ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಅಪರೂಪದ ಒಂದು ಘಟನೆ ನೆಡೆದಿದೆ. ಏನೆಂದರೆ ಪ್ರೀತಿಸುವ ಪ್ರೇಮಿಗಳ ಕೆಲವೊಮ್ಮೆ ಒಟ್ಟಾಗಿ ಮರಣಹೊಂದಿದ ಪ್ರಕರಣಗಳನ್ನು ನೊಡಿರುತ್ತೆವೆ .ಅದರೆ ಇಲ್ಲಿ ತಮ್ಮ ಜೀವನದಲ್ಲಿ ಕಷ್ಟ ಸುಖ ಗಳಲ್ಲಿ ಜೊತೆಯಾಗಿ ಬಾಳಿದ ಆದರ್ಶದಂಪತಿಗಳು ಸಾವಿನ್ನಲು ಸಹ ಜೊತೆಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು
ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು.ಕಳೆದ ರಾತ್ರಿ 1 ಗಂಟೆ ಸಮಯದಲ್ಲಿ ಹೊಂಬೇಗೌಡ ರವರಿಗೆ ಹೊಟ್ಟೆನೋವು ಕಾಣಿಸಿಕೊಂಡು ತಕ್ಷಣ ಹೊಂಬೇಗೌಡರನ್ನ ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಕುಟುಂಬದವರು, ಈ ವೇಳೆ ಬಾಯಾರಿಕೆಯಿಂದ ನೀರು ಕೇಳಿದ ಹೊಂಬೇಗೌಡರವರಿಗೆ ಪತ್ನಿಮಂಜಮ್ಮ ನೀರು ಕುಡಿಸಿದತಕ್ಷಣ ಪ್ರಾಣ ಪಕ್ಷಿ ಹಾರಿಹೋಗಿದ್ದು, , ಇದನ್ನು ನೋಡಿದ ಆತನ ಪತ್ನಿ ಮಂಜಮ್ಮ ಸಹ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇಸಾವನ್ನಪ್ಪಿದಾಳೆ.
ಈ ವೇಳೆ ಮಾರ್ಗ ಮಧ್ಯದಲ್ಲೇ ಹೊಂಬೇಗೌಡ ಸಾವು. ಪತಿ ಸತ್ತ ಐದೇ ನಿಮಿಷದಲ್ಲಿ ಪತ್ನಿ ಮಂಜಮ್ಮನೂ ಸಾವು.ಆದರ್ಶ ದಂಪತಿಗಳ ಸಾವಿನಿಂದ ಕಣ್ಣೀರು ಹಾಕುತ್ತಿರುವ ಕುಟುಂಬ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದ ಘಟನೆ
ಮದುವೆ ಅನ್ನುವ ಋಣಾನುಬಂಧ ಎನ್ನುತ್ತಾರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಸಾವಿನಲ್ಲೂ ಒಂದಾದ ದಂಪತಿಗಳ ಆತ್ಮಕ್ಕೆ ಶಾಂತಿಯನ್ನು ಅ ಭಗವಂತ ಕರುಣಿಸಲಿ .