೆ ಟೈಗರ್ ಹಿಲ್ ಭಾರತದ ಕೈಲಿತ್ತು. ಒಂದೊಂದು ಬೆಟ್ಟ ವಶಪಡಿಸಿಕೊಳ್ಳುತ್ತ ನಡೆದಂತೆ ನಮ್ಮ ಶಕ್ತಿ ವೃದ್ಧಿಸಿತು, ಪಾಕಿಗಳದ್ದು ಕ್ಷೀಣ. ಒಂದು ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಬಾತ್ರಾ ಟೆಲಿವಿಷನ್ ಚಾನಲ್‌ಗಳಲ್ಲಿ ಕಾಣಿಸಿಕೊಂಡು, ಒಂದು ಬೆಟ್ಟ ಸಾಲದು, ಇನ್ನೂ ಬೇಕೆಂದರು, ಹೀಗೆಂದವರೇ 2ದಿನಗಲಲ್ಲಿ ಶತೃಗಳ ಗುಂಡಿಗೆ ಬಲಿಯಾದರು. ಕರ್ನಲ್ ವಿಶ್ವನಾಥನ್ ಕದನ ಭೂಮಿಯಲ್ಲಿ ದೇಶಕ್ಕಾಗಿ ದೇಹತ್ಯಾಗ ಮಾಡಿದ್ದರು. ತನ್ನ ರಕ್ತದ ಸಾಮರ್ಥ್ಯ ತೋರುವ ಮುನ್ನ ಮೃತ್ಯು ಬಂದರೆ ಆ ಮೃತ್ಯುವನ್ನೇ ಕೊಂದುಬಿಡುತ್ತೇನೆ ಎಂದು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಮನೋಜ್ ಕುಮಾರ್ ಪಾಂಡೆ ತನ್ನಾಸೆಯಂತೆಯೇ ಸಾಮರ್ಥ್ಯ ಸಾಬೀತುಪಡಿಸಿಯೇ ದೇಶಕ್ಕಾಗಿ ಪ್ರಾಣ ಸಮರ್ಪಿಸಿದರು. ಪರಮವೀರ ಚಕ್ರವನ್ನು ಮರಣೋತ್ತರವಾಗಿ ಕೊಡಲಾಯ್ತು. ಒಬ್ಬರು, ಇಬ್ಬರು....? ಊಹುಂ ದೇಹಕ್ಕಾದ ಗಾಯಗಳನ್ನೂ ಲೆಕ್ಕಿಸದೇ ರಾಷ್ಟ್ರದ ಗಾಯವನ್ನು ಸರಿಪಡಿಸಲು ನಿಂತ 524 ಕಲಿಗಳನ್ನು ನಾವು ಕಾರ್ಗಿಲ್ ಯುದ್ಧದಲ್ಲಿ ಕಳೆದುಕೊಂಡಿದ್ದೇವೆ.

ಸೋತು ಸುಣ್ಣವಾದ ಪಾಕಿಸ್ತಾನ ತನ್ನ ಸೈನಿಕರಿಗೆ ಎಷ್ಟು ಕೃತಘ್ನ ಎಂದರೆ, ಸತ್ತ ಸೈನಿಕರ ಶವ ಸ್ವೀಕಾರ ಮಾಡಲಿಲ್ಲ. ಏಕೆಂದರೆ ಒಪ್ಪಂದ ಮುರಿದು ದಾಳಿ ಮಾಡಿದ್ದು ತಾನೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಹೆದರಿಕೆ!. ಪಾಕ್ ಸೈನಿಕರ ಅನಾಥ ಶವಗಳಿಗೆ ಮುಕ್ತಿ ದೊರಕಿಸಲು ಬೇಕಾಗಿದ್ದೂ ಭಾರತದ ಪವಿತ್ರವಾದ ಸೈನಿಕರೇ....ನಾವಿಂದು ಉಸಿರಾಡುತ್ತಿದ್ದರೆ ಅದಕ್ಕೆ ಭಾರತೀಯ ಸೈನಿಕರೇ ಕಾರಣ.... ಪಾಕಿಸ್ತಾನ, ಚೀನಾದಂತಹ ಕಪಟಿಗಳ ಗುಂಡಿಗೆ ಎದೆಯೊಡ್ಡಿ ಎದೆಗುಂದದೇ ದೇಶ ರಕ್ಷಸಿದ ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ. ಮರೆಯಲೂ ಬಾರದು.... ಇಂದು ಕಾರ್ಗಿಲ್ ವಿಜಯ್ ದಿವಸ್ ನ 18ನೇ ವರ್ಷಾಚರಣೆ. ಪಾಕ್ ನಿಂದ ದೇಶವನ್ನು ರಕ್ಷಿಸಿ ಅಮರರಾದ ಸೈನಿಕರನ್ನು ನೆನೆಯೋಣ....


ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಅಂಥಾ ವೀರ ಯೋಧರಿಗೆ ನಮನ ಸಲ್ಲಿಸಲು ಜೂನ್ 26ನ್ನು ಪ್ರತಿವರ್ಷ ಕಾರ್ಗಿಲ್ ದಿವಸವನ್ನಾಗಿ ಆಚರಿಸುತ್ತೇವೆ. ಆದರೆ, ಈ ಬಾರಿಯ ಆಚರಣೆಯು ವಿಶೇಷವಾಗಿ ತೀರಾ ದುಃಖದಾಯಕ. ಯಾಕೆಂದರೆ ನಮ್ಮನ್ನು ಆಳುವವರಿಗೆ ನಮ್ಮ ವೀರಯೋಧರನ್ನು ನೆನಪಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ! ಎಂಥಾ ದುರಂತವಿದು!

ಹೌದು, ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು.

1999ರ ಫೆಬ್ರವರಿ ತಿಂಗಳಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಐತಿಹಾಸಿಕ ಲಾಹೋರ್ ಬಸ್ ಯಾತ್ರೆಯ ಮೂಲಕ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದ್ದರಲ್ಲದೆ, ಲಾಹೋರ್ ಘೋಷಣೆಗೆ ಸಹಿ ಹಾಕಿದ್ದರು. ಕಾಶ್ಮೀರ ಬಿಕ್ಕಟ್ಟಿಗೆ ಶಾಂತಿಯುತವಾದ ದ್ವಿಪಕ್ಷೀಯ ಪರಿಹಾರ ಕಂಡುಕೊಳ್ಳುವ ಘೋಷಣೆಯಾಗಿತ್ತದು.

