Print this page

ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ಅವಿರೋಧವಾಗಿ ಆಯ್ಕೆ.

ಮಳವಳ್ಳಿತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು

ಮಳವಳ್ಳಿ: ತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು .ಹಿಂದೆ ಇದ್ದ ಶಿವಮ್ಮರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ತಿಂಗಳಗಳಿಂದ ತೆರುವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾಲ್ಲೂಕು ಪಂಚಾಯಿತಿ ಇಒ ಹಾಗೂ ಚುನಾವಣಾಧಿಕಾರಿ ಸತೀಸ್ ರವರು ಚುನಾವಣೆ ನಿಗಧಿ ಪಡಿಸಿದ್ದರು.  ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಗಿದ್ದು   ಒಟ್ಟು 20 ಸದಸ್ಯರ ಪೈಕಿ ಜಯಲಕ್ಷ್ಮಿ ನಾಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು . ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಸತೀಸ್ ರವರು ಜಯಲಕ್ಷ್ಮಿ ನಾಗರಾಜು ರವರು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿ.ಪಂಸದಸ್ಯರು ತಾಲ್ಲೂಕುಪಂಚಾಯಿತಿ ಉಪಾಧ್ಯಕ್ಷ ಮಾಧು ,ಮುಖಂಡ ಚನ್ನಪಿಳ್ಳೆಕೊಪ್ಪಲುಸಿದ್ದೇಗೌಡರು ಸೇರಿದಂತೆ ಗ್ರಾಮದ ಮುಖಂಡರು ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿದರು.

Share this article

About Author

Madhu