Print this page

ಮಳವಳ್ಳಿಯಲ್ಲಿ ಇಂದು ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ರಾಗಿಮುದ್ದೆ ಸ್ವರ್ಧೆ ನಡೆಯಿತು.

ಜಯಕರ್ನಾಟಕ ಸಂಘಟನೆ ವತಿಯಿಂದ ಮಳವಳ್ಳಿಯಲ್ಲಿ ಇಂದು ಗ್ರಾಮೀಣ ಕ್ರೀಡೆಯಾದ ರಾಗಿಮುದ್ದೆ ಸ್ವರ್ಧೆ ಆಯೋಜಿಸಿದ್ದರು.

 ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಇಂದು ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ರಾಗಿಮುದ್ದೆ ಸ್ವರ್ಧೆಯನ್ನು ತಾಲ್ಲೂಕು ಜಯಕರ್ನಾಟಕ ಸಂಘಟನೆ ವತಿಯಿಂದ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು   ಮುಂದೆ ಇರುವ ಮೈದಾನದಲ್ಲಿ ನಡೆಯಿತು .ಕಾರ್ಯಕ್ರಮವನ್ನು ಪುರಸಭೆ ಸದಸ್ಯ ರಾಜಣ್ಣ ಉದ್ಘಾಟಿಸಿದರು. ಚಿತ್ರದುರ್ಗದಿಂದಲೂ ಸ್ವರ್ಧಾಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಸ್ವರ್ಧೆಯಲ್ಲಿ 21 ಮಂದಿ ಸ್ವರ್ಧಾಳುಗಳು ಭಾಗವಹಿಸಿದ್ದು.ಅರ್ಥ ಕೆಜಿ ಯ ರಾಗಿಮುದ್ದೆಯುಳ್ಳ ಒಂದು ಮುದ್ದೆ ಯಂತೆ,ಮುದ್ದೆಜೊತೆ ನಾಟಿಕೋಳಿ ಸಾಂಬಾರು ನೀಡಲಾಯಿತು. ಚಿಕ್ಕಅರಸಿಕೆರೆ ಗ್ರಾಮದ ಸುರೇಶ ಎಂಬುವರು ಎಂಟು ಮುದ್ದೆ ತಿನ್ನುವ ಮೂಲಕ  ನಾಲ್ಕು ಕೆಜಿ ಮುದ್ದೆ ತಿಂದು ಪ್ರಥಮ ಬಹುಮಾನ 5000 ರೂ ಪಡೆದುಕೊಂಡರೆ  ಇನ್ನೂ ಟಿ.ನರಸೀಪುರ ತಾಲ್ಲೂಕಿನ ಹುಣಸೂರು ಗ್ರಾಮದ ಶಂಕರ್ ರವರು ಏಳೂವರೆ ಮುದ್ದೆ  ತಿಂದು ದ್ವಿತೀಯ ಬಹುಮಾನ 3000 ರೂ  , ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮ ದ ಶಿವು ಎಂಬುವರು ಏಳು ಮುದ್ದೆ ತಿಂದು  2000 ರೂ ನಗದು ಪಡೆದಕೊಂಡರು.   

 ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ನಾಗೇಶ್ ಮಾತನಾಡಿ  ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಜಯಕರ್ನಾಟಕ ಸಂಘಟನೆ ಮುಂದಾಗಿದ್ದು  ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡೆಗಳನ್ನು ಮಾಡಲಿದ್ದೇವೆ ಎಂದರು.   ಕಾರ್ಯಕ್ರಮ ದಲ್ಲಿ ಜೆಡಿಎಸ್ ಮುಖಂಡರಾದ ಆನಂದ, ಸಿದ್ದರಾಜು, ಪ್ರಶಾಂತ್ ,ವೆಂಕಟೇಶ್, ಶ್ರೀರಂಗಪಟ್ಟಣದ ಜಯಕರ್ನಾಟಕ ಸಂಘಟನೆ ಜಿಲ್ಲಾ ಮಹಿಳಾ ಉಪಾಧ್ಯಕ್ಷ ಪ್ರಿಯಾರಮೇಶ್, ರಮೇಶ್ ಕಲ್ಲೇಶ್, ರಾಜಕುಮಾರ್ , ಶಿವಾನಂದ, ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು.

Share this article

About Author

Madhu