ಆದರೆ, ಅವರು ಭಾರತಕ್ಕೆ ವಾಪಸ್ ಬಂದಿದ್ದೇ ತಡ, ಬೆನ್ನಿಗೇ ಚೂರಿ ಇರಿದ ಪಾಕಿಸ್ತಾನವು, ಗಡಿ ನಿಯಂತ್ರಣ ರೇಖೆಯೊಳಗೆ ತನ್ನ ಸೈನಿಕರನ್ನು ನುಗ್ಗಿಸಿತು. ಮಾಮೂಲಿ ಗುಂಡಿನ ಚಕಮಕಿ, ಉಗ್ರರ ಒಳನುಸುಳುವಿಕೆ ಎಂದು ಅರಿತಿದ್ದ ಭಾರತೀಯ ಸೇನೆಗೆ, ಕೊನೆಗೆ ಇದು ಪಾಕಿಸ್ತಾನ ಸೇನೆಯ ಅತಿಕ್ರಮಣ ಎಂದು ಅರಿವಾದಾಗ, ಪೂರ್ಣ ಪ್ರಮಾಣದಲ್ಲಿ ಸೈನಿಕರು ದೇಶರಕ್ಷಣೆಗೆ ನಿಂತರು. ಇದೆಲ್ಲ ದುಸ್ಸಾಹಸದ ಹಿಂದಿದ್ದದ್ದು ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಪರ್ವೇಜ್ ಮುಷರ್ರಫ್ ಎಂಬ ಧೂರ್ತ. ಆತ 1998ರ ಅಕ್ಟೋಬರ್ ತಿಂಗಳಲ್ಲಿ ಪಾಕ್ ಸೇನೆಯ ನೊಗವನ್ನು ತನ್ನ ಕೈಗೆ ತೆಗೆದುಕೊಂಡಂದಿನಿಂದ ಭಾರತದ ಮೇಲೆ ಆಕ್ರಮಣಕ್ಕೆ ಯೋಜನೆ ರೂಪಿಸುತ್ತಲೇ ಇದ್ದ. "ಆಪರೇಶನ್ ಬದ್ರ್" ಎಂಬ ದುಸ್ಸಾಹಸಕ್ಕೆ ಕೈಹಚ್ಚಿದ ಪಾಕಿಸ್ತಾನವು ಕಾಶ್ಮೀರ ಕಣಿವೆಯಿಂದ ಲಡಾಖ್ ಅನ್ನು ಬೇರ್ಪಡಿಸಿ, ಸಿಯಾಚಿನ್ ಗ್ಲೇಷಿಯರ್ ಅನ್ನು ವಶಪಡಿಸಿಕೊಳ್ಳುವ ಯೋಜನೆ ರೂಪಿಸಿತು.

ಕಾಶ್ಮೀರದಲ್ಲಿ ಆಗ ಮೈ ಗಡ್ಡೆಕಟ್ಟುವಷ್ಟು ಚಳಿಯ ಸಮಯ. ಸುಮಾರು ಮೈನಸ್ 48 ಡಿಗ್ರಿವರೆಗೂ ಒಮ್ಮೊಮ್ಮೆ ಶೈತ್ಯವು ತಲುಪುತ್ತದೆ. 1971ರ ಶಿಮ್ಲಾ ಒಪ್ಪಂದದ ಅನುಸಾರ, ಉಭಯ ರಾಷ್ಟ್ರಗಳೂ ಗಡಿ ನಿಯಂತ್ರಣ ರೇಖೆಯ ಗುಂಟ, ಮಾನವೀಯ ನೆಲೆಯಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವುದು ಸಂಪ್ರದಾಯ. ಆದರೆ, ಇದನ್ನೇ ಭಾರತದ ಒಳಗೆ ನುಗ್ಗಲು ಅವಕಾಶವಾಗಿ ಮಾಡಿಕೊಂಡ ಪಾಕಿಸ್ತಾನವು, ವಿಪರೀತ ಪರಿಸ್ಥಿತಿಯ ದುರ್ಲಾಭ ಪಡೆದು ಉಗ್ರರನ್ನೂ, ಸೈನಿಕರನ್ನೂ ಕಾರ್ಗಿಲ್ ವಲಯದ 160 ಕಿ.ಮೀ. ಗಡಿ ನಿಯಂತ್ರಣ ರೇಖೆಯೆಲ್ಲೆಡೆ ಒಳಗೆ ತಳ್ಳಿತು.

ಗನ್ನುಗಳು, ಗ್ರೆನೇಡುಗಳು, ವಿಮಾನವನ್ನೂ ಹೊಡೆದುರುಳಿಸಬಲ್ಲ ಅತ್ಯಾಧುನಿಕ ಆಯುಧಗಳಿಂದೊಡಗೂಡಿದ ಪಾಕಿ ಸೈನಿಕರು ಒಳ ನುಗ್ಗುತ್ತಿರುವುದು ಭಾರತೀಯ ಸೇನೆಯ ಗಮನಕ್ಕೆ ಬಂದಾಕ್ಷಣ, ವಾಜಪೇಯಿ ಸರಕಾರವು 'ಆಪರೇಶನ್ ವಿಜಯ್' ಕಾರ್ಯಾಚರಣೆ ಆರಂಭಿಸಿಯೇಬಿಟ್ಟಿತು. ಪಾಕ್ ಅತಿಕ್ರಮಿಸಿಕೊಂಡಿರುವ ಪ್ರತಿಯೊಂದು ಇಂಚು ನೆಲವನ್ನೂ ವಾಪಸ್ ಪಡೆದುಕೊಳ್ಳುವಂತೆ ವಾಜಪೇಯಿ ಆದೇಶಿಸಿದರು.

1999ರ ಜೂನ್ 7ರಂದು ವಾಜಪೇಯಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಐತಿಹಾಸಿಕ ಭಾಷಣ - "ನಮ್ಮ ಸೇನಾಪಡೆಗಳ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ. ನಮ್ಮ ಸೈನಿಕರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ, ಬೇರೆ ಯಾರು ಕೂಡ ಮುಂದೆಂದಿಗೂ ಇಂತಹಾ ದುಸ್ಸಾಹಸಕ್ಕೆ ಇಳಿಯದಂತೆ ಮಾಡುತ್ತಾರೆ". ಇದರಿಂದ ಪ್ರೇರಿತರಾದ ಸೈನಿಕರು ಪಾಕಿಸ್ತಾನಿ ಸೇನೆಯು ಕುಯ್ಯೋ... ಮುರ್ಯೋ,... ಎಂದು ಕೂಗಾಡುತ್ತಾ, ದಯವಿಟ್ಟು ಭಾರತದ ಪ್ರಹಾರವನ್ನು ನಿಲ್ಲಿಸಿ ಎಂದು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಕಾಲು ಹಿಡಿಯುವಲ್ಲಿವರೆಗೆ ತಲುಪಿತ್ತು.

20 ಸಾವಿರ ಮಂದಿ ಭೂಸೇನಾ ಪಡೆ ಯೋಧರು, 10 ಸಾವಿರ ಮಂದಿ ವಾಯು ಸೇನೆ, ಪ್ಯಾರಾ ಮಿಲಿಟರಿ ಪಡೆಯವರು ಗಡಿಯಲ್ಲಿ ಟೊಂಕ ಕಟ್ಟಿದರು. ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ, ಸಮುದ್ರ ಮಟ್ಟಕ್ಕಿಂತ 16 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಭಾರತೀಯ ಸೈನಿಕರು ಮೆರೆದಾಡಿದರು. ಶತ್ರುಗಳ ರುಂಡ ಚೆಂಡಾಡಿದರು. ವಾಯುಸೇನೆಯು ಭೂಸೇನಾ ಪಡೆಗಳಿಗೆ "ಆಪರೇಶನ್ ಸಫೇದ್ ಸಾಗರ್" ಮೂಲಕ ಬೆಂಬಲ ನೀಡುತ್ತಾ, ಉಗ್ರರು ಮತ್ತು ಪಾಕ್ ಸೈನಿಕರತ್ತ ಬಾಂಬ್ ಸುರಿಮಳೆಗರೆಯುತ್ತಿದ್ದರೆ, ಸೈನಿಕರು ಕೆಳಗೆ ವೀರಾವೇಶದಿಂದ ಹೋರಾಡಿದರು. ಈ ಯುದ್ಧದ ವಿಶೇಷತೆಯೆಂದರೆ, ಭಾರತವು ತನ್ನ ನೆಲದಲ್ಲೇ ಹೋರಾಡಿತೇ ಹೊರತು, ಎಂದಿಗೂ ಗಡಿ ನಿಯಂತ್ರಣ ರೇಖೆ ದಾಟಿ ಹೋಗಲಿಲ್ಲ. ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಮಾನ್ಯತೆ ನೀಡಿತ್ತು ಅದು. ಈ ಮೂಲಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಹೋರಾಟದಲ್ಲಿ ಮೇಲುಗೈ ಪಡೆಯಲು ಕೂಡ ಭಾರತಕ್ಕೆ ಸಾಧ್ಯವಾಯಿತು. ಪಾಕಿಸ್ತಾನವು ಸೋತು ಸುಣ್ಣವಾಯಿತು. ತಲೆ ತಗ್ಗಿಸಿತು. ಭಾರತದ ಒತ್ತಡ ತಾಳಲಾರದೆ ನವಾಜ್ ಶರೀಫ್ ಅವರಂತೂ ವಾಷಿಂಗ್ಟನ್‌ಗೆ ಧಾವಿಸಿ ಬಿಲ್ ಕ್ಲಿಂಟನ್ ಕಾಲು ಹಿಡಿಯುವುದು ಬಾಕಿ - ದಯವಿಟ್ಟು ಹೇಗಾದರೂ ಮಾಡಿ ಯುದ್ಧ ನಿಲ್ಲಿಸಿ ಅಂತ ಗೋಗರೆಯಬೇಕಾಯಿತು.


