Print this page

ಮಳವಳ್ಳಿಯಲ್ಲಿ ಆರೋಗ್ಯ ವಂತ ಮಗು ಸ್ಪರ್ಧೆ.

ವಿದ್ಯಾ ಎಜುಕೇಷನ್ ಟ್ರಸ್ಟ  ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯ ವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ ಕಾರ್ಯಕ್ರಮ

ಮಳವಳ್ಳಿ:ಮಳವಳ್ಳಿ ಪಟ್ಟಣದಲ್ಲಿ ವಿದ್ಯಾ ಎಜುಕೇಷನ್ ಟ್ರಸ್ಟ  ಹಾಗೂ ತತ್ವ ಪ್ರೀ ಸ್ಕೂಲ್ ವತಿಯಿಂದ ಆರೋಗ್ಯವಂತ ಮಗು ಸ್ಪರ್ಧೆ ಮತ್ತು ತತ್ವ ದಿನಾಚರಣೆ  ಕಾರ್ಯಕ್ರಮ ನಡೆಸಲಾಯಿತು.ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ನಡೆದ  ಕಾರ್ಯಕ್ರಮವನ್ನು   ಮಕ್ಕಳತಜ್ಞ ವೈದ್ಯ ಡಾ.ಮಂಜುನಾಥ ಉದ್ಘಾಟಿಸಿ ಮಾತನಾಡಿ, ಮಗು ಆರೋಗ್ಯ ವಾಗಿರ ಬೇಕಾದರೆ ತಾಯಿಯೂ ಪೌಷ್ಠಿಕಾಂಶದ ಆಹಾರವನ್ನು ಹೇಗೆ ಸೇವಿಸಬೇಕು. ಮಗುವಿಗೆ ಯಾವ ಆಹಾರವನ್ನು ಸೇವಿಸಿದರೆ ಆರೋಗ್ಯವಾಗಿರುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು .ಇದೇ ಸಂದರ್ಭದಲ್ಲಿ  ವಿದ್ಯಾ ಎಜುಕೇಷನ್ ಟ್ರಸ್ಟ್ ನ ಮುಖ್ಯಸ್ಥೆ ವಿದ್ಯಾಚಂದ್ರಮೋಹನ್ ರವರು  ಮಕ್ಕಳನ್ನು  ಮಾಡ್ರನ್ ರೀತಿ ತಯಾರು ಮಾಡಬೇಕಾಗಿದೆ.  ಎಲ್ಲಾ ಶಾಲೆಗಳಲ್ಲಿಯೂ  ಹೊಸಮಾದರಿ ವಿದ್ಯಾಭ್ಯಾಸವನ್ನು ನೀಡಬೇಕು ಜೊತೆಗೆ ದಿನ ನಿತ್ಯದಲ್ಲಿ ಹೇಗೆ ಇರಬೇಕು ಎಂದು ತಿಳಿಸಿಕೊಡಬೇಕು ಎಂದರು  ಇದೇ ಸಂದರ್ಭ ದಲ್ಲಿ ತತ್ವ ಶಾಲಾ ಮಕ್ಕಳು ನೃತ್ಯ ಹಾಡುವ‌ಮೂಲಕ ರಂಜಿಸಿದರು.

ಕಾರ್ಯಕ್ರಮ ದಲ್ಲಿ ವಿದ್ಯಾಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೊಹನ್  ಸೇರಿದಂತೆ ಹಲವರು ಇದ್ದರು.

 

Share this article

About Author

Madhu