ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಹಾಗೂ ಗಟ್ಟಿಕೊಪ್ಪಲು ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ನಾಗರಾಜು ಉದ್ಘಾಟಿಸಿದರು ನಂತರ ಪಿಡಿಒ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಗಳನ್ನು ಪ್ರತಿಯೊಬ್ಬರು ಕಟ್ಟಿಸಿಕೊಳ್ಳುವಂತೆ ತಿಳಿಸಿದ ಅವರು ಗ್ರಾಮದ ಪ್ರತಿಯೊಬ್ಬರು ಮನೆ ಮುಂದೆ ಸ್ವಚ್ಚತೆ ಮಾಡಿಕೊಳ್ಳಬೇಕು ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಹಲವು ಕೂಲಿ ಕೆಲಸಗಳನ್ನು ಮಾಡಿದರೆ ಹಣವನ್ನು ನೀಡುತ್ತೇವೆ ಎಂದರು.ಕಾರ್ಯಕ್ರಮ ದಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ, ಮಹದೇವಮ್ಮ. ಸೇರಿದಂತೆ ಮತ್ತಿತ್ತರರು ಇದ್ದರು.