Print this page

ಕೆ.ಆರ್.ಪೇಟೆಯಲ್ಲಿ 8ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ

ಕೃಷ್ಣರಾಜಪೇಟೆ ಪಟ್ಟಣದಲ್ಲಿ ನೇಕಾರ ತೊಗಟವೀರ ಕುಲಬಾಂಧವರಿಂದ 8ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ.

 ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇಂದು ವಿಜೃಂಭಣೆಯಿಂದ ತಾಯಿ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಿತು.ಶ್ರೀ ದೇವಿರಮ್ಮಣ್ಣಿ ಕೆರೆಯಿಂದ ಗಂಗಾಪೂಜೆ ಮಾಡಿ ನಂತರ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಆರಂಭವಾದ ಕರಗ ಉತ್ಸವ. ಜಾನಪದ ಕಲಾ ಜನಪದ ವೈಭವ ದೊಂದಿಗೆ,ಡೊಳ್ಳು ಕುಣಿತ, ಪೂಜಾ ಮತ್ತು ಪಟ ಕುಣಿತ, ದೇವರಗುಡ್ಡರ ಆಕರ್ಷಕ ನೃತ್ಯದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಪಕ್ಕದ ರಾಮಮಂದಿರದ ಬಳಿ ಅಂತ್ಯಗೊಂಡಿತು.

ನೇಕಾರ ತೊಗಟವೀರ ಸಮಾಜದ ಜಿಲ್ಲಾಧ್ಯಕ್ಷ ಹಂಸರಮೇಶ್, ರಾಜ್ಯ ತೊಗಟವೀರ ಸಂಘದ ನಿರ್ದೇಶಕ ಕೆ.ಜೆ.ರಾಜಶೇಖರ್, ರಾಜ್ಯ ಯುವಘಟಕದ ಅಧ್ಯಕ್ಷ ಗಜಪಡೆ ಶ್ರೀಧರ್, ಪುರಸಭೆ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ತಾ.ಪಂ ಸದಸ್ಯ ರಾಜಾಹುಲಿ ದಿನೇಶ್, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ, ಎಸ್.ಜೆ.ಕುಮಾರಸ್ವಾಮಿ, ಹೊನ್ನಾವರ ಚಂದ್ರಶೇಖರ್, ಕೈಗೋನಹಳ್ಳಿ ಈರಪ್ಪ, ಮಾಸ್ಟರ್ ರಾಮಕೃಷ್ಣ, ಸೇರಿದಂತೆ ಸಾವಿರಾರು ಜನರು ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದರು.

Share this article

About Author

Madhu