Print this page

ಸವಿತಾ ಸಮಾಜದ ನಾಮಫಲಕ ಉದ್ಘಾಟಿಸಿದ ಚಲನಚಿತ್ರ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್..;.

 ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜದ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕುಲದವರು ಶೌರ್ಯ ಪುತ್ರರು ಎಂದು ತಿಳಿಸಿದ ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್ ಆರ್ ನಾಗೇಶ್ ಹಾಗೂ ಸವಿತಾ ಸಮಾಜದ ಚಲನಚಿತ್ರ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್..

ಪಾಂಡುಪುರ: ತಾಲೂಕಿನ ಅರಳುಕುಪ್ಪೆ ಗ್ರಾಮದಲ್ಲಿ ಸವಿತಾ ಸಮಾಜ ನಮಫಲಕ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಗ್ರಾಮದ ರಾಜಬೀದಿಯಲ್ಲಿ ವೀರಗಾಸೆ ಮಂಗಳವಾದ್ಯದೊಂದಿಗೆ ಶ್ರೀ ಸವಿತಾ ಸಮಾಜದ ಜ್ಞಾನಭಂಡಾರ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಮೂಲಕ ಕರೆತಂದು ಪೂಜ್ಯ ಶ್ರೀ ಶ್ರೀ ಶ್ರೀ ಗುರು ಸಿದ್ದಲಿಂಗೇಶ್ವರ ಬೇಬಿ ಮಠ ಘನ ಅಧ್ಯಕ್ಷತೆಯಲ್ಲಿ ಗ್ರಾಮದ ಹೆದ್ದಾರಿಯಲ್ಲಿ ಸ್ಥಾಪಿಸಿದ ನಾಮಫಲಕ ಉದ್ಘಾಟಿಸಿ ಗ್ರಾಮದ ಜಯಲಕ್ಷ್ಮಿ ಸಮುದಾಯ ಭವನದಲ್ಲಿ ಸಮಾಜದ ರಾಜ್ಯ ನಾಯಕರಾದ ಎನ್ ಆರ್ ನಾಗೇಶ್ ಮತ್ತು ಚಲನಚಿತ್ರಗಳ ಹಿರಿಯ ಹಾಸ್ಯ ಕಲಾವಿದರಾದ ಮುತ್ತುರಾಜ್ ಜ್ಯೋತಿ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸವಿತಾ ಸಮಾಜದ ಕುಲದವರು ಸರ್ವ ಜನಾಂಗಕ್ಕೂ ಅತಿಮುಖ್ಯ ಬೇಕಾದ ಸಮಾಜವಾಗಿದ್ದು ಈ ಚಿಕ್ಕ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಮುಖೇನ ಬೆಳೆಸಿ ಎಂದು ಸ್ಥಳೀಯ ಪತ್ರಕರ್ತರಿಗೆ ಮನವಿ ಮಾಡಿದರು. 

ಘನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆಂಪುಗೌಡ ಸಮಾಜದ ನಾಯಕರಾದ ಶಿಕ್ಷಣ ಇಲಾಖೆ ಬಸವರಾಜಪ್ಪ ಮನು ಮಾಕವಳ್ಳಿಮತ್ತು ಅರಳಕುಪ್ಪೆ ಸವಿತಾ ಸಮಾಜದ ಘಟಕ ಗೌರವಅಧ್ಯಕ್ಷರಾದ ಕುಮಾರ್ ಬಿ ಎಂ. ಅಧ್ಯಕ್ಷರಾದ ಎ ಎನ್ ಮಹೇಶ್ . ಉಪಾಧ್ಯಕ್ಷರಾದ ಹೆಚ್ ಆರ್ ಗೋವಿಂದರಾಜು. ಖಜಾಂಚಿ ಎಸ್ ಎನ್ ನಂದೀಶ್ .ಆರ್ ಶಿವಕುಮಾರ್ ಪ್ರಧಾನ ಕಾರ್ಯದರ್ಶಿ .ಹಾಗೂ ಕೆಆರ್ ಪೇಟೆ ತಾಲೂಕಿನ ತಾಲೂಕು ಅಧ್ಯಕ್ಷರಾದ ಸುರೇಶ್ ಮತ್ತು ಸಮಾಜದ ಗಣ್ಯಾತಿಗಣ್ಯರು ಯುವಕರು ಕಾರ್ಯಕ್ರಮಕ್ಕೆ ಭಾಗಿಯಾಗಿ ಮೆರುಗು ತುಂಬಿದರು..

Share this article

About Author

Super User