Print this page

ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಂಗ ಗೀತೆಗಳ ಉತ್ಸವ ಕಾರ್ಯಕ್ರಮ.

ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 10ನೇ ವರ್ಷದ ರಂಗ ಗೀತೆಗಳ ಉತ್ಸವ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದಲ್ಲಿ ನಡೆಸಲಾಯಿತು.

ಮಳವಳ್ಳಿ:  ತಾಲ್ಲೂಕಿನ ಪೂರಿಗಾಲಿ ಗ್ರಾಮದ ಸ ಹಿ ಪ್ರಾ.ಶಾ ಆವರಣದಲ್ಲಿ ನಡೆದ  ಕಾರ್ಯಕ್ರಮವನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯ ನಿವೃತ್ತ ಲೆಕ್ಕಾಧಿಕಾರಿಗಳಾದ ಶ್ರೀಯುತ ನಾಗರಾಜು ರವರು ಉದ್ಘಾಟಿಸಿದರು.ನಂತರ ಮಾತನಾಡಿದ ನಾಗರಾಜು ರವರು ಪ್ರಸ್ತುತ ದಿನಗಳಲ್ಲಿ ಚಿತ್ರೋಧ್ಯಮ.ಟಿ.ವಿ. ವ್ಯಾಟ್ಸಪ್.ಫೇಸ್ ಬುಕ್ ಮೊದಲಾದ ಮಾಧ್ಯಮಗಳಿಂದ ಗ್ರಾಮೀಣ ಕಲೆಗಳಾದ ರಂಗ ನಾಟಕ.ರಂಗ ಗೀತೆಗಳು.ಜಾನಪದ ಗೀತೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತೀರ ಕಡಿಮೆಯಾಗುತ್ತಿದೆ.ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವರ್ಗದ ಜನರು ಟಿ.ವಿ ಮತ್ತು ಚಲನಚಿತ್ರ ಮೊದಲಾದ ಮನರಂಜನೆ ಕಾರ್ಯಕ್ರಮಕ್ಕೆ ಆಕರ್ಷಿತರಾಗಿದ್ದಾರೆ .ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಈ ನಾಡಿನ ಗ್ರಾಮೀಣ ಕಲೆಗಳಾದ  ರಂಗಗೀತೆ.ಜಾನಪದ ಗೀತೆಗಳು ತುಂಬ ಕಡಿಮೆಯಾಗುತ್ತಿದೆ ಆದ್ದರಿಂದ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು  ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ವೆಂಕಟರಾಜು ರವರು ವಹಿಸಿದ್ದರು.ತಾ.ಪಂ.ಉಪಾಧ್ಯಕ್ಷ ಮಾಧು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮಣ್ಣಿ.ತಾ.ಪಂ.ಸದಸ್ಯೆ ಆಶಾ ಪ್ರಭುಸ್ವಾಮಿ.ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಜಯರಾಜು.ನಿವೃತ್ತ ಪ್ರಾಂಶುಪಾಲ ಮಂಚಯ್ಯ.ಡಾ.ಪ್ರಸಾದ್. ಮೊದಲಾದವರು ಉಪಸ್ಥಿತರಿದ್ದರು.

Share this article

About Author

Madhu