1999ರ ಜುಲೈ 4ರಂದು ಕ್ಲಿಂಟನ್-ಶರೀಫ್ ಭೇಟಿಯಾದಾಗ, ಕ್ಲಿಂಟನ್ ಅಂತೂ ಪಾಕಿಗೆ ಬೆನ್ನು ಹಾಕಿಬಿಟ್ಟರು. ಪಾಕ್ ಸೈನಿಕರನ್ನು ಮೊದಲು ಭಾರತೀಯ ಭಾಗದಿಂದ ವಾಪಸ್ ಕರೆಸಿಕೊಳ್ಳಿ ಅಂತ ಸೂಚಿಸಿದಾಗ, ಶರೀಫ್ ಹತಾಶರಾಗಿದ್ದರು. ಯಾಕೆಂದರೆ, ಎಲ್ಲವೂ ಮುಷರಫ್ ಕೈಯಲ್ಲಿತ್ತು. ಅಷ್ಟು ಹೊತ್ತಿಗೆ ಅದಾಗಲೇ ಭಾರತದ ವೀರ ಯೋಧರು ಶೇ.80 ಭಾಗವನ್ನೂ ಮರಳಿ ಪಡೆದಿದ್ದರು. ಕೊನೆಯಲ್ಲಿ ಜುಲೈ 26ರಂದು ಕಾರ್ಗಿಲ್‌ನ ಕೊನೆಯ ಠಾಣೆಯನ್ನು ಭಾರತೀಯ ಸೇನೆ ವಶಪಡಿಸಿಕೊಂಡು ಗೆಲುವು ಘೋಷಿಸಿತು. ಅದುವೇ ಕಾರ್ಗಿಲ್ ವಿಜಯ ದಿವಸ. ಭಾರತವು ಯುದ್ಧದಲ್ಲಿ ಗೆಲುವು ಸಾಧಿಸಿ ತನ್ನ ಸೇನಾ ತಾಕತ್ತು ತೋರಿಸಿತಾದರೂ, ಅದಾಗಲೇ ತನ್ನ 527 ಮಂದಿ ವೀರಪುತ್ರರನ್ನು ಕಳೆದುಕೊಂಡಿತ್ತು. ಈ ದಿನ ಈ ಹುತಾತ್ಮ ವೀರರನ್ನು ಸ್ಮರಿಸೋಣ.

ಮಹ-ಮಹಾನ್ ನಾಯಕರ ಜನ್ಮ ದಿನಕ್ಕೋ, ಪುಣ್ಯ ತಿಥಿಗೋ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಲ್ಲಿ ಜಾಹೀರಾತು ರಾರಾಜಿಸುತ್ತಿರುತ್ತದೆ. ಪ್ರತಿಯೊಂದು ಸಚಿವಾಲಯವೂ ನಮ್ಮ ಮಾಜಿ ಪ್ರಧಾನಿಗಳ ಸೇವೆಯನ್ನು ನೆನಪಿಸುತ್ತದೆ. ಆದರೆ, ಗಡಿ ಕಾಯುತ್ತಾ, ಪ್ರಾಣತ್ಯಾಗ ಮಾಡಿದ ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳಲು ನಮಗೆ ಪುರುಸೊತ್ತಿಲ್ಲ. ಯಾಕೆಂದರೆ, ನಾವೆಲ್ಲರೂ ಈಗ "ಭ್ರಷ್ಟಾಚಾರದ ವಿರುದ್ಧ" ಹೋರಾಡುತ್ತಿದ್ದೇವಲ್ಲಾ? ದೇಶ ಕಾಯ್ದ ಸಮರ ವೀರರಿಗಿದೋ ಸಾಸಿರ ಸಾಸಿರ ನಮನಗಳು. ಅದೇ ರೀತಿ, ದೇಶಕ್ಕೇ ಮುಳುವಾಗುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ವೀರ ಯೋಧರೂ ನಾವಾಗೋಣ. ಅಲ್ಲವೇ?



ಜೂನ್ ಜುಲೈ ಬಂತೆಂದರೆ ಸಾಕು ಮನಸ್ಸು ತನ್ನಿಂತಾನೆ ಕಾರ್ಗಿಲ್ ನ್ನು ನೆನಪಿಸಿಕೊಳ್ಳುತ್ತದೆ. ಬಾಳು ಕೊನೆಯಾದೀತು ಎನ್ನುವ ಅಸ್ತಿರತೆಗೆ ಜಗ್ಗದೆ ಹೋರಾಡಿದ ಯೋಧರ ಪ್ರೇರಣಾದಾಯಕ ಜೀವನ ಮನದಲ್ಲಿ ಸಾವಿರ ಸಾವಿರ ಯೋಚನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲಿ ಪ್ರತಿ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ಕುಟುಂಬಿಕರ ವ್ಯಥೆಯಿದೆ. ಸಮಯಾಸಮಯವಿಲ್ಲದೆ ಇವರುಗಳು ತೋರಿದ ಧೈರ್ಯ, ತ್ಯಾಗ ಎಂದಿಗೂ ಚಿರಸ್ಥಾಯಿ! 2015 ಜುಲೈ 26 ರಂದು 16 ನೇ ಕಾರ್ಗಿಲ್ ವಿಜಯ ದಿವಸ ಆಚರಿಸುವ ತವಕದಲ್ಲಿದ್ದೇವೆ ನಾವುಗಳು… ಆದರೆ ಈ ವಿಜಯ ದಿವಸ ಆಚರಿಸಲು ನಮಗಾಗಿ ಮಡಿದ 527 ಯೋಧರನ್ನು ಸ್ಮರಿಸದೇ ಹೋದರೆ, ವಿಜಯ ದಿವಸಕ್ಕೆ ಅರ್ಥವಾದರೂ ಎಲ್ಲಿಂದ??? 527 ರಲ್ಲಿ ಕೆಲವರನ್ನಾದರೂ ಸ್ಮರಿಸುವ ಮೂಲಕ ಸಾರ್ಥಕ ಬದುಕು ನಡೆಸಿದ ಅವರಿಗೆಲ್ಲಾ ನುಡಿ ನಮನ ಸಲ್ಲಿಸುವ ಪ್ರಯತ್ನ ಇಲ್ಲಿದೆ..

