Print this page

ಈ ಗ್ರಾಮದ ೨೨ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಕೆ. ಹೊಗೆ ರಹಿತ ಶುದ್ಧ ಗ್ರಾಮದ ಗುರಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ 22 ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಕೆ ಹೊಗೆ ರಹಿತ ಶುದ್ಧ ಗ್ರಾಮಕ್ಕೆ ಚಾಲನೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಗೋಬರ್ ಗ್ಯಾಸ್ ಮೂಲಕ ಹೊಗೆ ರಹಿತ ಶುದ್ಧ ಗ್ರಾಮಕ್ಕೆ ಚಾಲನೆ ನೀಡಲಾಗಿದೆ.ಮೊದಲೇ ತೈಲ ಬೇಲೆ ಏರಿಕೆ ಮತ್ತು ಇಂದನದ ಕೊರತೆ ನೀಗಿಸಲು ಇದು ಸುಲಭವಾದ ಉಪಾಯವಾಗಿದೆ ಮತ್ತು ಹಸು ಮತ್ತು ಎಮ್ಮೆಗಳ ತ್ಯಾಜ್ಯ ಸಗಣಿಯಿಂದ ಗ್ಯಾಸ್ ಜೊತೆಗೆ ಉತ್ತಮ ಜೈವಿಕ ಗೊಬ್ಬರವನ್ನು ಸಹ ಪಡೆಯಬಹುದಾಗಿದೆ.ಗ್ರಾಮದ ಶೇಕಡ ಐವತ್ತರಷ್ಟು ಮನೆಗಳಲ್ಲಿ ಹಸು ಎಮ್ಮೆಗಳ ಸಗಣಿಯಿಂದ ಜೈವಿಕ ಗೊಬ್ಬರ ಬಳಸಿ ಗ್ಯಾಸ್ ಉತ್ಪಾದನೆ ಮಾಡಿ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲಾಗುತ್ತಿದೆ.

22 ಮನೆಗಳಲ್ಲಿ ಗೋಬರ್ ಗ್ಯಾಸ್ ಅಳವಡಿಕೆ ಮಾಡಲಾಗಿದೆ. ಮತ್ತು ಇನ್ನೂ ಉಳಿದ ಎಲ್ಲಾ ಮನೆಗಳಿಗೂ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ನಿಂಗಪ್ಪ ಅಗಸರ್ ಮತ್ತು ತಾಲ್ಲೂಕು ಸಂಯೋಜಕ ಸುಧೀರ್ ಜೈನ್ ಅವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳ ಬೆಂಬಲ ನೀಡಿವೆ.

Share this article

About Author

Madhu