Print this page

ಸರ್ಕಾರಿ ಶಾಲಾ ಮಕ್ಕಳ ಸಂತೆ ಬಲು ಜೊರು.

 ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ವಡ್ಡರಹಳ್ಳಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕರ ಒತ್ತಾಸೆಯೊಂದಿಗೆ ಮಕ್ಕಳ ಸಂತೆ ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ಮಕ್ಕಳು ಸಂತೆ ನಡೆಸುವ ಪರಿಕಲ್ಪನೆ, ವ್ಯವಹಾರ ನಡೆಸುವ ರೀತಿಯಿಂದ ಹೇಗೆ ಸ್ವಾವಲಂಬನೆ ಆಗಬಹುದು ಎಂದು ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು. ಶಿಕ್ಷಕರ ಸಲಹೆಗಳಂತೆ ಮುಗ್ದ ಪುಟಾಣಿ ಮಕ್ಕಳು ತರವಾರಿ ತರಕಾರಿಗಳನ್ನು ಕೊಳ್ಳುವಂತೆ ಬರುತ್ತಿದ್ದ ಗ್ರಾಮಸ್ಥರಿಗೆ ಕೂಗಿ ಮನ ಒಲಿಸುತ್ತಿದ್ದ ಮಕ್ಕಳ ಮುಗ್ದತೆಯು ನಾಗರೀಕರ ಮೆಚ್ಚುಗೆಗೆ ಕಾರಣವಾಯಿತು.

ಮಕ್ಕಳ ಸಂತೆಯಲ್ಲಿ ಎಲ್ಲಾ ವಿಧವಾದ ತರಕಾರಿಗಳು, ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ದೃಶ್ಯಗಳು ನಾಗರೀಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಕ್ಕಳ ಸಂತೆ ಕಾರ್ಯಕ್ರಮ ನೇತೃತ್ವವನ್ನು ಶಿಕ್ಷಕಿ ಶ್ವೇತಕುಮಾರಿ ಹಾಗೂ ರಾಜಶೇಖರ್ ವಹಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Share this article

About Author

Madhu