Print this page

ಅಡಕೆ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದಾ ಗ್ರಾಮಸ್ಥರು.

 ಅಡಕೆ ಕದಿಯಲು ಬಂದಿದ್ದ ಕಳ್ಳನೊಬ್ಬನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದಾ ಗ್ರಾಮಸ್ಥರು ಹೊಸಹೊಳಲು ಗ್ರಾಮದ ಚಂದ್ರ ಸಿಕ್ಕಿಬಿದ್ದಿರುವ ಕಳ್ಳ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಡಿಕೆ ಕದಿಯುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದರು.ಹೊಸಹೊಳಲು ಗ್ರಾಮದ ಯುವಕ ಚಂದು(23) ಅಡಿಕೆ ಕದಿಯುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಕೊಂಡು, ಕಂಬಕ್ಕೆ ಕಟ್ಟಿಸಿಕೊಂಡವನು. ಜತೆಯಲ್ಲಿದ್ದ ಈತನ ಸ್ನೇಹಿತರು ಗುಂಡ ಮತ್ತು ಹೇಮಂತ್ ಸೇರಿದಂತೆ ಇತರರು ತಪ್ಪಿಸಿಕೊಂಡು ತಲೆಮರಿಸಿಕೊಂಡಿದ್ದಾರೆ.

ಗ್ರಾಮದಲ್ಲಿ ತಡ ರಾತ್ರಿ ಹೊಸಹೊಳಲು ಗ್ರಾಮದ ಚಂದು ತನ್ನ ಸ್ನೇಹಿತರಾದ ಹೇಮಂತ, ಗುಂಡ ಸೇರಿದಂತೆ ಇತರರೊಂದಿಗೆ ಆಫೆ ಆಟೋವನ್ನು ತೆಗೆದುಕೊಂಡು ವಿರೇಶ್ ಎಂಬುವರ ಮನೆಯ ಅಡಿಕೆ ಗೋದಾಮಿನಲ್ಲಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಗೋಧಾಮಿನಲ್ಲಿ ಸದ್ದು ಕೇಳಿಸಿದ ಪರಿಣಾಮ ವೀರೇಶ್ ಮತ್ತು ಕುಟುಂಬ ಸದಸ್ಯರು ಎಚ್ಚರಗೊಂಡು ಬಂದು ಕಳ್ಳತನ ಮಾಡುತ್ತಿದ್ದ ಚಂದುನನ್ನು ಹಿಡಿದಿದ್ದಾರೆ. ಉಳಿದವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಬಂದು ಚಂದುನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಎಸ್ಐ ಆನಂದ್ ಗೌಡ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಪರಾರಿಯಾಗಿರುವ ಕಳ್ಳರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಹಳೇ ಸ್ಟೇಟ್ ಬ್ಯಾಂಕ್ ಬಳಿಯಿರುವ ನಾಗಣ್ಣ, ಮಾರಿಗುಡಿ ಬಳಿಯಿರುವ ಸತೀಶ್ ಎಂಬುವರ ಮನೆ ಬಳಿಯ ಅಡಿಕೆ ಗೋದಾಮಿನಲ್ಲಿ ಕಳ್ಳತನವಾಗಿತ್ತು. ವಿರೇಶ್ ಮನೆ ಬಳಿ ಕಳ್ಳತನದ ಸಮಯದಲ್ಲಿ ಸಿಕ್ಕಿರುವ ಕಳ್ಳರ ತಂಡವೇ, ಆ ಎರಡು ಕಳ್ಳತನವನ್ನು ಮಾಡಿರುವುದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ವಿರೇಶ್ ಮನೆಯಲ್ಲಿ ಸಿಸಿ ಕ್ಯಾಮಾರಾವಿದ್ದು ಪೊಲೀಸರು ಸಿಸಿ ಕ್ಯಾಮಾರವನ್ನು ತನಿಖೆಗೆ ಬಳಸಿಕೊಳ್ಳುತ್ತಿದ್ದಾರೆ. ಈಗ ಚಂದು ಪೊಲೀಸರ ವಶದಲ್ಲಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಗ್ರಾಮದಲ್ಲಿ ಚಂದು ತನ್ನ ಗ್ರಾಮದವರೇ ಆದ ಗುಂಡಾ ಮತ್ತು ಹೇಮಂತ್​ ಎಂಬುವರ ಜತೆಗೂಡಿ ಅಡಕೆ ಕದಿಯುತ್ತಿದ್ದ. ಅದರಂತೆ ಚಂದು ಮತ್ತಾತನ ಸಹಚರರು ಎರಡು ಬೈಕ್​ಗಳು ಮತ್ತು ಒಂದು ಆಪೆ ಆಟೋದೊಂದಿಗೆ ಶುಕ್ರವಾರ ತಡರಾತ್ರಿ ಬೂಕನಕೆರೆ ಗ್ರಾಮದಲ್ಲಿ ಅಡಕೆ ಕದಿಯಲು ಬಂದಿದ್ದರು. ವೀರೇಶ್ ಎಂಬುವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದಾಗ ನಿದ್ದೆಯಿಂದೆದ್ದ ವೀರೇಶ್​ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಆಗ ಚಂದು ಸಿಕ್ಕಿಬಿದ್ದರೆ, ಉಳಿದಿಬ್ಬರು ಕತ್ತಲಲ್ಲಿ ಓಡಿ ಪರಾರಿಯಾದರು ಎನ್ನಲಾಗಿದೆ.

ಈ ತಂಡ ಹಿಂದೆ ಎರಡು ಬಾರಿ ವೀರೇಶ್​ ಅವರ ಮನೆಯ ಗೋದಾಮಿನಲ್ಲಿ ಕಳ್ಳತನ ಮಾಡಿತ್ತು. ಆದರೆ, ಮೂರನೇ ಬಾರಿ ಕಳ್ಳತನ ಮಾಡಲು ಬಂದಾಗ ಅದೃಷ್ಟ ಕೈಕೊಟ್ಟಿತು ಎನ್ನಲಾಗಿದೆ. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಚಂದುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

Share this article

About Author

Madhu