 

“ಸೇನೆಗೆ ಸೇರಿದ ಕೂಡಲೇ ನಿನ್ನ ಬ್ರೈನ್ ತೆಗೆದು ಗನ್ ಕೊಡುತ್ತಾರೆ. ನೀನು ರಿಟೈರ್ಡ್ ಆಗೋವಾಗ ಗನ್ ಕಿತ್ತುಕೊಂಡು ಬ್ರೈನ್ ವಾಪಾಸ್ ಕೊಡೋದನ್ನು ಮರೆಯುತ್ತಾರೆ” ಹೀಗಂತ ಅಣ್ಣ ವೈಭವ್ ಕಾಲಿಯಾ ಹೇಳಿದಾಗ ಸೈನ್ಯ ಸೇರುವ ಹಂಬಲದಲ್ಲಿದ್ದ ಸೌರಭ್ ಕಾಲಿಯಾ ಅದನ್ನು ಕೇರ್ ಮಾಡಲಿಲ್ಲ. ಆತನಿಗಿದ್ದಿದ್ದು ಸೈನ್ಯ ಸೇರುವ ಗುರಿಯೇ ಹೊರತು ಜೀವದ ಹಂಗಲ್ಲ. ಸೌರಭ್ ಗೆ ಡಾಕ್ಟರ್ ಆಗಬೇಕೆಂಬ ಆಸೆಯಿತ್ತು, ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಪರೀಕ್ಷೆಗೆ ಅರ್ಜಿ ಕರೆದಿದ್ದರು, ಸೌರಭ್ ನ ಸ್ನೇಹಿತ ಬಳಗವೆಲ್ಲಾ ಪರೀಕ್ಷೆ ಕಟ್ಟಿದರು. ಆದರೆ ಪರೀಕ್ಷೆ ಬರೆದು ಪಾಸಾಗಿದ್ದು ಸೌರಭ್ ಮತ್ತೆ ಆತನ ಇನ್ನೊಬ್ಬ ಸ್ನೇಹಿತ ಮಾತ್ರ. ಪಾಸಾಗಿದ್ದೇ ತಡ, ಡಾಕ್ಟರ್ ಆಗಬೇಕೆಂಬ ಕನಸಿನ ಬದಲು ಸೈನ್ಯ ಸೇರುವ ಹಂಬಲ ಉತ್ಕಟವಾಗಿತ್ತು. ಪಾಸಾಗಿದ್ದು ಬರೆಯುವ ಪರೀಕ್ಷೆಯಲ್ಲಷ್ಟೇ. ನಂತರದ ಮೆಡಿಕಲ್ ಟೆಸ್ಟಿನಲ್ಲಿ ಎರಡು ಬಾರಿ, ಒಮ್ಮೆ ಹೃದಯದ ಸಣ್ಣ ತೊಂದರೆ ಮತ್ತೊಮ್ಮೆ ಟಾನ್ಸಿಲ್ಸ್ ತೊಂದರೆ ಎಂಬ ಕಾರಣಕ್ಕಾಗಿ ತಿರಸ್ಕರಿಸಲ್ಪಟ್ಟಿದ್ದ. ಆದರೆ ಸೈನ್ಯದ ಕನಸು, ಮನಸಿನಲ್ಲಿ ಬೇರೆ ಯಾವುದಕ್ಕೂ ಜಾಗವಿರದಷ್ಟು ಆವರಿಸಿತ್ತು. ಇದ್ದ ದೈಹಿಕ ಕೊರತೆಗಳನ್ನೆಲ್ಲಾ ನೀಗಿಸಿಕೊಂಡು ಸೌರಭ್ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿಯೇ ಬಿಡುತ್ತಾನೆ.

1998 ಡಿಸೆಂಬರ್ ಕೊನೆಯ ವಾರ, ಕೇವಲ 22 ವರ್ಷದ ಸೌರಭ್ ಕಾಲಿಯಾ ಜಾಟ್ ರೆಜಿಮೆಂಟ್ -4 ಸೇರಲು ಅಣಿಯಾಗಿದ್ದ. ಕನಸು ನನಸಾಗಿತ್ತು. ಅಮೃತಸರದ ರೈಲ್ವೇ ನಿಲ್ದಾಣದಲ್ಲಿ ತನ್ನ ಮನೆಯವರಿಗೆ ವಿದಾಯ ಹೇಳಿ ಕೈ ಬೀಸಿ ಹೊರಟೇ ಬಿಟ್ಟ ಸೌರಭ್ ಕಾಲಿಯಾ. ಆತನ ಮೊದಲ ಪೋಸ್ಟಿಂಗ್ ಇದ್ದುದೇ ಜಮ್ಮು ಕಾಶ್ಮೀರದ ಕಾರ್ಗಿಲ್ ಗೆ! ಸೈನ್ಯಕ್ಕೆ ಸೇರಿ ಸರಿಯಾಗಿ ಆರು ತಿಂಗಳು, ಜೂನ್ ಆರರಂದು ದಿನ ಪತ್ರಿಕೆಯನ್ನು ನೋಡಿದಾಗಲೇ ತಮಾಷೆ ಮಾಡಿದ್ದ ಮನೆಯವರಿಗೆ ಸೌರಭ್ ನ ಸ್ನೇಹಿತರಿಗೆಲ್ಲಾ ಸೈನಿಕನ ಜೀವನ ವಾಸ್ತವ ಎಂಬ ಕಹಿ ಸತ್ಯ ದುತ್ತೆಂದು ನಿಂತಿತ್ತು. ವಿಷಯವೇನೆಂದರೆ ಮೇ 1 ರಿಂದ ಸೌರಭ್ ಹಾಗೂ ಜೊತೆಗಿದ್ದ ಸೈನಿಕರು ಕಾಣೆಯಾಗಿದ್ದಾರೆ ಎಂದು. ಮತ್ತೊಂದು ಟ್ವಿಸ್ಟ್ ಏನೆಂದರೆ ಎಪ್ರೀಲ್ 30 ಕ್ಕೆ ತಮ್ಮ ವೈಭವ್ ನ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಕರೆಮಾಡಿದ್ದ ಸೌರಭ್ ಅಮ್ಮನ ಜೊತೆಗೂ ಮಾತಾಡಿದ್ದ ಅಲ್ಲದೇ ಕೆಲವು ದಿನಗಳ ಕಾಲ ಕಾಲ್ ಮಾಡದೇ ಇದ್ದರೆ ಗಾಬರಿ ಆಗಬೇಡಿ, ದೂರ ತೆರಳಬೇಕಾದ ಸಂದರ್ಭ ಬರಬಹುದು ಎಂದು ಹೇಳಿದ್ದ, ವಾಪಾಸ್ ಬಂದ ಕೂಡಲೇ ಕಾಲ್ ಮಾಡುತ್ತೇನೆ ಎಂದು ಏನೋ ಹೇಳಿದ್ದ. ಆದರೆ ಸೌರಭ್ ಗೆ ತಿಳಿದಿರಲಿಲ್ಲ ಕಾಲ್ ಮಾಡಲೇ ಆಗದಷ್ಟು ದೂರ ತೆರಳುತ್ತೇನೆ ಎಂದು…

