Print this page

ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮೂರು ದಿನಗಳ ತರಬೇತಿ ಕಾರ್ಯಾಗಾರ.

 ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಬಿ.ಆರ್.ಸಿ.ಕೇಂದ್ರದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ತಹಶಿಲ್ದಾರ್  ಶಿವಮೂರ್ತಿ ರವರು  ಮುಖ್ಯ ತರಬೇತಿದಾರರು ಬೋಧಕರಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲು ತಾವು ಸಂಪನ್ಮೂಲ ಶಿಕ್ಷಕರಾಗಿ ಉತ್ತಮವಾದ ಅಂಶಗಳನ್ನು ತರಬೇತಿಯ ಸಮಯದಲ್ಲಿ ಪಡೆದುಕೊಂಡು ಅವುಗಳನ್ನು ವ್ಯವಸ್ಥಿತವಾಗಿ ಮತ್ತು ಸೂಕ್ತ ವಾತಾವರಣದಲ್ಲಿ ಬೋಧಕರಿಗೆ ತರಬೇತಿ ನೀಡಿ. ಗ್ರಾಮ ಮಟ್ಟದಲ್ಲಿ  ಅನಕ್ಷರಸ್ಥರಿಗೆ ಒಳ್ಳೆಯ ಕಲಿಕಾ ವಾತಾವರಣ ನಿರ್ಮಿಸಿ ಅವರ ಬಿಡುವಿನ ವೇಳೆಯಲ್ಲಿ ಕಲಿಕೆ ಮಾಡಿಸುವ ಮೂಲಕ ಅವರನ್ನು ನವ ಸಾಕ್ಷರರನ್ನಾಗಿ ಮಾಡಿ ಅವರನ್ನು  ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನೂ  ತೃಪ್ತಿಕರವಾಗಿ ನಿರ್ವಹಿಸಬೇಕು, ಆ ಮೂಲಕ ಸಂಪೂರ್ಣ ಸಾಕ್ಷರತೆಯ ಗ್ರಾಮವಾಗಲು ಗಮನ ಹರಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಜಿಲ್ಲಾ ಲೋಕಶಿಕ್ಷಣ ಸಮಿತಿಯ ಸದಸ್ಯ ಅಂ.ಚಿ. ಸಣ್ಣಸ್ವಾಮಿಗೌಡ. ಕ್ಷೇತ್ರ ಸಮನ್ವಯಾಧಿಕಾರಿ. ಲಿಂಗರಾಜು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಪಿ.ಜೆ.ವೆಂಕಟರಾಮು. ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಮತ್ತು ಪಾಂಡವಪುರ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ರಾಘವೇಂದ್ರ. ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು.

Share this article

About Author

Madhu