Print this page

ಮಳವಳ್ಳಿ ಕ್ಷೇತ್ರದ ಅಭಿವೃದ್ದಿ ಗೆ 1300 ಕೋಟಿ ಅನುದಾನ ಸುಳ್ಳು... ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ಆರೋಪ..

 ಮಂಡ್ಯದಲ್ಲಿ ನಾಳೆ ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮ ದಲ್ಲಿ ಮಳವಳ್ಳಿ ಕ್ಷೇತ್ರದ ಅಭಿವೃದ್ದಿ ಗೆ 1300 ಕೋಟಿ ಅನುದಾನ ಕಾಮಗಾರಿ  ಮಾಡುತ್ತಿರುವುದು ಡೋಳ್ಳು  ಹಾಗೂ ಸಣ್ಣತನದ ರಾಜಕೀಯವನ್ನು ಶಾಸಕರು ಮಾಡುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ. 

ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು ನಾಳೆ ನಡೆಯಲಿರುವ ಈ ಕ್ಷೇತ್ರ ಕಾಮಗಾರಿಯೂ ಬಹುತೇಕ ಶೇ 80 ಭಾಗ ಈಗಾಗಲೇ ಶಂಕುಸ್ಥಾಪನೆಯಾಗಿದ್ದು  ಮತ್ತೆ ಅದನ್ನೇ ಇನ್ನೊಂದು ಬಾರಿ  ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿ ಗಳಿಗೆ ಶೋಭೆತರುವುದಿಲ್ಲ ಎಂದರು. ಇನ್ನೂ ಶಾಸಕರಿಗೆ ಡಿಪಿಆರ್ ಎನ್ನುವ ಅರ್ಥವೇ ಗೊತ್ತಿಲ್ಲದ ರೀತಿ ನಡೆದುಕೊಳ್ಳುತ್ತಿದ್ದಾರೆ ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್ ಎಂದು ಹಲಗೂರು ಹೋಬಳಿಗೆ ನೀರಾವರಿ ಯೋಜನೆಗೆ 600 ಕೋಟಿ ರೂ ಯೋಜನೆ ಡಿ.ಪಿ.ಆರ್ ಹಂತದಲ್ಲಿದೆ ಎಂದು ಹೇಳಿದ್ದು ಅದನ್ನು ಚಾಲನೆ ಮಾಡುವುದಾಗಿ ಜನತೆಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ . ಇದಲ್ಲದೆ ಲೋಕೋಪಯೋಗಿ ಇಲಾಖೆಯಲ್ಲಿ ಕ್ಷೇತ್ರಕ್ಕೆ ರಸ್ತೆಗೆ 111ಕೋಟಿ ಹಣ ಬಿಡುಗಡೆ  ಎಂದು ಹೇಳಿದ್ದಾರೆ  ಯಾವ ರಸ್ತೆ ಗೆ ಎಂಬುದು ಇದಕ್ಕೆ ಅಪ್ರುವಲ್  ತೆಗೆದುಕೊಂಡಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿ ದರು. ಇನ್ನೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ  ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನನಗೂ ಸಹ ಕಾರ್ಯಕ್ರಮದ ಅಹ್ವಾನ ಪತ್ರಿಕೆ ನೀಡಲಿಲ್ಲ ಎಂದು ಆರೋಪಿಸಿದರು ಹೆಸರಿಗೆ ದೋಸ್ತಿ ಸರ್ಕಾರ ಎಂದು ಹೇಳುವ ಇವರು ದೋಸ್ತಿ ಗಳಾದ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಾಧು, ಪುರಸಭೆ ಸದಸ್ಯ ಕಿರಣ್ ಶಂಕರ್, ಡಿ.ಶಿವಕುಮಾರ್,ಮೆಕದೂಬ್ ಪಾಷ, ದೊಡ್ಡಯ್ಯ,  ತಾ.ಪಂ ಮಾಜಿ ಅದ್ಯಕ್ಷ ಕುಂದೂರುಪ್ರಕಾಶ,ಬಸವರಾಜು ಸೇರಿದಂತೆ ಮತ್ತಿತ್ತರು ಇದ್ದರು.

Share this article

About Author

Madhu