ದಿನ ಪತ್ರಿಕೆ ಓದಿದ ತಮ್ಮ ವೈಭವ್ ನೇರವಾಗಿ ಅಪ್ಪನ ಆಫೀಸಿಗೆ ತೆರಳುತ್ತಾನೆ. ಅಮ್ಮನಿಗೋ ಪತ್ರಿಕೆಯಲ್ಲಿ ಬಂದ ಸುದ್ದಿಯಲ್ಲಿ ನಂಬಿಕೆಯೇ ಇಲ್ಲ. ಸಹಜವೇ ಅದು! ಮೇ 10ರ ದಿನಾಂಕ ಹೊಂದಿದ ಸೌರಭ್ ನ ಲೆಟರ್ ಅಲ್ಲಿ ಜೂನ್ 29ಕ್ಕೆ ಬರುತ್ತೇನೆ ತನ್ನ ಹುಟ್ಟಿದ ಹಬ್ಬ ಇದೆಯಲ್ಲಾ ಎಂದು ಬೇರೆ ಅಮ್ಮನಿಗೆ ಪ್ರಾಮಿಸ್ ಮಾಡಿದ್ದ. ಮಗ ಪ್ರಾಮಿಸ್ ತಪ್ಪಿಸುವುದುಂಟೇ, ಅಲ್ಲದೇ ಮೇ 10 ಕ್ಕೆ ಲೆಟರ್ ಹಾಕಿದ ಮಗ ಮೇ ಒಂದಕ್ಕೆ ಕಾಣೆಯಾಗಿದ್ದಾನೆ ಎಂದರೆ?? ಅರ್ಥವಿಲ್ಲ ಎಂಬ ಪ್ರತಿಪಾದನೆ ಅಮ್ಮಂದು. ಅದಲ್ಲದೇ ಕಾಣೆಯಾಗಿದ್ದಾರೆ ಎಂದರೆ ಸೇನೆಯಿಂದ ಸಂದೇಶವೂ ಬರುತ್ತದೆ ಎಂಬ ನಂಬಿಕೆ.

ಆದರೆ ಗೇಲಿ ಮಾಡಿದ್ದ ತಮ್ಮನಿಗೆ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ, ನೇರವಾಗಿ ದಿನಪತ್ರಿಕೆ ಕಛೇರಿಗೆ ಹೋಗುತ್ತಾನೆ ಅಲ್ಲಿ ರಿಪೋರ್ಟ್ ಬಗ್ಗೆ ಕೇಳಿದಾಗ, ಆರ್ಮಿ ಆಸ್ಪತ್ರೆಯಲ್ಲಿ ಸೇರಿದ ಸೈನಿಕನೊಬ್ಬ ತಿಳಿಸಿದ ಎನ್ನುತ್ತಾರೆ. ಸರಿ ಅಲ್ಲಿಗೆ ವೈಭವ್ ನ ಆತಂಕ ಹೆಚ್ಚಾಗುತ್ತದೆ. ದೆಹಲಿಗೆ ಕಾಲ್ ಮಾಡಿ ವಿಚಾರಿಸಿದರೆ ಮೇ 1 ರಿಂದಲೇ ಕಾಣೆಯಾಗಿದ್ದಾರೆ ಎಂಬ ಉತ್ತರ. ಮೇ 10 ರಂದು ಲೆಟರ್ ಬಂದಿದೆ, ಎಪ್ರೀಲ್ 30 ಕ್ಕೆ ಕಾಲ್ ಮಾಡಿದ್ದ ಮೇ 1 ರಂದು ಕಾಣೆಯಾಗಲು ಸಾಧ್ಯವೇ ಇಲ್ಲ ಎಂಬ ವಾದ ವೈಭವ್ ನದ್ದು. ಕೊನೆಗೂ ಹೇಗೇಗೋ ಮಾಡಿ ಆಗಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರನ್ನು ಸಂಪರ್ಕಿಸಿದಾಗ ಸಿಕ್ಕಿದ ಉತ್ತರ – ಮೇ 15 ರಂದು ಗಸ್ತು ತಿರುಗಲು ಹೋಗಿದ್ದ ಲೆಫ್ಟಿನೆಂಟ್ ಸೌರಭ್ ಜೊತೆಗೇ ಸಿಪಾಯಿ ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾರಾಮ್, ಮೂಲಾರಾಮ್, ನರೇಶ್ ಸಿಂಗ್ ಇವರುಗಳನ್ನು ಪಾಕಿಸ್ತಾನಿಗಳು ಅಪಹರಿಸಿದ್ದಾರೆ’

ಮುಂದಿನದು … ಅದು ದುರಂತ ಅಧ್ಯಾಯ.. ನಮ್ಮಲ್ಲಿ ಯುಧ್ಧ ಧರ್ಮ ಅನ್ನೋದಿದೆ. ಶತ್ರುಗಳು ಮಲಗಿರುವಾಗ, ಶರಣಾದ ಮೇಲೆ ದಾಳಿ ಮಾಡಬಾರದು ಎಂದು ಆ ಧರ್ಮ ಹೇಳುತ್ತದೆ. ಆದರೆ ಆ ಧರ್ಮಾಂಧ ಧೂರ್ತ ರಾಷ್ಟ್ರಕ್ಕೆ ಅದ್ಯಾವುದೂ ಇರಲಿಲ್ಲ.. ನಮ್ಮ ಸೈನಿಕರನ್ನು ಅಪಹರಿಸಿದ್ದೇನೋ ಹೌದು, ಆದರೆ ಮುಂದಿನ 22 ದಿನಗಳ ಕಾಲ ಅವರನ್ನು ನಡೆಸಿಕೊಂಡ ರೀತಿ, ಅದಕ್ಕೆ ಕ್ರೂರ ಎಂಬ ಶಬ್ದವೂ ಸಾಲದು. ಕೊನೆಯ ಪಕ್ಷ ದೇಹ ಹಿಂತಿರುಗಿಸುವಾಗ, ದೇಹ ಇಂತಹವರದ್ದೇ ಎಂದಾದರೂ ಗುರುತಿಸುವಂತಹ ಸ್ಥಿತಿಯಲ್ಲಾದರೂ ಇರಬೇಕಲ್ಲ?? ಕನಸಿನ ಆರ್ಮಿ ಯುನಿಫಾರ್ಮಂನಲ್ಲಿ ತನ್ನ ದೈಹಿಕ ಕೊರತೆಗಳನ್ನೆಲ್ಲಾ ಮೀರಿ ನಿಂತು ಹೋಗಿದ್ದ ಸೌರಭ್ ಕಾಲಿಯಾ ಬಂದಿದ್ದು ತ್ರಿವರ್ಣ ಧ್ವಜದಲ್ಲಿ ಒಂದು ಮಾಂಸದ ಮುದ್ದೆಯಾಗಿ!!!! ಕಣ್ಣು, ಕಿವಿ, ಮೂಗು, ಕೈ, ಕಾಲು ಬಿಡಿ ಗುಪ್ತಾಂಗ ಯಾವುದೂ ಇರಲಿಲ್ಲ. ಮೈಯೆಲ್ಲಾ ಸಿಗರೇಟಿನಿಂದ ಸುಟ್ಟ ಗಾಯ, ದೇಹವೆಲ್ಲಾ ಛಿದ್ರ ಛಿದ್ರ. ಅಬ್ಬಬ್ಬಾ!! ಯುಧ್ಧ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ ಪಾಕಿಸ್ತಾನ 22 ದಿನಗಳ ಅಮಾನುಷ ಕೃತ್ಯ ನಡೆಸಿ ಸೈನಿಕರ ದೇಹವನ್ನು ಭಾರತಕ್ಕೆ ಕಳುಹಿಸಿತು. ಅಲ್ಲಿಗೆ ವೀರ ಯೋಧನೊಬ್ಬನ ಯಶೋಗಾಥೆ ವೀರೋಚಿತವಾಗಿ ಅಂತ್ಯಗೊಳ್ಳುತ್ತದೆ.

