Print this page

ನಾಯಸಿಂಗನಹಳ್ಳಿ ಶಾಲೆಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ..

ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.

ಸಂತೇಬಾಚಹಳ್ಳಿ:ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ಶ್ರೀಧರ್ ರವರು ಧ್ವಜಾರೋಹಣ ಮಾಡಿದರು.

 

ಗ್ರಾಮದ ಹಿರಿಯ ಮರಿಲಿಂಗೇಗೌಡರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿದೆ ನಮ್ಮ ದೇಶದ ಉನ್ನತಿಗೆ ಮಕ್ಕಳ ದೇಶಪ್ರೆಮವನ್ನು ತಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.

ನಂತರ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನ ತಮ್ಮ ಪ್ರಾಣವನ್ನು ಸಮರ್ಪಣೆ ಮಾಡಿದ್ದಾರೆ ಮತ್ತು ಅವರ ಬಲಿದಾನದಿಂದ ಇಂದು ನಾವು 73 ಸ್ವಾತಂತ್ರ್ಯ ದಿನ ಅಚರಣೆ ಮಾಡುತ್ತಿದ್ದವೆ ‌. ಎಂದು ಮಕ್ಕಳಿಗೆ ಸ್ವತಂತ್ರ ಹೊರಟಗಾರ ಬಗ್ಗೆ ತಿಳಿಸಿಕೊಟ್ಟರು.

ಗ್ರಾಮದ ಮಂಜೇಗೌಡ ಪುತ್ರ ಪ್ರಸನ್ನ ಶಾಲಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡಿದರು.ನಂತರ ಎಲ್ಲಾ ಮಕ್ಕಳಿಗೆ ಸಿಹಿ ತಿನಿಸು ವಿತರಣೆ ಮಾಡಲಾಯಿತು .


 ಕಾರ್ಯಕ್ರಮದಲ್ಲಿ:  ಶಾಲೆ ಸಹ ಶಿಕ್ಷಕಿ ಮಂಜುಳ, ಅಂಗನವಾಡಿ ಶಿಕ್ಷಕಿ ಸುಕನ್ಯಾ, ಮಂಜುಳಮ್ಮ,ಲಕ್ಷ್ಮಮ್ಮ, ಭಾಗ್ಯಮ್ಮ,ಶೊಭ,ಮತ್ತಿತರ ಗ್ರಾಮಸ್ಥರು ಹಾಜರಿದ್ದರು..

Share this article

About Author

Madhu