ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇತ್ತೀಚೆಗಷ್ಟೇ ಒಂದು ದಿನ ನಾಪತ್ತೆಯಾಗಿದ್ದ ತಹಶಿಲ್ದಾರ್ ಮಹೇಶ್‌ಚಂದ್ರ. ತಹಶಿಲ್ದಾರ್ ಮಹೇಶ್‌ಚಂದ್ರ ಅಪಹರಣವಾಗಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು, ಆ ನಂತ್ರ ಸಂಜೆ ವೇಳೆಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ್ದ ತಹಶಿಲ್ದಾರ್ ಮಹೇಶ್‌ಚಂದ್ರ. ಈ ಎಲ್ಲ ಘಟನೆಯ ನಂತರ ದೀರ್ಘ ರಜೆ ಮೇಲೆ ತೆರಳಿದ ತಹಶಿಲ್ದಾರ್ ಮಹೇಶ್‌ಚಂದ್ರ.
ಮಹೇಶ್‌ಚಂದ್ರ ರಜೆಯ ನಂತರ ಕೆ.ಆರ್.ಪೇಟೆ ನೂತನ ತಹಶಿಲ್ದಾರ್ ಆಗಿ ಶಿವಮೂರ್ತಿ ಅಧಿಕಾರ ಸ್ವೀಕಾರ ಮಾಡಿ, ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ ತಹಶಿಲ್ದಾರ್ ಶಿವಮೂರ್ತಿ .ಶಾಸಕ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ಮಡುವಿನಕೋಡಿ ಮತ್ತು ಹರಿಹರಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುತ್ತಿರುವ ಜನಸ್ಪಂದನ ಸಭೆ. ಸಭೆಯಲ್ಲಿ ಜನವಿರೋಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು.ನಂತರ ಸಭೆಗೆ ಗೈರಾದ ಅಧಿಕಾರಿಗಳಿಗೆ ತಹಶಿಲ್ದಾರ್ ಶಿವಮೂರ್ತಿ ತರಾಟೆ, ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಸೂಚನೆ ನೀಡಿದರು.ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಜಿ.ಪಂ ಉಪಾಧ್ಯಕ್ಷೆ ಗಾಯತ್ರಿ, ತಾ.ಪಂ ಉಪಾಧ್ಯಕ್ಷ ಜಾನಕೀರಾಂ, ಜಿ.ಪಂ ಸದಸ್ಯ ರಾಮದಾಸ್, ಎಪಿಎಂಸಿ ಅಧ್ಯಕ್ಷ ಲೋಕೇಶ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.
Last modified on 06/08/2018