Print this page

ಮಹಿಳಾ ಒಕ್ಕೂಟದಿಂದ ಧಾನ್ ಪೌಂಡೇಶನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ.

 ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಂಡೇಶನ್ ಏಕೆ ಕೊಡಬೇಕು, ಕೊಡುವುದಿಲ್ಲ ಎಂದು ಒತ್ತಾಯಿಸಿ ಮಳವಳ್ಳಿ ಪಟ್ಟಣದ ಧಾನ್ ಪೌಂಡೇಶನ್ ಕಚೇರಿಗೆ ಬೀಗ ಜಡಿದು  ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.


ಮಳವಳ್ಳಿ:  ಪಟ್ಟಣದ ಗಗನಚುಕ್ಕಿ ಮಹಿಳಾ ಕಳಂಜಿ ಒಕ್ಕೂಟ ಕಚೇರಿಯ ಮುಂದೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯಮ್ಮ ವಾಹಿನಿ ಜೊತೆ ಮಾತನಾಡಿ ಒಕ್ಕೂಟ ಸದಸ್ಯರಿಗೆ ಧಾನ್ ಪೌಂಡೇಶನ್ ವಂಚಿಸುತ್ತಿದ್ದಾರೆ ಒಕ್ಕೂಟದ ಲಾಭಾಂಶವನ್ನು ಧಾನ್ ಪೌಡೇಶನ್ ಕೊಡಬೇಕಂತೆ ಇದು ಯಾವ ನ್ಯಾಯನಾನು ಸಂಘ ಬೆಳೆಸಿದ್ದು, ಒಕ್ಕೂಟ ನಮ್ಮದು . ನಮ್ಮ ಹಣವನ್ನು ಏಕೆ ತಮಿಳುನಾಡಿನ ಸಂಸ್ಥೆಗೆ ನೀಡಬೇಕು ಎಂದು ಪ್ರಶ್ನಿಸಿದರು.ಮೊದಲು ಬೈಲಾ ವನ್ನು ಕನ್ನಡ ಮಾಡಿಸಿದ್ದರೂ ಈಗ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದು ನಮಗೆ ವಂಚನೆ ಮಾಡುತ್ತಿದ್ದಾರೆ.ನಮ್ಮ ಒಕ್ಕೂಟದ ಲಾಭಾಂಶವನ್ನು ತಮಿಳಿನಾಡಿನ ಸಂಸ್ಥೆ ಗೆ ಕಳುಹಿಸಬೇಕಂತೆ ಇದು ಯಾವ ನ್ಯಾಯಧಾನ ಪೌಂಡೇಶನ್ ಸಂಸ್ಥೆ ನಡೆಸುವ ಕಾರ್ಯಕ್ರಮ ಕ್ಕೆ ನಮ್ಮ ಒಕ್ಕೂಟ ಹಣ ಕೊಡಬೇಕು ಆದುದ್ದರಿಂದ ಇನ್ನೂ ಮುಂದೆ ನಮ್ಮ ಧಾನ್ ಪೌಂಡೇಶನ್ ಸಂಸ್ಥೆ ಯಿಂದ ಮುಕ್ತಗೊಳಿಸಿ ಎಂದು ಆರೋಪಿಸಿದರು.

ತಮಿಳುನಾಡಿನ ಮಧುರೈ ಮೂಲದ ಧಾನಫೌಂಡೇಶನ್ ಮಾರ್ಗದರ್ಶನದಲ್ಲಿ ಮಳವಳ್ಳಿ ಯಲ್ಲಿ ನಡೆಯುತ್ತಿರುವ ಸಂಸ್ಥೆ ಯಾಗಿದೆ ನಮ್ಮ ಒಕ್ಕೂಟದಲ್ಲಿ 172. ಸ್ತ್ರೀ ಶಕ್ತಿ ಸ್ವ ಸಹಾಯಸಂಘಗಳಿದ್ದು. ಇದುವರೆಗೂ 2 ಕೋಟಿ ರೂ ಯಷ್ಟು ಹಣವನ್ನು ಲಾಭ ಬಂದಿದೆ ಅದನ್ನು ವಂಚಿಸಲು ಯತ್ನ ಮಾಡುತ್ತಿದೆ ಎಂದು ಆರೋಪ ಮಾಡಿದರು

ಸ್ಥಳಕ್ಕೆ ಎ ಎಸ್ ಐ ಲೋಕೇಶ್ ಆಗಮಿಸಿ ಒಕ್ಕೂಟದವರನ್ನು ಮನವೊಲಿಸಲು ಯತ್ನಿಸಿ ದಾವ್ ಫೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗೆಡೆ ಕಚೇರಿಗೆ ಬೇಟಿ ಸದಸ್ಯರ ಜೊತೆ ಮಾತನಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ನಂತರ. ಒಕ್ಕೂಟದ ಎಲ್ಲಾ ನಿರ್ದೇಶಕರ ಜೊತೆ ಚರ್ಚೆ ಮಾಡಿ ದಿನಾಂಕ ನಿಗಧಿ ಪಡಿಸುವುದಾಗಿ ತಿಳಿಸಿದರು.
ಈ ಮಧ್ಯೆ ಒಕ್ಕೂಟದ ಅಧ್ಯಕ್ಷೆ ಸೌಭಾಗ್ಯ ರವರು ಮೇ 25 ರ ನಂತರ ದಿನಾಂಕ ನಿಗಧಿ ಪಡಿಸಿ ಎಂದರು.ಇದೇ ಸಂದರ್ಭದಲ್ಲಿ ಒಕ್ಕೂಟದ ಹಲವು ಸದಸ್ಯರು ಇದ್ದರು

 ಇನ್ನೂ ದಾನ್ ಪೌಂಡೇಶನ್ ವಲಯಾಧಿಕಾರಿ ಗಜಾನನ ಹೆಗ್ಗಡೆ ಮಾತನಾಡಿ ಇದು ದಾನ್ ಪೌಂಢೇಶನ್ ಸಂಸ್ಥೆ ಕೆಟ್ಟ ಹೆಸರುಬರಲಿ ಎಂಬ ಪಿತೂರಿ . ನಮ್ಮ ಸಂಸ್ಥೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಶಂಕರ್ ಹಾಗೂ ಮಹೇಂದ್ರ ರವರ ಕುತಂತ್ರವಿದು . ನಾವು ಯಾವುದೇ ರೀತಿಯ ಹಣ ವನ್ನೂ ಒಕ್ಕೂಟದಿಂದ ಪಡೆದಿಲ್ಲ. ಶಿವಶಂಕರ್ ರನ್ನು ಕೆಲಸದಿಂದ ತೆಗೆದಿದ್ದು ಹಾಗೂ‌ ಮಹೇಂದ್ರ ರವರ ನ್ನು ವರ್ಗ ಮಾಡಿದ ಹಿನ್ನಲೆಯಲ್ಲಿ ಕೆಲವು ಸ್ವ ಸಹಾಯ ಗುಂಪುಗಳಿಗೆ ತಪ್ಪು ತಿಳುವಳಿಕೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕವಿದೆ ಸದ್ಯದಲ್ಲೇ ಎಲ್ಲಾ ನಿರ್ದೆಶಕರ ಸಭೆ ಕರೆದು ಚರ್ಚೆ ಮಾಡಿ ನಂತರ ಎಲ್ಲಾ ಒಕ್ಕೂಟ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

 

Share this article

About Author

Madhu

Media