Print this page

ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಅನ್ನದಾತರ ಪ್ರತಿಭಟನೆ.

ಭತ್ತ ಖರೀದಿ ಕೇಂದ್ರ ತೆರೆವಂತೆ ಒತ್ತಾಯಿಸಿ  ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ. ಮಳವಳ್ಳಿ ತಹಸೀಲ್ದಾರ್ ಕಚೇರಿ ಮುಂದೆ  ಪ್ರತಿಭಟನೆ ನಡೆಸಲಾಯಿತು.  

 ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ  ಭತ್ತ ಖರೀದಿ ಕೇಂದ್ರ  ತೆರೆವಂತೆ ಒತ್ತಾಯಿಸಿ  ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ  ಪ್ರತಿಭಟನೆ ನಡೆಸಲಾಯಿತು ಪ್ರತಿಭಟನಾಕಾರರು  ಸರ್ಕಾರ ವಿರುದ್ದ ಘೋಷಣೆ ಕೂಗಿದ್ದರು.  ರೈತನೊಬ್ಬ ಸ್ಥಳೀಯ ಶಾಸಕರು ರೈತರ ಮೇಲೆ ಕಾಳಜಿ ಇಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯದವರೆಗೂ ಪ್ರತಿಭಟನಾ ಸ್ಥಳಕ್ಕೆ ಬರದಿದ್ದ ಕಾರಣ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನಿಸಿದರು ಈ ಸಂದರ್ಭದಲ್ಲಿ. ಪೊಲೀಸರು ಹಾಗೂ ಪ್ರತಿಭಟನಾಕಾರ ನಡುವೆ  ಮಾತಿನ ಚಕಮುಕಿ ನಡೆಯಿತು ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರಮೇಶ್ ರವರು ಶಾಂತಿಯುತ ಪ್ರತಿಭಟನೆ ಮಾಡಿ  ಬೀಗ ಹಾಕಲು ಯತ್ನಿಸಿದರೆ ಕಾನೂನು ರೀತಿ ನಿಮ್ಮ ಮೇಲೆ ಕೇಸು ಹಾಕಬೇಕಾಗುತ್ತದೆ ಎಂದಾಗ. ಪ್ರತಿಭಟನಾಕಾರರು  ರೈತರಿಗೆ ಭತ್ತ ಖರೀದಿ ಮಾಡುತ್ತೇನೆ ಎಂದು ನೊಂದಾಣಿ ಮಾಡಿಸಿಕೊಂಡ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಾಗೂ  ಮುಖ್ಯಮಂತ್ರಿಗಳ ನಮಗೆ ವಂಚನೆ ಮಾಡಿದ್ದಾರೆ ಅವರ ಮೇಲೆ 420 ಕೇಸು ಹಾಕಿ  ಎಂದಾಗ. ದೂರು ನೀಡಿ ಕೇಸು ಹಾಕುತ್ತೇನೆ ಎಂದರು. ಇದೇ ಸಮಯಕ್ಕೆ  ಪ್ರತಿಭಟನಾ  ಸ್ಥಳಕ್ಕೆ ತಹಸೀಲ್ದಾರ್ ಚಂದ್ರಮೌಳಿ ಬೇಟಿ ಮನವೊಲಿಕೆ ಯತ್ನಿಸಿದರು. ಸ್ಥಳದಲ್ಲೇ ಭತ್ತ ಖರೀದಿಸಲು ಪ್ರತಿಭಟನಾಕಾರ ಒತ್ತಾಯ ಮಾಡಿದರು. ನಂತರ ಮಾತನಾಡಿದ ತಹಸೀಲ್ದಾರ್ ಚಂದ್ರಮೌಳಿ  ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಭೆಯೂ ನಡೆಯುತ್ತಿದೆ ಈಗಾಗಾಲೇ ಕಿರುಗಾವಲು ಗ್ರಾಮದಲ್ಲಿ ಭತ್ತ ಖರೀದಿಸಲು ಕೇಂದ್ರ ತೆರೆದಿದೆ ಇನ್ನೂ ಎರಡು ಮೂರು ದಿನಗಳಲ್ಲಿ ಇನ್ನೂ ಮೂರು ಕೇಂದ್ರಗಳನ್ನು ತೆರೆಯಲಾಗುವುದು ಎಂದರು.ನಂತರ ಈ ತಕ್ಷಣ ಭತ್ತವನ್ನು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಹಾಗೂ ಜೊತೆಗೆ ಒಬ್ಬ ರೈತರಿಗೆ 40 ಕ್ವೀಟಾಲ್ ಮಾತ್ರ ಭತ್ತ ಖರೀದಿಸಲು ಷರತ್ತುಯನ್ನು ವಾಪಸ್ಸು ಪಡೆಯಬೇಕು ಎಂದರು ಒತ್ತಾಯಿಸಿದರು. ಸರಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಹಸೀಲ್ದಾರ್ ತಿಳಿಸಿದ ನಂತರ. ಪತ್ರಿಭಟನಾಕಾರರು ಪ್ರತಿಭಟನೆ ಕೈಬಿಡಲಾಯಿತು.

 

Share this article

About Author

Madhu