Print this page

ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ.

ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ.

ಮಳವಳ್ಳಿ: ಮಳವಳ್ಳಿ ಪಟ್ಟಣದ ಕೋಟೆಯ ತ್ಯಾಗರಾಜ ರಸ್ತೆಯಲ್ಲಿರುವ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶಾಖಾ ಮಠವಾದ ಶ್ರೀ ಶಂಕರ ಮಠದ ಆವರಣದಲ್ಲಿ ಪುನರುಜ್ಜೀವನಗೊಳಿಸಿರುವ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯವನ್ನು ಮತ್ತು ಭಕ್ತ ಮಹಾಶಯರ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ಶಂಕರ ಮಠದ ಕಟ್ಟಡವನ್ನು ಧನಗೂರು ಮಠದ ಶ್ರೀ ಷ ಬ್ರ ಶ್ರೀ ಮುಮ್ಮಡಿ ಷಡಕ್ಷರದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದಲ್ಲದೆ ಶಂಕರ ಮಠದ ಆವರಣದಲ್ಲಿ ಹೋಮಹವನ‌ವನ್ನು ನಡೆಸಲಾಯಿತು ಪ್ರಾತ:ಕಾಲ ಮೂರ್ತಿ ಪ್ರತಿಷ್ಠಾಪನೆ ಕಲಶಾರೋಹಣ ಕಾರ್ಯಕ್ರಮ‌ನಡೆಸಲಾಯಿತು ಕೆ.ಎಂ ದೊಡ್ಡಿ ಶಿವಪಾರ್ವತಿ ಮಹಿಳೆಯರ ತಂಡದಿಂಧ ಭಜನಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆಸಲ್ಲಿಸಿದರು ಆಗಮಿಸಿದ ಭಕ್ತರಿಗೆ ಮಠವತಿಯಿಂದ ಪ್ರಸಾದವಿನಿಯೋಗ ಮಾಡಲಾಗಿತ್ತು.

 

Share this article

About Author

Madhu