Print this page

ರಾಜ್ಯರಾಜಕಾರಣದ ಏರುಪೇರುಗಳಿಗ ತಲೆ ಕೆಡಿಸಿಕೊಳ್ಳಲ್ಲಾ .ಶಾಸಕ ಅನ್ನದಾನಿ.

ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ  ಏರುಪೇರುಗಳನ್ನು ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ರಾಷ್ಟ್ರದ ಹಾಗೂ ರಾಜ್ಯದ ನಾಯಕರುಗಳು ನೋಡಿಕೊಳ್ಳುತ್ತಾರೆ  ಎಂದು ಮಳವಳ್ಳಿ ಕ್ಷೇತ್ರ ಶಾಸಕ ಡಾ.ಅನ್ನದಾನಿ

 ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಗುದ್ದಲಿಪೂಜೆ ನೇರವೇರಿಸಿದ ನಂತರ  ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದ ರಾಜಕಾರಣ ನೋಡಿಕೊಳ್ಳಲು ರಾಷ್ಟ್ರದ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.  ಬಿಜೆಪಿ ಪಕ್ಷವೂ ಅಧಿವೇಶನ ಮುನ್ನ ಸರ್ಕಾರವನ್ನು ಉರುಳುತ್ತದೆ ಎಂದು ಹೇಳುತ್ತಿದೆ ಇದಕ್ಕೆ ನಿಮ್ಮ  ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಅದಕ್ಕೆ ಬಿಜೆಪಿ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುವ ಮೂಲಕ ಉತ್ತರಿಸಿದ್ದನ್ನು ನೋಡಿದರೆ ಅನುಮಾನ ವ್ಯಕ್ತವಾಗುತ್ತದೆ ಇನ್ನೂ ಇದಕ್ಕೂ ಮುನ್ನ 18 ಲಕ್ಷ ರೂ ವೆಚ್ಚದ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ ಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಈ ಭಾಗದ ಜನರು ಇನ್ನೂ ಮುಂದೆ ಒಂದು ಫಸಲು ಮಾತ್ರ ಭತ್ತ ಬೆಳೆಯಬೇಕಾಗುತ್ತದೆ ಈಗಾಗಲೇ ಕೆ.ಆರ್.ಎಸ್  ಅಣೆಕಟ್ಟು ಗೆ ಸಂಬಂಧಿಸಿದಂತೆ  ಮೂರುರಾಜ್ಯಗಳ ಸಮಿತಿ ರಚನೆಯಾಗಿದ್ದು ಈಗಾಗಲೇ ನೀರು ಹರಿಸಲು ಬೇರೆ ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಸಮ್ಮುನೆ ಬೆಳೆ ಬೆಳೆಸುತ್ತೇನೆ ಎಂಬ ಕನಸು ಕಾಣಬೇಡಿ ಎಂದರು.  ಈಗಾಗಲೇ ಕ್ಷೇತ್ರಕ್ಕೆ ಸಣ್ಣ ನೀರಾವರಿ ಸಚಿವರ ಜೊತೆ ಚರ್ಚೆಮಾಡಿ ಕೆರೆಕಟ್ಟೆಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇನ್ನೂ ಕಿರುಗಾವಲು ಸಂತೆಮಾಳದಲ್ಲಿ  ಸುಂದರವಾದ  ಹಾಗೂ ಮಾದರಿ ಬಸ್ ನಿಲ್ದಾಣ ಮಾಡುವುದಾಗಿ ಭರವಸೆ ನೀಡಿದರು.     

ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರವಿ, ಎಸ್ ಸಿ/ಎಸ್ ಡಿ ಅಧ್ಯಕ್ಷ  ನಂಜುಂಡುಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ರೇಖಾಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಇಇ ಹೆಚ್.ಎಂ ಮಹದೇವಪ್ಪ, ಸಹಾಯಕ ಇಂಜಿನಿಯರ್ ಸೋಮ , ಆನಂದ್ ಕಲ್ಕುಣಿ  ಸೇರಿದಂತೆ ಮತ್ತಿತ್ತರು ಇದ್ದರು

 

Share this article

About Author

Madhu