Print this page

ಕೆ.ಆರ್.ಪೇಟೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಸಾರ್ವಜನಿಕರ.ಪುರಸಭೆ ಮುಂದೆ ಪ್ರತಿಭಟನೆ.

ಕೆ.ಆರ್.ಪೇಟೆ ಮತ್ತು ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಹೆದರಿದ ಜನಸಾಮಾನ್ಯರ.ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆಯ ಎಚ್ಚರಿಕೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ   ಹಾವಳಿ ಹೆಚ್ಚಾಗಿ ಹೊಸಹೊಳಲು ಗ್ರಾಮದ ಪಿಗ್ಮಿ ಕಲೆಕ್ಟರ್ ರಾಜು ಅವರ ಪುತ್ರನಿಗೆ, ಹೂವು ಮಾರುವ ಕಮಲಮ್ಮಗೆ, ಧನಂಜಯ ಹಾಗೂ ರಾಮಯ್ಯ ಎಂಬುವವರಿಗೆ ನಾಯಿ ಕಡಿದ ಪರಿಣಾಮವಾಗಿ ಕೂಡಲೇ ನಾಯಿಗಳನ್ನು ಹಿಡಿದು ಮಕ್ಕಳನ್ನು ರಕ್ಷಣೆ ಮಾಡುವಂತೆ ರಾಜು ಮತ್ತು ಗೆಳೆಯರು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ಮಾಡಿದರು. ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆ  ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .ಕೂಡಲೇ ನಾಯಿಗಳನ್ನು ಹಿಡಿದು ಸಾರ್ವಜನಿಕರನ್ನು ರಕ್ಷಿಸುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಆಗ್ರಹಿಸಿದ್ದಾರೆ. 

Share this article

About Author

Madhu