ಡಾ. ಕೆ. ಎನ್. ಕಾಲಿಯಾ ತನ್ನ ಮಗನಿಗೆ ನೀಡಬೇಕಾದ ಕನಿಷ್ಟ ಗೌರವವನ್ನೂ ನೀಡದೇ ಚಿತ್ರಹಿಂಸೆ ನೀಡಿದ ಪಾಕಿಸ್ತಾನಕ್ಕೆ ಶಿಕ್ಷೆಯಾಗಬೇಕು ಎಂದು ಪತ್ರ ಬರೆಯುತ್ತಾರೆ. ಆದರೆ ಇಂದಿಗೂ ಆ ಪತ್ರಕ್ಕೆ ನ್ಯಾಯ ಸಿಕ್ಕಿಲ್ಲ… ಆ ಪತ್ರಕ್ಕೆ ಬ್ರಿಟನ್ ಹೈ ಕಮಿಷನ್ , ಜರ್ಮನ್, ಜಪಾನ್, ನಾಗಾಲ್ಯಾಂಡ್ ಹೀಗೆ ಹಲವು ರಾಷ್ಟ್ರಗಳಿಂದ ಸಾಂತ್ವನ ಪತ್ರಗಳ ಹರಿವು ಬರುತ್ತದೆ. ದಂಪತಿಯೊಬ್ಬರು ತಮ್ಮ ಮಗನಿಗೆ ಸೌರಭ್ ಎಂದೇ ಹೆಸರಿಟ್ಟರು. ಆದರೆ ನಮ್ಮ ಅವಿಭಾಜ್ಯ ಅಂಗ ಕಾಶ್ಮೀರದಿಂದ ಒಂದೇ ಒಂದು ಪತ್ರ ಬರಲಿಲ್ಲ!! ನಾವೋ, ಉಗ್ರರಿಗೆ ಕೋಟಿ ಖರ್ಚು ಮಾಡುತ್ತೇವೆ, ನಿಮಗೆ ನೆನಪಿರಬಹುದು ಪಾಕಿಸ್ತಾನಿ ಮಗು ನೂರ್ ಫಾತಿಮಾಗೆ ಹೃದಯದ ಆಪರೇಶನ್ ಮಾಡಿತ್ತು ಭಾರತ, ಆದರೆ ನಮ್ಮ ಸೈನಿಕರ ದೇಹವನ್ನು ಸಿಗರೇಟಿನಿಂದ ಸುಟ್ಟು ಕಳುಹಿಸುತ್ತದೆ ಪಾಕಿಸ್ತಾನ. ಅಲ್ಲದೇ, ಯುದ್ಧದ ಸಮಯದಲ್ಲಿ ಹತರಾದ ಪಾಕ್ ಸೈನಿಕರ ದೇಹವನ್ನು ಅವರ ಕ್ರಮದಂತೆಯೇ ಅಂತ್ಯ ಸಂಸ್ಕಾರ ಮಾಡಿತ್ತು ಭಾರತೀಯ ಸೇನೆ, ಅದೇ ಅವರ ರಕ್ತ ಪಿಪಾಸುಗಳ ಕೈಗೆ ಸಿಲುಕಿ ನಲುಗಿದ ನಮ್ಮ ಯೋಧರ ಸ್ಥಿತಿ???

ಸೌರಭ್ ಗೆ ತನ್ನ ಆಸೆಯಂತೆ ಡಾಕ್ಟರ್ ಆಗಬಹುದಿತ್ತು. ರೋಗಿಗಳ ಸೇವೆ ಮಾಡುತ್ತಾ ಆರಾಮವಾಗಿರಬಹುದಿತ್ತು. ಆದರೆ ಆತನಿಗೆ ದೇಶ ಸೇವೆಯ ಮುಂದೆ ಆ ಸೇವೆಯೂ ಸಣ್ಣದಾಗಿ ಕಾಣಿಸಿತೋ ಏನೋ? ಸೇವೆಯಲ್ಲಿಯೇ ಆತನ ಜೀವ ಸವೆದು ಹೊಯಿತು. ಸೈನ್ಯದಿಂದ ರಿಟೈರ್ಡ್ ಆಗುವಾಗ ಬ್ರೈನ್ ಮಾತ್ರವಲ್ಲ ಕಣ್ಣು, ಕಿವಿ, ಜೀವ, ಜೀವನ ಯಾವುದೂ ಆತನಿಗೆ ಸಿಗಲಿಲ್ಲ!

ಧೀರತ್ವದ ಗಾಥೆ ಬರೆದು ಹೋದ ಸೌರಭ್ ನಿನಗಿದೋ ನಮ್ಮ ಭಾವಪೂರ್ಣ ನಮನ…..

ಕಾಶ್ಮೀರದ ಶ್ರೀನಗರದಿಂದ ೨೦೫ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ, ೦೪೮ ದೀಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. ೧೬೦ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.

`ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಖೂ. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್'.

ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ ೧೯೯೯ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್'. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು.
೬೦ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ ೫೭೨ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ ೧೯೯೯ರ ಜುಲೈ ೨೬ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ' ಎಂದು ಆಚರಿಸಲಾಗುತ್ತದೆ.

ಕಾರ್ಗಿಲ್ ರಣಾಂಗಣದಲ್ಲಿ ಜೀವದ ಹಂಗು ತೊರೆದು ಹೋರಾಡಿ ಮಡಿದ ಹಲವಾರು ಯೋಧರ ಜೀವನಗಾಥೆಗಳು ಸಂಕ್ಷಿಪ್ತವಾಗಿ ಬಿಂಬಿಸುವ ಪ್ರಯತ್ನ ಇಲ್ಲಿದೆ.

ಜಸ್ವಿಂದರ್ ಸಿಂಗ್ ಭರವಸೆ:

"ನೀನೆನೂ ಹೆದರಬೇಕಾಗಿಲ್ಲ. ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ" - ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿದುಂಬಿದ ತನ್ನ ೨೦ರ ಹರೆಯದ ಪತ್ನಿ ಗುರುದಯಾರ್ ಕೌರ್ಗೆ ಸಿಪಾಯಿ ಜಸ್ವಿಂದರ್ ಸಿಂಗ್ ಬೆಚ್ಚನೆಯ ಭರವಸೆ ಇತ್ತ. ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧಭೂಮಿಗೆ ಹೊರಟಿದ್ದ.
ಕೌರ್ ಜಸ್ವಿಂದರ್ಸಿಂಗ್ನನ್ನು ಮದುವೆಯಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೆ. ಕಂಗಳ ತುಂಬಾ, ಮನದ ತುಂಬಾ ಅದೇನೇನೋ. ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು, ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂಬ ಲೆಕ್ಕಾಚಾರ ಹಾಕಿದ್ದಳು.

ಗುರುದಯಾರ್ ಕೌರ್ ತನ್ನ ಪತಿ ಜಸ್ವಿಂದರ್ ಸಿಂಗ್ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೆ. ಅದೇ ಆಕೆಯ ದಾಂಪತ್ಯ ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತ ಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ವಿಂದರ್ ಸಿಂಗ್ ಪ್ಲೈವು ಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.
ಜಸ್ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಆಂಧ್ರ ರೈತ. ಮೂರು ಎಕರೆ ಜಮೀನು ಹೊಂದಿರುವ ಅತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರ ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರ್ಯ ಜಸ್ವಿಂದರ್ ಸಿಂಗ್ ೧೭ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸದ ಬದುಕಿಗೆ ಆಸರೆ ನೀಡಿತು.
ಮೇ ೨೧ರಂದು ಜಸ್ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ. ಶಿಖರದೆತ್ತರದಲ್ಲಿ ಬಂಕರ್ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. ವೈರಿಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ. ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡೂ ತೊಡೆಗಳಿಗೆ ಎಲ್ಲಿಂದಲೋ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ. ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.

ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ಧಿ, ಚಿತ್ರ ಬರುವದೋ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ. ಒಂದೆರಡು ದಿನದಲ್ಲೇ ಜಸ್ವಿಂದರ್ ಸಿಂಗ್ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳುತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ತಿ ನೆಟ್ಟಿರುವ ಕೌರ್ ಈಗ ಮ್ಲಾನವದನೆ.

ಜಸ್ವಿಂದರ್ ಸಿಂಗ್ ವೀರಮರಣ ಅಪ್ಪಿದ್ದಕ್ಕೆ ತಂದೆಗೆ ದುಃಖವಿಲ್ಲ. "ಶತ್ರುವಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು." ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರ್ಎ.

"ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದಪ್ಪಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗುಳಿದಿರುವ ಸಮಾಧಾನ." - ದಾಂಪತ್ಯದ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದುಃಖವನ್ನು ತಡೆದೊತ್ತಿ ಹೇಳುತ್ತಾಳೆ.
ಹೌದು, ಜಸ್ವಿಂದರ್ ಸಿಂಗ್ನ ಸಾವು ವ್ಯರ್ಥವಾಗುವದಿಲ್ಲ.

ಕಾರ್ಗಿಲ್ ಕದನ : ಕೆಲವು ವಿವರಗಳು

ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : ೭೪ ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : ೧೫೦ ಕಿ.ಮೀ.

ಬಳಸಿದ ಬಲಾಬಲ
ಭಾರತೀಯ ಸೇನೆ : ೨೦,೦೦೦
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : ೧೫೦೦

ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : ೩೦೦ (೧೦೦ ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : ೫,೦೦೦
ಟೋನೇಜ್ (ಪ್ರತಿನಿತ್ಯ) : ೧೫,೦೦೦

ವಾಯುಬಲ
ಸ್ಟ್ರೈಕ್ ಮಿಶನ್ಸ್ : ೫೫೦
ರೆಕನೈಸಾನ್ಸ್ : ೧೫೦
ಎಸ್ಕಾರ್ಟ್ ಮಿಶನ್ : ೫೦೦
ಚಾಪರ್ ಸಾರ್ಟೀಸ್ : ೨,೧೮೫

ಮಡಿದವರು
ಭಾರತಸೇನೆ : ೪೦೭
ಗಾಯಗೊಂಡವರು : ೫೮೪
ನಾಪತ್ತೆಯಾದವರು : ೬
ಪಾಕ್ ಸೇನೆ ಮಡಿದವರು : ೬೯೬

ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : ೧೫ ಕೋಟಿ ರೂ.
ಒಟ್ಟು ವೆಚ್ಚ : ೧,೧೦೦ ಕೋಟಿ ರೂ.


ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು

ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)

ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)

ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)

ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)

ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)

ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)

ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)

ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)

ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)

ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)

ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)

ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)

ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)

ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)

ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)

ಪರಮವೀರ ಚಕ್ರ

ಕ್ಯಾಪ್ಟನ್ ವಿಕ್ರಮ್ ಬಾತ್ರ
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ
ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್
ರೈಫಲ್ ಮ್ಯಾನ್ ಸಂಜಯ್ ಕುಮಾರ್

ಮಹಾವೀರಚಕ್ರ

ಮೇಜರ್ ವಿವೇಕ್ ಗುಪ್ತಾ
ಮೇಜರ್ ಪದ್ಮಾ ಪಾನಿ ಆಚಾರ್ಯ
ಕ್ಯಾಪ್ಟನ್ ಎನಾ ಕೆಂಗುರೂಸೆ
ನ್ಯಾಕ್ ದಿಗೆಂದ್ರ ಕುಮಾರ್
ಮೇಜರ್ ರಾಜೇಶ್ ಸಿಂಗ್
ಲೆಫ್ಟಿನೆಂಟ್ ಬಲ್ವಾನ್ ಸಿಂಗ್
ಕ್ಯಾಪ್ಟನ್ ಅನುಜ್ ನಾಯರ್
ಲೆಫ್ಟಿನೆಂಟ್ ಕೆಶಿಂಗ್ ಕ್ಲಿಫೋರ್ಡ್ ನಾನ್ಗ್ರಮ್
ಮೇಜರ್ ಸೋನಮ್ ವ್ಯಾಂಗ್ಚುಕ್

ವೀರಚಕ್ರ

ಕರ್ನಲ್ ಉಮೇಶ್ ಸಿಂಗ್
ಕರ್ನಲ್ ಲಲಿತ್ ರೈ
ಕರ್ನಲ್ ಎಂ.ಬಿ.ರವೀಂದ್ರ ನಾಥ್
ಲೆಫ್ಟಿನೆಂಟ್ ಕರ್ನಲ್ ಯೋಗೇಶ್ ಕುಮಾರ್ ಜೋಗಿ
ಮೇಜರ್ ಎಸ್ ವಿಜಯ್ ಭಾಸ್ಕರ್
ಮೇಜರ್ ದೀಪಕ್ ರಾಂಪಾಲ್
ಮೇಜರ್ ವಿಕಾಸ್ ವೋಹ್ರಾ
ಮೇಜರ್ ಅಮೃಂದರ್ ಸಿಂಗ್
ಮೇಜರ್ ರಾಜೇಶ್ ಸಹಾ
ಮೇಜರ್ ಮೋಹಿತ್ ಸಕ್ಸೆನಾ
ಮೇಜರ್ ಎಂ ಸರವನನ್
ಕ್ಯಾಪ್ಟನ್ ಶ್ಯಾಮಲ್ ಸಿನ್ಹ
ಕ್ಯಾಪ್ಟನ್ ಅಮೋಲ್ ಕಾಲಿಯ
ಕ್ಯಾಪ್ಟನ್ ಸಚಿನ್ ಅನ್ನರಾಂ ನಿಂಬಾಳ್ಕರ್
ಕ್ಯಾಪ್ಟನ್ ಸಂಜೀವ ಸಿಂಗ್
ಕ್ಯಾಪ್ಟನ್ ಹನೀಫ್ ಉದ್ದೀನ್
ಕ್ಯಾಪ್ಟನ್ ಸುಮಿತ್ ರಾಯ್
ಕ್ಯಾಪ್ಟನ್ ಜಿಂತು ಗೋಗಯ್
ಕ್ಯಾಪ್ಟನ್ ಆರ್ ಜೆರಿ ಪ್ರೇಮ್ ರಾಜ್
ಲೆಫ್ಟಿನೆಂಟ್ ವಿಜಯಕಾಂತ್ ಥಾಪರ್
ಸುಬೇದಾರ್ ಬಹದ್ದೂರ್ ಸಿಂಗ್
ಸುಬೇದಾರ್ ಲೋಬ್ಜಂಗ್
ಸುಬೇದಾರ್ ರಣ್ದೀಪ್ ಸಿಂಗ್
ಸುಬೇದಾರ್ ಭವರ್ ಲಾಲ್
ಸುಬೇದಾರ್ ರಘುನಾಥ್ ಸಿಂಗ್

