Print this page

ಮೈಸೂರು ಬೆಂಗಳೂರು ಹೆದ್ದಾರಿ ರಸ್ತೆಯ ಮಂಜು ರೆಸಾರ್ಟ್ ಪಕ್ಕದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ಶ್ರೀರಂಗಪಟ್ಟಣದ ಮಂಜು ರೆಸಾರ್ಟ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆ ಯಾಗಿದೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಇರುವ ಮಂಜು ರೆಸಾರ್ಟ್ ಪಕ್ಕದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯ ವಯಸ್ಸು ಅಂದಾಜು 35ರಿಂದ 40 ವರ್ಷ ಮತ್ತು ಮೃತ ವ್ಯಕ್ತಿಯ ಕತ್ತಿನ ಭಾಗದಲ್ಲಿ ಯೇಸುವಿನ ಶಿಲುಬೆಯ ಚಿತ್ರದ ಹಚ್ಚೆ ಹಾಗೂ ಬಲಗೈ ಮೇಲೆ RC ಯಂದು ಹಚ್ಚೆ ಹಾಕಲಾಗಿದೆ .

ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಮೃತ ದೇಹವು ಮೈಸೂರಿನ ಕೃಷ್ಣ ರಾಜ ಆಸ್ಪತ್ರೆಯ ಶವಾಗರಕ್ಕೆ ರವಾನಿಸಲಾಗಿದೆ.ಹೆಚ್ಚಿನ ವಿವರಗಳಿಗೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿಯನ್ನು ಪಡೆಯಲು ತಿಳಿಸಿದ್ದಾರೆ

Last modified on 04/08/2018

Share this article

About Author

Madhu