ಭೂಸೇನೆ ಅಧಿಕಾರಿಗಳು

ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥನ್
ಲೆಫ್ಟಿನೆಂಟ್ ಕರ್ನಲ್ ವಿಜಯ ರಾಘವನ್
ಲೆಫ್ಟಿನೆಂಟ್ ಕರ್ನಲ್ ಸಚಿನ್ ಕುಮಾರ್
ಮೇಜರ್ ಅಜಯ್ ಸಿಂಗ್
ಮೇಜರ್ ಕಮಲೇಶ್ ಪಾಥಕ್
ಮೇಜರ್ ಪದ್ಮಪಾಣಿ ಆಚಾರ್ಯ
ಮೇಜರ್ ಮನೋಜ್ ತಲ್ವಾರ್
ಮೇಜರ್ ವಿವೇಕ್ ಗುಪ್ತಾ
ಮೇಜರ್ ಅಜಯ್ ಕುಮಾರ್
ಕ್ಯಾಪ್ಟನ್ ಸುಮಿತ್ ರಾಯ್
ಕ್ಯಾಪ್ಟನ್ ಅಮಿನ್ ವರ್ಮ
ಕ್ಯಾಪ್ಟನ್ ಅನುಜ್ ನಾಯರ್
ಕಮಾಂಡೆಂಟ್ ಜೊಯ್
ಲೆಫ್ಟಿನೆಂಟ್ ಸೌರವ್ ಕಾಲಿಯ
ಲೆಫ್ಟಿನೆಂಟ್ ಅಮಿನ್ ಭಾರದ್ವಜ್
ಲೆಫ್ಟಿನೆಂಟ್ ಬಲ್ವನ್ ಸಿಂಗ್
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ

ವಾಯುಸೇನೆ ಅಧಿಕಾರಿಗಳು

ಸ್ಕ್ವಾಡ್ರೆನ್ ಲೀಡರ್ ಅಜಯ್ ಅಹುಜ
ಸ್ಕ್ವಾಡ್ರೆನ್ ಲೀಡರ್ ರಾಜೀವ್ ಪುಂದಿರ್
ಫ್ಲೈಟ್ ಲೆಫ್ಟಿನೆಂಟ್ ಎನ್ ಮಹಿಲಾಲ್
ಫ್ಲೈಟ್ ಲೆಫ್ಟಿನೆಂಟ್ ನಚಿಕೇತ ರಾವ್
ಸರ್ಜೆಂಟ್ ಆರ್ ಪ್ರಸಾದ್
ಸರ್ಜೆಂಟ್ ರಾಜ್ ಕಿಶೋರ್ ಸಾಹು

ಜೂನಿಯರ್ ಕಮಿಷಂಡ್ ಭೂಸೇನೆ ಅಧಿಕಾರಿಗಳು

ನ್ಯಾಕ್ ಕುದೀಪ್ ಸಿಂಗ್
ನ್ಯಾಕ್ ಬಿರೇಂದ್ರ ಸಿಂಗ್
ನ್ಯಾಕ್ ಜಸ್ವೀರ್ ಸಿಂಗ್
ನ್ಯಾಕ್ ಸುರೇಂದ್ರ ಪಾಲ್
ನ್ಯಾಕ್ ರಾಜ್ ಕುಮಾರ್ ಪೂನಿಯ
ನ್ಯಾಕ್ ಎಸ್ ಎನ್ ಮಲಿಕ್
ನ್ಯಾಕ್ ಸುರ್ಜೀತ್ ಸಿಂಗ್
ನ್ಯಾಕ್ ಜುಗಲ್ ಕಿಶೋರ್
ನ್ಯಾಕ್ ರಾಥೋಡ್
ನ್ಯಾಕ್ ಸುರೇಂದ್ರ ಸಿಂಗ್
ನ್ಯಾಕ್ ರಾಂಪಾಲ್ ಸಿಂಗ್
ನ್ಯಾಕ್ ಗಣೇಶ್ ಯಾದವ್
ಹವಾಲ್ದಾರ್ ಮೇಜರ್ ಯಶ್ವೀರ್ ಸಿಂಗ್
ಲ್ಯಾನ್ಸ್ ನ್ಯಾಕ್ ಅಹ್ಮಮದ್ ಅಲಿ
ಲ್ಯಾನ್ಸ್ ನ್ಯಾಕ್ ಗುಲಾಮ್ ಮೊಹಮ್ಮದ್ ಖಾನ್
ಲ್ಯಾನ್ಸ್ ನ್ಯಾಕ್ ಎಂ ಆರ್ ಸಾಹು
ಲ್ಯಾನ್ಸ್ ನ್ಯಾಕ್ ಶತ್ರುಘ್ನ ಸಿನ್ಹ
ಲ್ಯಾನ್ಸ್ ನ್ಯಾಕ್ ಶ್ಯಾಂ ಸಿಂಗ್
ಲ್ಯಾನ್ಸ್ ನ್ಯಾಕ್ ವಿಜಯ್ ಸಿಂಗ್
ನ್ಯಾಕ್ ದೆಗೆಂದಲ್ ಕುಮಾರ್
ಹವಾಲ್ದಾರ್ ಬಲದೇವ್ ರಾಜ್
ಹವಾಲ್ದಾರ್ ಜೈ ಪ್ರಕಾಶ್ ಸಿಂಗ್
ಹವಾಲ್ದಾರ್ ಮಹಾವೀರ್ ಸಿಂಗ್
ಹವಾಲ್ದಾರ್ ಮನಿರಾಮ್
ಹವಾಲ್ದಾರ್ ರಜ್ಬೀರ್ ಸಿಂಗ್
ಹವಾಲ್ದಾರ್ ಸತ್ಬೀರ್ ಸಿಂಗ್
ಹವಾಲ್ದಾರ್ ಅಬ್ದುಲ್ ಕರೀಂ
ಸುಬೇದಾರ್ ಬನ್ವರ್ ಸಿಂಗ್ ರಾಥೋಡ್
ರೈಫಲ್ ಮ್ಯಾನ್ ಸತ್ ಬೀರ್ ಸಿಂಗ್
ರೈಫಲ್ ಮ್ಯಾನ್ ಜಗಮಾಲ್ ಸಿಂಗ್
ರೈಫಲ್ ಮ್ಯಾನ್ ರತನ್ ಚಾಂದ್
ರೈಫಲ್ ಮ್ಯಾನ್ ಮೊಹಮ್ಮದ್ ಫರೀದ್
ರೈಫಲ್ ಮ್ಯಾನ್ ಅಸ್ಲಂ
ರೈಫಲ್ ಮ್ಯಾನ್ ಯೋಗೇಂದ್ರ ಸಿಂಗ್
ರೈಫಲ್ ಮ್ಯಾನ್ ಸಂಜಯ್ ಕುಮಾರ್

ಸಿಪಾಯಿಗಳು

ಅಮರ್ ದೀಪ್ ಸಿಂಗ್
ವಿಜಯ್ ಪಾಲ್ ಸಿಂಗ್
ವೀರೇಂದ್ರ ಕುಮಾರ್
ಯಶವಂತ ಸಿಂಗ್
ದಿನೇಶ್ ಬಾಯ್
ಹರೇಂದ್ರಗಿರಿ ಗೋಸ್ವಾಮಿ
ಲಕ್ಬೀರ್ ಸಿಂಗ್
ಬಜೇಂದ್ರ ಸಿಂಗ್
ರಾಕೇಶ್ ಕುಮಾರ್
ಲಾಲ್ ಸಿಂಗ್
ಅಶೋಕ್ ಕುಮಾರ್
ಆರ್ ಸೆಲ್ವ ಕುಮಾರ್
ಜಸ್ವಂತ್ ಸಿಂಗ್…..
.
ಇವರ ಜೊತೆ ಇನ್ನೂ ಅನೇಕ ಸೈನಿಕರು ಕಾರ್ಗಿಲ್ ನಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ.ಅವರೆಲ್ಲರಿಗೂ ನನ್ನ ನುಡಿನಮನಗಳು..

ಜೈ ಜವಾನ್…

 

Last modified on 26/07/2018

Share this article

About Author

Madhu